
ಪ್ರತಿಧ್ವನಿ ಯಲ್ಲಾಪುರ : ಸದಾ ಇತರರ ಗೆಲುವಿಗೆ ಹಗಲು ರಾತ್ರಿ ಶ್ರಮಿಸಿ ಜೈಕಾರ ಹಾಕಿ,ಪೊಸ್ಟರ್ ಹಚ್ಚಿ, ಬ್ಯಾನರ್ ಕಟ್ಟಿ ದುಡಿದಿದ್ದು ಇದೀಗ ಬರಲಿರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸಹಸ್ರಳ್ಳಿ ವಾಡ್೯ ನಿಂದ ನಾನೆ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜನರ ಸೇವೆ ಮಾಡಲು ಬಯಸಿದ್ದೇನೆ ಇದಕ್ಕೆ ಹಿರಿಯರ ಅಭಯ,ಕುಟುಂಬದ ಆಶಿರ್ವಾದ, ಸ್ನೇಹಿತರ ಸಹಕಾರ, ಹಿತೈಷಿಗಳ ಹಾರೈಕೆ, ಮತದಾರ ಪ್ರಭುಗಳ ಪ್ರೋತ್ಸಾಹ ವಿಶೇಷವಾಗಿ ಯಲ್ಲಾಪುರ ಗ್ರಾದೇವಿಯರ ಅನುಗ್ರಹದ ಆಧಾರದ ಮೇಲೆ ಈ ದೃಡ ನಿರ್ದಾರ ಮಾಡಿದ್ದೇನೆ ಇಟ್ಟ ಹೆಜ್ಜೆ ತೆಗೆಯುವ ಪ್ರಶ್ನೆಯೆ ಇಲ್ಲ ಚುನಾವಣೆಯಲ್ಲಿ ಸ್ಪರ್ಧಿಸಿಯೆ ಸಿದ್ದ ಎಂದು ಮೋಹನ್ ನಾಯ್ಕ್ ಪ್ರತಿಧ್ವನಿಯೊಂದಿಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಪಟ್ಟಣದ ಹೊರವಲಯ ಸಹಸ್ರಳ್ಳಿ ಗ್ರಾಮವು ಈ ಹಿಂದೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲಿದ್ದು ಸದ್ಯ ಚಂದಗುಳಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿದೆ, ಈ ವಾಡ್೯ ವ್ಯಾಪ್ತಿಯ ನಿವಾಸಿಗಳಾದ ದಿವಂಗತ ಈರಾ ನಾಯ್ಕ್ ಅವರ ಕುಟುಂಬ ಬಹಳ ಹೆಚ್ಚಿನ ಮತದಾರರನ್ನು ಹೊಂದಿದ ಪ್ರಭಾವಿ ಕುಟುಂಬವಾಗಿದೆ, ಈರಾನಾಯ್ಕ್ ಅವರ ಮಗ ಶೇಷು ನಾಯ್ಕ್ ಅವರು ಸಹ ಜನಸೇವೆಗಾಗಿ ಯಲ್ಲಾಪುರ ಪಟ್ಟಣ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದವರಾಗಿದ್ದಾರೆ, ವಿಶೇಷವಾಗಿ ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪನವರ ಅತ್ಯಾಪ್ತರಾಗಿದ್ದು ಸಮಾಜವಾದಿ ಸಿದ್ದಾಂತದ ಹಿನ್ನೆಲೆಯಲ್ಲಿ ರಾಜಕಾರಣ ಮಾಡಿದ ಅನುಭವ ಹೊಂದಿದ್ದಾರೆ, ಇದೀಗ ಇದೇ ಕುಟುಂಬದ ಕುಡಿ ಮೋಹನ್ ನಾಯ್ಕ್ ಬರಲಿರುವ ಗ್ರಾಮ ಪಂಚಾಯತ್ ಚುನಾವಣೆಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದು ಇದುವರೆಗು ದುಡಿದ ಪಕ್ಷದ ಅಡಿಯಲ್ಲಿ ಸ್ಪರ್ಧಿಸುವ ಉದ್ದೇಶವಿದ್ದು ಕಾರಣಾಂತರದಿಂದ ಅಥವಾ ಇತರೆ ಒತ್ತಡಗಳಿಂದ ಪಕ್ಷದ ಆಶ್ರಯ ಸಿಗದೇ ಹೋದಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರತಿ ಚುನಾವಣೆಯಲ್ಲಿ ಪಕ್ಷದ ಹಿರಿಯರು ನಮ್ಮ ವಾಡ್೯ ವ್ಯಾಪ್ತಿಗೆ ಯಾರನ್ನೆ ಅಭ್ಯರ್ಥಿಯಾಗಿ ಸೂಚಿಸಿದರು ಅವರ ಬೆನ್ನಿಗೆ ನಿಂತು ಶ್ರಮಿಸಿ ಗೆಲುವು ತರುತ್ತಿದ್ದು ಈ ಬಾರಿ ಸಾಮಾನ್ಯ ಕಾರ್ಯಕರ್ತನಾದ ನನಗು ಒಂದು ಅವಕಾಶ ನೀಡಿ ಜನಸೇವೆಗೆ ಅನುಕೂಲ ಕಲ್ಪಿಸಬೇಕಿದೆ, ಇದಕ್ಕೆ ಇದುವರೆಗೂ ಈ ಭಾಗದಿಂದ ಗೆದ್ದು ಜನಸೇವೆ ಮಾಡಿದ ಅನುಭವ ಹೊಂದಿರುವ ನನ್ನ ಆತ್ಮೀಯ ಜನಪ್ರತಿನಿಧಿಗಳು ಈ ಬಾರಿ ನನಗೆ ಬೆಂಬಲಿಸಲಿ ಹಾಗು ನನ್ನ ಗೆಲುವಿಗೆ ಶ್ರಮಿಸಲಿ ಎನ್ನುತ್ತಾರೆ ಮೊಹನ್ ನಾಯ್ಕ್.

ನಾನು ಅತಿ ಹೆಚ್ಚು ಆಪ್ತತೆ ಹೊಂದಿರುವುದು ಶಾಸಕರಾದ ಶಿವರಾಮ ಹೆಬ್ಬಾರ್ ಹಾಗು ನನ್ನ ಗುರುಗಳಾದ ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ವಿಜಯ್ ಮಿರಾಶಿ ಅವರ ಗರಡಿಯಲ್ಲಿ ಬೆಳೆದವನಾಗಿದ್ದು ಪಕ್ಷ ಬೇದ ಮರೆತು ಜನರೊಂದಿಗೆ ಬೆರೆತವನು, ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಉತ್ತಮ ಬಾಂದವ್ಯ ಹೊಂದಿರುವ ನಾನು ಎಲ್ಲಾ ಪಕ್ಷದ ಸ್ನೇಹಿತರೊಂದಿಗೆ ಒಡನಾಟ ಹೊಂದಿದ್ದೇನೆ, ಪ್ರಾಮಾಣುಕನಾಗಿ ಜನಸೇವೆ ಹೊಂದಿದ್ದೇನೆ, ಜನರಿಗೆ ಸರ್ಕಾರದ ಸವಲತ್ತುಗಳನ್ನು ಸಕಾಲಕ್ಕೆ ತಲುಪಿಸುವ ಮತ್ತು ಅವರ ಕಷ್ಟಗಳಲ್ಲಿ ಅವರೊಂದಿಗೆ ನಿಂತು ಹೋರಾಡುವ ಮನಸ್ಸಿಂದ ರಾಜಕೀಯ ಪ್ರವೇಶಕ್ಕೆ ಮುಂದಾಗಿದ್ದೇನೆ.

ನಾನು ಹುಟ್ಟಿದಾಗಿನಿಂದ ಆಟವಾಡಿ ಬೆಳೆದ ಸಹಸ್ರಳ್ಳಿ ನೆಲದ ಮೇಲೆ ಅತಿ ಹೆಚ್ಚು ಪ್ರೀತಿ ಹೊಂದಿದ್ದು ಇದೇ ನೆಲದ ಪ್ರತಿ ಮತದಾರರ ಮನೆ ಮತ್ತು ಮನಸ್ಸು ಬಲ್ಲವನಾಗಿದ್ದೇನೆ ಅಲ್ಲದೆ ಅದೇ ಮನೆಗಳ ತಾಯಂದಿರು ಪ್ರೀತಿ ತೋರಿದವರಾಗಿದ್ದಾರೆ ಹಾಗಾಗಿ ಆ ಎಲ್ಲಾ ಮನೆಗಳ ಪ್ರತಿ ಮತದಾರರು ನನ್ನ ಕುಟುಂಬವಾಗಿದ್ದು ಅವರ ಮನೆಯ ಮಗನಾದ ನನಗೆ ಆಶಿರ್ವಾದ ಮಾಡುತ್ತಾರೆ ಎಂಬ ಅಚಲವಾದ ನಂಬಿಗೆ ಇದೆ ಆ ಎಲ್ಲಾ ಕುಟುಂಬದ ಪಾದದಾಣೆ ಅವರ ನಂಬಿಕೆಗೆ ಚ್ಯುತಿ ಬಾರದಂತೆ ನಡೆದು ಸೇವೆ ಸಲ್ಲಿಸುತ್ತೇನೆ.
ಮೋಹನ್ ನಾಯ್ಕ್, ಸಹಸ್ರಳ್ಳಿ, ಯಲ್ಲಾಪುರ


















Prathidvani Yellapura