Breaking News

ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಇಂತಹ ಶಿಭಿರಗಳ ಆಯೋಜನೆ ಶ್ಲಾಘನೀಯ ಕಾರ್ಯ – ಹರಿಪ್ರಕಾಶ್ ಕೋಣೆಮನೆ‌.

ಪ್ರತಿಧ್ವನಿ ಯಲ್ಲಾಪುರ : ಯಾವುದೆ ವ್ಯಕ್ತಿಯು ತನ್ನ ದೇಹವನ್ನು ಆರೋಗ್ಯವಾಗಿಡಲು ರೋಗ ರುಜಿನಗಳು ಬರುವ ಮುಂಚೆಯೇ ತಪಾಸಣೆ ಮಾಡಿಕೊಳ್ಳಬೇಕು ಮತ್ತು ಒತ್ತಡಮುಕ್ತ ಸಮಾಜ ನಿರ್ಮಾಣವಾಗಬೇಕು,ಪ್ರತಿ ವ್ಯಕ್ತಿಯ ಆರೋಗ್ತದಿಂದ ಇದ್ದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾದ್ಯ ಮತ್ತು ಆರೋಗ್ಯಕರ ಚಿಂತನೆಗೆ ಅನುಕೂಲವಾಗಲಿದೆ ಆ ನಿಟ್ಟಿನಲ್ಲಿ ಇಂತಹ ಶಿಭಿರಗಳ ಆಯೋಜನೆ ಶ್ಲಾಘನೀಯ ಕಾರ್ಯ ಎಂದು ವಿಶ್ವ ದರ್ಶನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹರಿಪ್ರಕಾಶ್ ಕೋಣೆಮನೆ ಹೇಳಿದರು.

ಅವರು ಯಲ್ಲಾಪುರ ಹೊರವಲಯದ ಹಳಿಯಾಳ ಕ್ರಾಸ್ ಬಳಿ ಇರುವ ನಂದನ ಸಹಕಾರಿ ಸಂಘ ಕಣ್ಣಿಗೇರಿ ಸಭಾಭವನದಲ್ಲಿ ಒನ್ ಸೈಟ್  ಎಸ್ಪಿಲಾರ್ ಲಜ್ಸೋಟ್ಟಿಕಾ ಫೌಂಡೇಶನ್( ರಿ) , ಸ್ಪಂದನ ಸೇವಾ ಟ್ರಸ್ಟ್ (ರಿ) ಹಡಿನಬಾಳ  ಹೊನ್ನಾವರ ತಾಲೂಕು ಹಾಗು ನಂದನ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ಕಣ್ಣೀಗೇರಿ ಯಲ್ಲಾಪುರ ತಾಲೂಕು ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡ ಕಣ್ಣಿನ ಉಚಿತ ತಪಾಸಣೆ ಹಾಗು ಉಚಿತ ಕನ್ನಡಕ ವಿತರಣಾ ಶಿಭಿರ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ರೂವಾರಿ  ರವಿ ಕೈಟಕರ  ಮಾತನಾಡಿ ಕಣ್ಣಿಗೇರಿ ಭಾಗದ ಜನರಿಗೆ ಉಚಿತ ಕಣ್ಣಿನ ತಪಾಸಣೆ ನಡೆಸಿ ಜೊತೆಗೆ ಉಚಿತ ಕನ್ನಡಕದ ಪ್ರಯೋಜನ ಪಡೆದುಕೊಳ್ಳುವ ಸಲುವಾಗಿ ಮತ್ತು ಬಡ ಜನರಿಗೆ ಅನುಕೂಲವಾಗಬೇಕು ಮತ್ತು ತೀರಾ ಹತ್ತಿರದಲ್ಲಿ ಜನರಿಗೆ ಈ ಸೌಲಭ್ಯ ಸಿಗಬೇಕು ಎನ್ನುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಸಂಘಟಿಸಿದ್ದೇವೆ ಮತ್ತು ಇಂತಹ ಸಾರ್ಥಕ ಕಾರ್ಯ ಆತ್ಮತೃಪ್ತಿ ನೀಡುತ್ತದೆ ಸಹಕರಿಸಿದ ಸರ್ವರಿಗು ಸಂಸ್ಥೆ ವತಿಯಿಂದ ಧನ್ಯವಾದಗಳು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ನಂದನ ಸಹಕಾರಿ ಸಂಘದ ಅಧ್ಯಕ್ಷ ಶೇಷಗಿರಿನಾರಾಯಣ ಭಟ್ಟ ರವರು ಮಾತನಾಡಿ ಉಚಿತ ಕಣ್ಣಿನ ತಪಾಸಣೆ ಮತ್ತು ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮದಿಂದ ಸಂಘದ ಸದಸ್ಯರಿಗೂ ಮತ್ತು ಸುತ್ತಮುತ್ತಲಿನ ಬಡ ಜನರಿಗೆ ಅನುಕೂಲವಾಯಿತು ಎಂದು ಹೇಳಿದರು.


ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಸಂಕಲ್ಪ ಸೇವಾ ಸಂಸ್ಥೆಯ ಸಂಚಾಲಕ  ಪ್ರಸಾದ ಹೆಗಡೆ ಮಾತನಾಡಿ ಇಂತಹ ಕಾರ್ಯಕ್ರಮಗಳಿಂದ ಹಳ್ಳಿಯ ಜನರಿಗೆ ಅನುಕೂಲ ಆಗುತ್ತದೆ ಮತ್ತು ಇಂತಹ ಕಾರ್ಯಕ್ರಮಗಳನ್ನು ಸಂಸ್ಥೆಗಳು ಹೆಚ್ಚೆಚ್ಚು ಸಂಘಟನೆ ಮಾಡಬೇಕು ಎಂದರು.


ಕಾರ್ಯಕ್ರಮದ ಸಂಯೋಜಕರಾದ  ವಿ.ಎಸ್ ಭಟ್ ಕಲ್ಲೇಶ್ವರ ಮಾತನಾಡಿ ಶಿಭಿರದಲ್ಲಿ ಉಚಿತವಾಗಿ ಪಡೆದ ಕನ್ನಡಕಗಳನ್ನು ಅತ್ಯುತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಮತ್ತು ಉಚಿತವಾಗಿ ನೀಡುವವರು ಇದ್ದರೂ ಸಹ ಅದನ್ನು ಜನರಿಗೆ ತಲುಪಿಸುವ ಸಮರ್ಪಕವಾದ ಕಾರ್ಯವು ಅಷ್ಟೇ ಮುಖ್ಯ ಅದನ್ನು ಇಲ್ಲಿನವರು ಮಾಡುತ್ತಿದ್ದಾರೆ ಎಂದು ಹೇಳಿದರು.
ಗಜಾನನ ಅಂಬಿಗ (ಸಂಯೋಜಕರು) ಸ್ಪಂದನ ಟ್ರಸ್ಟ್ (ರಿ) ಹಡಿನಬಾಳ. ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಗೋವಿಂದ ಗೌಳಿ ಉಪಾಧ್ಯಕ್ಷರು, ನಿರ್ದೇಶಕರಾದ ಸವಿತಾ ವಿ. ಗಾಂವ್ಕರ,  ಸೀತಾ ಎಂ. ಅರೆಗುಳಿ,  ಗಣಪತಿ ಪುನ್ನಾ ಮರಾಠಿ ನಂದನ ಸಹಕಾರಿ ಸಂಘ ಕಣ್ಣಿಗೇರಿ ಮತ್ತು ಹಲವು ಪ್ರಮುಖರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಈ ಸಂದರ್ಭದಲ್ಲಿ 300ಕ್ಕೂ ಹೆಚ್ಚು ಜನ ಶಿಭಿರದ ಸದುಪಯೋಗ ಪಡೆದುಕೊಂಡರು.
ವಿ ಎಸ್‌ ಭಟ್ಟ ಕಲ್ಲೇಶ್ವರ ಸ್ವಾಗತಿಸಿದರು. ರವಿ ಕೈಟಕರ ನಿರೂಪಣೆ ಮಾಡಿದರು.
ಮುಖ್ಯ ಕಾರ್ಯನಿರ್ವಾಹಕರಾದ  ಮಹೇಶ ಮಳಿಕ  ವಂದನಾರ್ಪಣೆ ಮಾಡಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ನಾಡ ಹಬ್ಬ ದಸರಾ ಸಡಗರ – ಪಟ್ಟಣದಲ್ಲಿ ನಡೆದ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಸಿಂಗಾರಗೊಂಡ ಆ್ಯಂಬುಲೆನ್ಸ್ ಪರೇಡ್.

ಪ್ರತಿಧ್ವನಿ ಯಲ್ಲಾಪುರ : ನಾಡಿನಾದ್ಯಂತ ದಸರಾ ಹಬ್ಬದ ಸಡಗರ ಮನೆಮಾಡಿದೆ ಮಂಗಳವಾರ ಆಯುಧ ಪೂಜೆ ನಿಮಿತ್ತ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ …

Leave a Reply

Your email address will not be published. Required fields are marked *