
ಪ್ರತಿಧ್ವನಿ ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣ ಪಂಚಾಯಿತಿ ನಿವಾಸಿಗಳಿಗೆ ಸಿಹಿ ಸುದ್ದಿ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಯಲ್ಲಾಪುರ ಪಟ್ಟಣದ ಸರ್ಕಾರಿ ಆಸ್ಪತ್ರೆ ಹಿಂಭಾಗದ ಹೆಬ್ಬಾರ ನಗರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಡಿ ಮಂಜೂರಾಗಿರುವ 579 (G+2) ಮನೆಗಳ ಪೈಕಿ 237 ಮನೆಗಳ ಹಂಚಿಕೆಗಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಒಂದು ಮನೆಯ ಘಟಕದ ವೆಚ್ಚ:-ರೂ. 8,13,204/- ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿದ ಯಲ್ಲಾಪುರ ನಿವಾಸಿಗಳು ಪಟ್ಟಣ ಪಂಚಾಯಿತಿ ಯಲ್ಲಾಪುರ ಕಛೇರಿಯಲ್ಲಿ ಅರ್ಜಿಗಳನ್ನು ಪಡೆದುಕೊಂಡು, ಅರ್ಜಿ ಜೊತೆಗೆ ಸಲ್ಲಿಸಬೇಕಾದ ದಾಖಲಾತಿಗಳೊಂದಿಗೆ, ಎಸ್‌ಸಿ/ಎಸ್‌ಟಿ ವರ್ಗದವರು ಪ್ರಾರಂಭಿಕ ವಂತಿಕೆಯ ಮೊತ್ತ ರೂ.81,320/- (10%) ಮತ್ತು ಇತರೆ ವರ್ಗದವರು ಪ್ರಾರಂಭಿಕ ವಂತಿಕೆಯ ಮೊತ್ತ ರೂ.1,21,981/- (15%) ಗಳನ್ನು KSDB PMAY-HFA 97134 Dus 129 ಈ ಹೆಸರಿಗೆೆ ಡಿ ಡಿ ಮುಖಾಂತರ ವಂತಿಕೆ ಭರಿಸಿ ಯಲ್ಲಾಪುರ ಪಟ್ಟಣ ಪಂಚಾಯ್ತಿಯಲ್ಲಿ ದಾಖಲಾತಿಗಳೊಂದಿಗೆ ದಿನಾಂಕ: 15.08.2023 ರಿಂದ 30.೦9.2023 ರವರೆಗೆ ಪಟ್ಟಣ ಪಂಚಾಯಿತಿ ಯಲ್ಲಾಪುರ ಕಛೇರಿ ಸಮಯದಲ್ಲಿ ಅರ್ಜಿ ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ: 30.10.2023 ರವರೆಗೆ ಸ್ವೀಕರಿಸಲಾಗುವುದು, ವಿಳಂಬವಾದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಹೆಚ್ಚಿನ ವಿವರಕ್ಕಾಗಿ ಯಲ್ಲಾಪುರ ಪಟ್ಟಣ ಪಂಚಾಯಿತಿ ಮತ್ತು ಕೊಳಗೇರಿ ಅಭಿವೃದ್ಧಿ ಮಂಡಳಿ ಉಪ ವಿಭಾಗವನ್ನು ಈ ಕೆಳಕಂಡ ದೂರವಾಣಿ ಸಂಖ್ಯೆಗೆ ಶ್ರೀ. ಸುನೀಲ ಗಾವಡೆ (ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯಿತಿ ಯಲ್ಲಾಪುರ) – 9986773995, ಕು. ರೇಷ್ಮಾ ಬಿರಾದಾರ (ಸೈಟ್ ಇಂಜಿನಿಯರ್) -9902635276, ಶ್ರೀ. ಪ್ರತೀಕ್ (ಸಹಾಯಕ ಅಭಿಯಂತರರು ಕ.ಕೊ.ಅ.ಮ ಉ.ವಿಭಾಗ ಕಛೇರಿ ಬೆಳಗಾವಿ)-7892031006, ಶ್ರೀ. ಬಿ.ಎಸ್. ಶಂಭುಲಿಂಗಪ್ಪ (ಕಾರ್ಯಪಾಲಕ ಅಭಿಯಂತರರು ಕ.ಕೊ.ಅ.ಮ ಉ.ವಿಭಾಗ ಕಛೇರಿ ಬೆಳಗಾವಿ)-೮೦೮೪೪೯೨೩೭೩ 8084492373 ಗೆ ಸಂಪರ್ಕಿಸಬಹುದಾಗಿದೆ. ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಹಾಯಕ ಕಾರ್ಯಪಾಲಕ ಅಭಿಯಂತರರು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಬೆಳಗಾವಿ ಉಪ ವಿಭಾಗ, ಬೆಳಗಾವಿ.
Prathidvani Yellapura