
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಕಾರ್ಮಿಕ ಭವನದಲ್ಲಿ ಸಡೆಸಲು ಉದ್ದೇಶಿಸಿರುವ ಆದಿವಾಸಿಗಳ ಕರ್ನಾಟಕ ರಾಜ್ಯ ಸಮ್ಮೇಳನಕ್ಕೆ ಪ್ರಾರಂಭದಲ್ಲೆ ವಿಘ್ನ ಎದುರಾಗಿದೆ ಕಾರಣ ಸಮ್ಮೇಳನ ನಡೆಯುವುದು ಆದಿವಾಸಿಗಳ ಹೆಸರಲ್ಲಿ ಆದರೆ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಆದಿವಾಸಿ ಬುಡಕಟ್ಟು ಸಮುದಾಯದಲ್ಲಿ ಒಂದೆನಿಸಿಕೊಂಡ ಸಿದ್ದಿ ಸಮುದಾಯದ ಹಿರಿಯರಿಗೆ, ಮುಖಂಡರು ಅಥವಾ ಸಂಘ ಸಂಸ್ಥೆಗಳ ಗಮನಕ್ಕೆ ಬಾರದಂತೆ ನಡೆಸುತ್ತಿರುವುದು ಸಿದ್ದಿ ಸಮಯದಾಯದ ಅಸಮದಾನಕ್ಕೆ ಕಾರಣವಾಗಿದೆ.
ಈ ಕುರಿತು ಪ್ರತಿಧ್ವನಿಯೊಂದಿಗೆ ಸಿದ್ದಿ ಸಮುದಾಯದ ಹಲವು ಮುಖಂಡರು ಮಾತನಾಡಿ ತಮ್ಮ ಕಡಗಣನೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ವಿಶಿಷ್ಟ ಮತ್ತು ಅತ್ಯಂತ ಪ್ರಾಮುಖ್ಯತೆ ಹೊಂದಿರುವ ಆದುವಾಸಿ ಬುಡಕಟ್ಟು ವನವಾಸಿ ಸಿದ್ದಿ ಸಮುದಾಯದಲ್ಲಿ ಅನೇಕ ಹಿರಿಯರಿದ್ದು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ರಾಜ್ಯಮಟ್ಟದ ಸಮ್ಮೇಳನ ನಡೆಸುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ಬಿಸಿದ್ದಾರೆ.
ವಿಧಾನ ಪರಿಷತ್ ಮಾಜಿ ಸದಸ್ಯರಾದ ಶಾಂತರಾಮ್ ಸಿದ್ದಿ ಯವರನ್ನು ಕಡೆಗಣಿಸಿ ಸಮ್ಮೇಳನ ಆಯೋಜಿಸಿರುವುದು ಸಿದ್ದಿ ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ. ಈ ಕಾರ್ಯಕ್ರಮಕ್ಕೆ ನಮ್ಮ ಸಮುದಾಯದ ಕೆಲವೆ ಬೆರಳೆಣಿಕೆ ಮಂದಿಗೆ ಕರೆ ನೀಡಿದ್ದು ಇದುವಾಕ್ಷಮ್ಯವಾಗಿದೆ ಇದನ್ನು ಒಟ್ಟಾರೆ ಸಿದ್ದಿ ಸಮುದಾಯ ಅತ್ಯುಗ್ರವಾಗಿ ಖಂಡಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ನಮ್ಮ ಸಮುದಾಯದ ರಾಜಕೀಯ ಪ್ರತಿನಿಧಿ ಎಂದೇ ಭಾವಿಸಿರುವ ಹಿರಿಯರು ಹಾಗು ಮಾಜಿ ವಿಧಾನಪರಿಷತ್ ಸದಸದಯರು ಆದ ಶಾಂತಾರಾಮ್ ಸಿದ್ದಿ ಅವರ ಗಮನಕ್ಕು ತರದೆ ಆಹ್ವಾನ ಪತ್ರಿಕೆಯಲ್ಲಿ ಹೆಸರನ್ನು ಹಾಕದೆ ನಿರ್ಲಕ್ಷ್ಯ ತೋರಿದ್ದು ಕ್ಷಮೆಗೆ ಅರ್ಹವಲ್ಲದ ವಿಷಯ, ಸಿದ್ದಿ ಬುಡಕಟ್ಟು ಸಮುದಾಯದಲ್ಲಿ ಹಿರಿಯರಿದ್ದಾರೆ,ತಾಲ್ಲೂಕು ಪಂಚಾಯತ,ಗ್ರಾಮ ಪಂಚಾಯತ್ ಮಾಜಿ ಸದಸ್ಯರುಗಳು ಹಾಗು ಉನ್ನತ ಸ್ಥಾನದಲ್ಲಿರುವವರು ಸಂಘಸಂಸ್ಥೆಗಳ ಪ್ರಮುಖರು ಇದ್ದಾಗ್ಯೂ ಕೂಡ ಸೌಜನ್ಯಕ್ಕು ಮಾಹಿತಿ ನೀಡದೆ ಕಾರ್ಯಕ್ರಮ ನಡೆಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ ಅಲ್ಲದೆ ಸಿದ್ದಿ ಸಮುದಾಯವನ್ನು ಕಡೆಗಣಿಸಿರುವುದು ಅತ್ಯಂತ ಬೇಸರ ತಂದಿದೆ.
ಜಯರಾಮ್ ಸಿದ್ದಿ, ಹೈಕೊಟ್೯ ವಕೀಲರು.
ಆದಿವಾಸಿಗಳ ರಾಜ್ಯ ಮಟ್ಟದ ಸಮ್ಮೇಳನ ಆಯೋಜಿಸಿ ಯಲ್ಲಾಪುರ ತಾಲೂಕಿನ ಆದಿವಾಸಿ ಸಿದ್ದಿ ಸಮುದಾಯದವರಿಗೆ ತಿಳಿಸದಿರುವುದು ಅತ್ಯಂತ ಆಶ್ಚರ್ಯ ತಂದಿದೆ. ಇದರಲ್ಲಿ ಏನೋ ಪಿತೂರಿ ಇದೆ ಎಂಬ ಸಂಶಯ ಎದುರಾಗಿದೆ. ಈ ಕುರಿತು ಮಾಹಿತಿ ಕೇಳಿದರೆ ಯಾರು ಸಮರ್ಪಕವಾಗಿ ಉತ್ತರಿಸುತ್ತಿಲ್ಲ. ಒಟ್ಟಿನಲ್ಲಿ ಸಮಯದಾಯದ ಕಡೆಗಣನೆ ಅಕ್ಷಮ್ಯ ಸಹಿಸಲಾಗದು.
ಮನ್ವೇಲ್ ಸಿದ್ದಿ, ಸಾಮಾಜಿಕ ಹೋರಾಟಗಾರ


















Prathidvani Yellapura