Breaking News

ನಿತ್ಯ ಬದುಕಿನ ಒತ್ತಡ ತಗ್ಗಿಸಲು ಕ್ರೀಡೆಗೆ ಮೊರೆ ಹೋದ ಯಲ್ಲಾಪುರ ಪೊಲೀಸರು

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ


ಪ್ರತಿಧ್ವನಿ,ಯಲ್ಲಾಪುರ : ಪೊಲೀಸ್ ವೃತ್ತಿ ಎಂದರೆ ಅದೊಂದು ಒತ್ತಡದ ವೃತ್ತಿ ಎಂಬುದು ಎಲ್ಲರಿಗೂ ತಿಳಿದ ಸಾಮಾನ್ಯ ವಿಷಯ. ನಿತ್ಯವೂ ಒಂದಲ್ಲ ಒಂದು ಜಂಜಾಟದಲ್ಲಿ ಸಮಸ್ಯೆಗಳ ಮದ್ಯದಲ್ಲಿ , ಅಪರಾಧಗಳ ವಿಚಾರದಲ್ಲಿ ಮುಳುಗಿ ಹೋಗಿ ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಒತ್ತಡದಲ್ಲಿರುತ್ತಾರೆ. ಇದಕ್ಕೆಲ್ಲಾ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯಲ್ಲಾಪುರ ಪೊಲೀಸರು ಪ್ರತಿನಿತ್ಯ ಮುಂಜಾನೆ ಕ್ರೀಡಾ ಚಟುವಟಿಕೆಗೆ ಮೊರೆ ಹೋಗಿದ್ದು ತಮ್ಮ ವಸತಿ ಗೃಹ ಸಂಕೀರ್ಣದ ಆವರಣದಲ್ಲಿ ವಾಲಿಬಾಲ್ ಕೋರ್ಟ್ ನಿರ್ಮಿಸಿಕೊಂಡು ಎರಡು ತಂಡಗಳಾಗಿ ಆಟವಾಡುತ್ತಾರೆ.


ಇಲಾಖೆಯ ಎಲ್ಲಾ ಸ್ತರದ ಅಧಿಕಾರಿಗಳು, ಸಿಬ್ಬಂದಿಗಳು ಕ್ರೀಡೆಯಲ್ಲಿ ಪಾಲ್ಗೊಳ್ಳುವುದಲ್ಲದೇ ಒಬ್ಬರಿಗೊಬ್ಬರು ಸ್ಪೂರ್ತಿದಾಯಕವಾಗಿ ಹುರುಪು ತುಂಬುತ್ತಾ ಆಟವಾಡುತ್ತಾರೆ.

ಪಿಐ ರವಿ ಗುಡ್ಡಿ ಉತ್ತಮ ವಾಲಿಬಾಲ್ ಸ್ಮಾಶರ್ ಆಗಿ ಅಂಕಣದಲ್ಲಿ ಕಂಡರೆ ಉಳಿದ ಪೊಲೀಸರು ಸಹ ಅವರಿಗಿಂತ ಕಡಿಮೆ ಇಲ್ಲವೆಂಬಂತೆ ಸರ್ವಿಸ್ ಮಾಡುವುದು, ಗ್ಯಾಪ್ ಹಾಕುವುದು, ಪಾಸ್ ನೀಡುವುದು, ಗಾರ್ಡ್ ಮಾಡುವುದು ತನ್ನ ಆಟದಿಂದ ತನ್ನ ತಂಡ ಗೆಲ್ಲಿಸಬೇಕೆಂಬ ಹುಮ್ಮಸ್ಸಿನಲ್ಲಿ ವಾಲಿಬಾಲ್ ಆಟದಲ್ಲಿ ಮುಳುಗಿರುತ್ತಾರೆ.

ಇದರಿಂದ ದೈಹಿಕ ಹಾಗೂ ಮಾನಸಿಕ ಸ್ಪೂರ್ತಿಯೊಂದಿಗೆ ನಿತ್ಯದ ಕರ್ತವ್ಯದಲ್ಲಿ ಆಲಸ್ಯ ಬರದೇ ಲವಲವಿಕೆಯಿಂದಿರಲು ಸಾಧ್ಯವಾಗುತ್ತದೆ ಎನ್ನುತ್ತಾರೆ ನಮ್ಮ ಯಲ್ಲಾಪುರ ಆರಕ್ಷಕರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *