Breaking News

ಬಸ್ ಸಮಸ್ಯೆ ಹೇಳಿಕೊಳ್ಳಲು ಮಕ್ಕಳೆ ಡಿಪೋ ಮ್ಯಾನೇಜರ್ ಗೆ ಮನವಿ ನೀಡಿದ್ದು ವ್ಯವಸ್ಥೆ ನಾಚುವಂತಾಯ್ತು


ಪ್ರತಿಧ್ವನಿ ,ಯಲ್ಲಾಪುರ : ತಾಲ್ಲೂಕಿನ ಮದನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಯಲ್ಲಾಪುರ ಮುಂಡಗೋಡು ರಸ್ತೆಯಲ್ಲಿರುವ ಬೆಳಕೊಪ್ಪ ಎಂಬಲ್ಲಿ ಸುಮಾರು ಆರು ಮಕ್ಕಳು ಯಲ್ಲಾಪುರ ಪಟ್ಟಣದ ಶಾಲೆಗಳಲ್ಲಿ ವಿದ್ಯಾಭ್ಯಾಸಕ್ಕಾಗಿ ನಿತ್ಯವು ಬಸ್ ನಲ್ಲಿ ಸಂಚಾರ ಮಾಡುತ್ತಾರೆ ಆದರೆ ಇತ್ತೀಚೆಗೆ ಬಸ್ ನಿಲ್ಲಿಸದ ಪರಿಣಾಮ ವಿದ್ಯಾಭ್ಯಾಸಕ್ಕೆ ಅಡಚಣೆಯಾಗಿದೆ. ಮಕ್ಕಳ ಪೋಷಕರು ಮನವಿ ಮಾಡಿ ಅಧಿಕಾರಿಗಳಬಳಿ ಸಮಸ್ಯೆ ಹೇಳಿಕೊಂಡರು ಬಸ್ ನಿಲ್ಲಿಸದಿರುವುದನ್ನು ಕಂಡ ಮಕ್ಕಳು ಮಂಗಳವಾರ ಯಲ್ಲಾಪುರ ಡಿಪೋ ಮ್ಯಾನೇಜರ್ ಕಚೇರಿಗೆ ಶಾಲಾ ಸಮವಸ್ತ್ರದಲ್ಲಿ ಪಾಟಿಚೀಲದ ಸಹಿತ ಆಗಮಿಸಿ ಮನವಿ ಸಲ್ಲಿಸಿದ ಘಟನೆ ನಡೆದಿದೆ.


ಸಾರಿಗೆ ಸಂಸ್ಥೆ ವ್ಯವಸ್ಥೆಯೆ ನಾಚುವಂತೆ ಮಕ್ಕಳು ಶಾಲಾ ಸಮವಸ್ತ್ರದಲ್ಲೆ ವಿದ್ಯಾಭ್ಯಾಸದ ಅಡಚಣೆ ತಪ್ಪಿಸಲು ಸಂಚಾರಕ್ಕೆ ಬಸ್ ನಿಲ್ಲಿಸುವಂತೆ ಮನವಿ ಸಲ್ಲಿಸಿದ್ದು ವ್ಯವಸ್ಥೆ ನಾಚಿಕೆ ಪಡುವಂತಿತ್ತು.
ಬೆಳಕೊಪ್ಪದಲ್ಲಿ ಬಸ್ ನಿಲ್ದಾಣ ಇಲ್ಲ ನಿಲ್ದಾಣ ಬೇಕೆಂದರೆ ಕಿಲೋಮೀಟರ್ ಗಟ್ಟಲೆ ಸಾಗಬೇಕಾದ ಅನಿವಾರ್ಯತೆ ಇದೆ. ಚಿಕ್ಕ ಮಕ್ಕಳು ಅಷ್ಟು ದೂರ ಸಾಗುವುದು ಸಹ ಕಷ್ಟವಾಗಲಿದೆ ಈ ಹಿನ್ನೆಲೆಯಲ್ಲಿ ಮಕ್ಕಳ ಪೋಷಕರು ಮನವಿ ಮಾಡಿದರು ಪ್ರಯೋಜನವಾಗದೆ ಕೊನೆಗೆ ಮಕ್ಕಳೆ ರೊಚ್ಚಿಗೆದ್ದು ಮನವಿ ಸಲ್ಲಿಸಿದ್ದಾರೆ ಇನ್ನಾದರು ಸಮಸ್ಯೆ ಬಗೆಹರಿಯುತ್ತದ ಕಾದು ನೋಡಬೇಕಿದೆ.


ಬಸ್ ವ್ಯವಸ್ಥೆ ಸಮರ್ಪಕವಾಗಿರದೆ ಮಕ್ಕಳ ವಿಧ್ಯಾಭ್ಯಾಸಕ್ಕೆ ತೊಡಕಾಗಿದೆ. ಈ ಕುರಿತು ಅಧಿಕಾರಿಗಳಿಗೆ ಮತ್ತು ಚಾಲಕ ನಿರ್ವಾಹಕರಿಗೆ ಮೇಲಿಂದ ಮೇಲೆ ಸಮಸ್ಯೆ ಹೇಳಿಕೊಂಡರು ಪ್ರಯೋಜನವಾಗಲಿಲ್ಲ ಮಂಗಳವಾರ ಮತ್ತೆ ಅದೇ ಪುನರಾವರ್ತನೆಯಾದ ಹಿನ್ನೆಲೆಯಲ್ಲಿ ಶಾಲೆ ವಂಚಿತರಾದ ಮಕ್ಕಳು ಡಿಪೋ ಮ್ಯಾನೇಜರ್ ಅವರಿಗೆ ನೇರವಾಗಿ ಕಂಡು ಮನವಿ ಮಾಡಿದ್ದಾರೆ ನಮ್ಮ ಮನವಿಗೆ ಸರಿಹಣೊಗದ ಸಮಸ್ಯೆ ಮಕ್ಕಳ ಮನವಿಗೆ ಸರಿಹೋಗಬಹುದೇನೊ ಎಂಬ ಆಶಾ ಭಾವನೆ.
ಮಕ್ಕಳ ಪೋಷಕರು

ಯಲ್ಲಾಪುರ ಡಿಪೋ ಸರಹದ್ದಿನಲ್ಲಿರುವ ಎಲ್ಲಾ ವಿಭಾಗದಲ್ಲಿ ಇಂತಹ ಸಮಸ್ಯೆ ತಲೆದೂರಿಲ್ಲ ಆದರೆ ಈ ಒಂದು ಕಡೆ ಮಾತ್ರ ಸಮಸ್ಯೆ ಇದೆ ಈ ಕುರಿತು ಒಮ್ಮೆ ಪೋಷಕರು ಮನವಿ ಮಾಡಿದ್ದರು ಚಾಲಕ ಮತ್ತು ನಿರ್ವಾಹಕರಿಗೆ ಸ್ಪಷ್ಟ ನಿರ್ದೇಶನ ನೀಡಿದ್ದರು ಸಮಸ್ಯೆ ಪುನಾರಾವರ್ತನೆಯಾಗಿರುವ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ.
ಸಂತೋಷ ವರ್ಣೇಕರ್
ಯಲ್ಲಾಪುರ ಬಸ್ ಡಿಪೋ ಮ್ಯಾನೇಜರ್

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಅಂಬೇಡ್ಕರ್ ಕೇವಲ ಭಾರತಕ್ಕೆ ಸೀಮಿತರಲ್ಲ ಅವರು ಜಗತ್ಪುರುಷ ಮನುಕುಲದ ಘನತೆ – ಹೆಬ್ಬಾರ್.

ಪ್ರತಿಧ್ವನಿ ಯಲ್ಲಾಪುರ – ಅಂಬೇಡ್ಕರ್ ಅವರ ಬಗ್ಗೆ ಮಾತನಾಡಲು ಯುಗ ಒಂದು ಸಾಲದು ಅವರೊಂದು ವಿಶ್ವಕೋಶ. ಅವರು ಕೇವಲ ಭಾರತಕ್ಕೆ …

Leave a Reply

Your email address will not be published. Required fields are marked *