Breaking News

ಚುನಾವಣಾ ಸಮಯದಲ್ಲಿ ಚೆಕ್ ಪೋಸ್ಟ್ ತಪಾಸಣೆ ; ವ್ಯಾಪಾರಕ್ಕಾಗಿ ಅಥವಾ ಆಸ್ಪತ್ರೆ ಓಡಾಟಕ್ಕೆ ನಗದು ಕೊಂಡೊಯ್ಯಲು ಸಮಸ್ಯೆ…

ಧ್ವನಿ.. ಪ್ರತಿಧ್ವನಿ ವಿಶೇಷ. ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ

  ರಾಜ್ಯದಲ್ಲಿ ಚುನಾವಣೆ ಬಂತೆಂದರೆ ಸಾಕು ಏನೆಲ್ಲಾ ಹೊಸ ವ್ಯವಸ್ಥೆ ಜಾರಿಯಾಗಿಬಿಡುತ್ತದೆಂದರೆ. ಕೆಲವು ಕೆಲಸ ಕಾರ್ಯಗಳಿಗೆ ಕಡಿವಾಣ ಬೀಳುತ್ತದೆ. ಅದು ಅನಿವಾರ್ಯವು ಆಗಿರುತ್ತದೆ. ಚುನಾವಣೆಯಲ್ಲಿ ಅಕ್ರಮ ನಡೆಸಲು ಹಣ, ಹೆಂಡ, ಉಡುಗೆ, ಕೊಡುಗೆಗಳು ಸರಬರಾಜಾಗದಂತೆ ತಡೆಯಲು ಪ್ರತಿ ಊರಿನ ಪ್ರಮುಖ ಪ್ರವೇಶ ಸ್ಥಳಗಳಲ್ಲಿ ತಪಾಸಣಾ ಕೇಂದ್ರ ನಿರ್ಮಿಸಿ ಕಟ್ಟುನಿಟ್ಟಿನ ತಪಾಸಣೆ ಮಾಡುತ್ತಾರೆ. ಈ ಸಂದರ್ಭದಲ್ಲಿ ದಾಖಲೆ ಇಲ್ಲದೆ ಸಾಗಿಸುವ ನಗದು ಹಿಡಿಯುತ್ತಿರುವುದರಿಂದ ಸಾಮಾನ್ಯ ವ್ಯಾಪಾರಸ್ಥರಿಗೆ ಅಥವ ಆರೋಗ್ಯ ವಿಚಾರಕ್ಕಾಗಿ ಆಸ್ಪತ್ರೆ ಓಡಾಟ ನಡೆಸುತ್ತಿರುವವರಿಗೆ ಸಮಸ್ಯೆ ಎದುರಾಗಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಈ ಕುರಿತು ಚುನಾವಣ ಆಯೋಗ ಸಮಸ್ಯೆ ಸರಳೀಕರಿಸಲು ಮರ್ಗೋಪಾಯ ಸೂಚಿಸಬೇಕಿದೆ ಎಂಬುದು ಸಾರ್ವಜನಿಕ ಅಭಿಪ್ರಾಯವಾಗಿದೆ.


ಯಲ್ಲಾಪುರದಂತಹ ತಾಲೂಕು ಕೇಂದ್ರದಲ್ಲಿ ಇರುವಂತಹ ಅಂಗಡಿ ಮುಗ್ಗಟ್ಟುಗಳಿಗೆ ಪಕ್ಕದ ಹುಬ್ಬಳ್ಳಿ ಬೆಳಗಾವಿ ಕಡೆಯಿಂದ ಮತ್ತು ಹೊರ ರಾಜ್ಯಗಳಿಂದ ದಿನಸಿ, ಬಟ್ಟೆ, ಕಟ್ಟಡ ನಿರ್ಮಾಣ ಸಾಮಾಗ್ರಿಗಳು ಹಾಗು ಇನ್ನಿತರ ಸಾಮಾಗ್ರಿಗಳನ್ನು ತಂದು ವ್ಯಾಪಾರ ಮಾಡುತ್ತಾರೆ ಅದರ ಹಣದ ವಸೂಲಿಗಾಗಿ ವಾರದಲ್ಲಿ ಹಲವು ಬಾರಿ ಬಂದು ವಸೂಲಿ ಮಾಡಿಕೊಂಡು ಹೊರಡುತ್ತಾರೆ ಈ ವೇಳೆ ಚೆಕ್ ಪೊಸ್ಟ್ ನಲ್ಲಿ ತಪಾಸಣೆ ಮಾಡಿದರೆ ಆಗ ಎಷ್ಟೇ ಹಣ ಸಿಕ್ಕರು ಅದಕ್ಕೆ ದಾಖಲೆ ಇಲ್ಲದೆ ಹೊದರೆ ಅಷ್ಟೇ ಕತೆ.


ಇನ್ನು ಅತ್ಯಂತ ಪ್ರಮುಖ ಸಮಸ್ಯೆ ಎಂದರೆ ದೂರದ ಊರುಗಳಲ್ಲಿ ಆರೋಗ್ಯ ಸಂಬAಧ ಯಾರನ್ನಾದರೂ ದಾಖಲಿಸಿದ್ದರೆ ಅವರÀ ಖರ್ಚುವೆಚ್ಚಕ್ಕಾಗಿ ಹಣದ ಅವಶ್ಯಕತೆ ಇದ್ದು ದನ್ನು ಕೊಂಡೊಯ್ಯುತ್ತಿದ್ದರೆ ತಪಾಸಣೆ ಕೇಂದ್ರದಲ್ಲಿ ತಡೆದು ಆ ಹಣಕ್ಕೆ ದಾಖಲೆ ಕೇಳಿದರೆ ಸಕಾಲಕ್ಕೆ ತರುವುದಾದಾರು ಹೇಗೆ ಅಥವ ದಾಖಲೆಯ ಹುಡುಕಾಟದಲ್ಲಿ ಆಸ್ಪತ್ರೆಯಲ್ಲಿ ಇರುವ ಪೇಷಂಟ್ ಕತೆ ದೇವರೇ ಗತಿ.


ಹಾಗೆಂದು ಅಕ್ರಮ ತಡೆಯಬಾರದೆಂದು ಹೇಳುತ್ತಿಲ್ಲ, ಅಕ್ರಮ ತಡೆದು ಪಾರದರ್ಶಕ ನ್ಯಾಯಸಮ್ಮತ ಚುನಾವಣೆ ನಡೆಯಬೇಕಿದೆ. ಅದೇ ಸಮಯಕ್ಕೆ ನಗದು ಜಪ್ತಿ ವಿಚಾರದಲ್ಲಿ ಕೊಂಚ ಚಿಂತನೆ ಮಾಡಿ ವ್ಯಾಪಾರಸ್ಥರು ಹಾಗು ಆಸ್ಪತ್ರೆ ಸಂಬಂದಿಸಿದ ವಿಚಾರಗಳಿಗೆ ಸರಳ ಮಾರ್ಗೋಪಾಯಗಳನ್ನು ನೀಡಬೇಕಿದೆ ಎಂಬುದು ಹಲವರ ಅನಿಸಿಕೆಯಾಗಿದೆ.


ಚುನಾವಣಾ ಸಂದರ್ಭದಲ್ಲಿ ಕಟ್ಟುನಿಟ್ಟಿನ ತಪಾಸಣೆ ಮಾಡಬೇಕಿರುವುದು ಸೂಕ್ತವಿದೆ. ಆದರೆ ನಿತ್ಯ ವ್ಯಾಪಾರ ಮಾಡುವವರು ಆರೋಗ್ಯ ಸಂಬAಧ ಆಸ್ಪತ್ರೆಗೆ ಅಲೆಯುವವರು, ಇನ್ನಿತರೆ ವ್ಯಾವಹಾರಿಕ ವಿಚಾರಕ್ಕೆ ಸಂಚರಿಸುವವರ ಬಳಿ ಹಣವಿರುವುದು ಸಹಜ, ಕೆಲವೊಮ್ಮೆ ಅವಕ್ಕೆಲ್ಲಾ ದಾಖಲೆ ಒದಗಿಸಬೇಕು ಎಂದಾದರೆ ಸಾಕಷ್ಟು ಸಮಯ ಬೇಕಾಗುತ್ತದೆ. ಆ ವೇಳೆಗೆ ಆಸ್ಪತ್ರೆಯ ವಿಚಾರವಾದರೆ ರೋಗಿಯ ಸ್ಥಿತಿಯೇನು? ವ್ಯಾವಹಾರಿಕ ವಿಚಾರವಾದರೆ ಅದನ್ನೇ ನಂಬಿ ಬದುಕು ನಡೆಸುವ ಅಂಗಡಿಗಳ ಕಥೆ ಏನು? ಇದಕ್ಕೆಲ್ಲಾ ಪರಿಹಾರ ಸೂಚಿಸಬೇಕಿದೆ. ಕನಿಷ್ಠ ಚುನಾವಣೆ ಮುಕ್ತಾಯವಾಗುವವರೆಗೂ ಆಯಾ ತಾಲೂಕಿನ ತಹಸೀಲ್ದಾರರ ಅನುಮತಿಯಲ್ಲಿ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹಣ ಕೊಂಡೊಯ್ಯಲು ಅನುಮತಿ ಪತ್ರ ನೀಡುವಂತಾದರೆ ಬಹಳ ಮಂದಿಗೆ ಸಹಾಯವಾಗಲಿದೆ. ನಂತರದಲ್ಲಿ ಅನುಮತಿ ಪಡೆದ ಹಣಕ್ಕೆ ದಾಖಲೆ ಒದಗಿಸುವುದು ಸಾರ್ವಜನಿಕರ ಕರ್ತವ್ಯವಾಗಲಿದೆ. ಈ ನಿಟ್ಟಿನಲ್ಲಿ ಸಂಬAಧಿಸಿದ ಅಧಿಕಾರಿಗಳು ಗಮನಹರಿಸಬೇಕಿದೆ ಎಂಬುದು ಹಲವು ವ್ಯಾಪಾರಸ್ಥರ ಮತ್ತು ಹುಬ್ಬಳ್ಳಿ, ಧಾರವಾಡ, ಮಣಿಪಾಲ, ಮಂಗಳೂರು, ಬೆಂಗಳೂರು ಹಾಗೂ ಇನ್ನಿತರೆ ಕಡೆಗಳಲ್ಲಿ ಆಸ್ಪತ್ರೆಗೆ ಓಡಾಡುವ ಸಾರ್ವಜನಿಕರ ಮಾತಾಗಿದೆ.

ಮತದಾನ ನಮ್ಮ ಹಕ್ಕು ತಪ್ಪದೆ ಮತ ಚಲಾಯಿಸಿ
ಸಂವಿಧಾನ ನೀಡಿರುವ ಪ್ರಜಾಪ್ರಭುತ್ವದ ಪರಮ ಪವಿತ್ರ ಹಕ್ಕು ಮತದಾನ ತಪ್ಪದೆ ಮತ ಚಲಾಯಿಸಿ
ಮತಚಲಾಯಿಸುವುದು ನಮ್ಮ ಹಕ್ಕು ಮತ್ತು ನಮ್ಮ ಕರ್ತವ್ಯ ತಪ್ಪದೆ ಮತದಾನ ಮಾಡಿ  ಪ್ರಜಾಪ್ರಭುತ್ವ ಗೌರವಿಸಿ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *