
ಪ್ರತಿಧ್ವನಿ ಯಲ್ಲಾಪುರ : ನಾಡಿನಾದ್ಯಂತ ದಸರಾ ಹಬ್ಬದ ಸಡಗರ ಮನೆಮಾಡಿದೆ ಮಂಗಳವಾರ ಆಯುಧ ಪೂಜೆ ನಿಮಿತ್ತ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಯಂತ್ರೋಪಕರಣಗಳು ಹಾಗು ಕೆಲವು ಆಯುಧಗಳು ಹಾಗು ವಾಹನಗಳಿಗೆ ಪೂಜೆ ನೆರವೇರಿಸಲಾಯಿತು.

ಸಾರ್ವಜನಿಕರ ಆರೋಗ್ಯ ಕಾಪಾಡುವ ಆರೋಗ್ಯ ದೇಗುಲ ಎಂದರೆ ಅದು ಆಸ್ಪತ್ರೆಗಳು ಅದರಲ್ಲು ಸರ್ಕಾರಿ ಆಸ್ಪತ್ರೆ ಎಂದರೆ ಬಡ ಮದ್ಯಮ ವರ್ಗದ ಪಾಲಿನ ದೇಗುಲ ಹಾಗು ನಮಗೆ ಚಿಕಿತ್ಸೆ ನೀಡುವ ವೈದ್ಯರೆ ದೇವರ ಸಮಾನ ಎಂದು ನಂಬಿದ್ದಾರೆ ಅಂತಹ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಳಸುವ ಯಂತ್ರಗಳು ಹಾಗು ಉಪಕರಣಗಳಿಗೆ ಪೂಜೆ ಸಲ್ಲಿಸಿ ಸದಾಕಾಲ ಒಳಿತೇ ನಡೆಯಲಿ ಎಂದು ಭಗವಂತನಲ್ಲಿ ಬೇಡಿ ಪೂಜೆ ಸಲ್ಲಿಸಿದರು.

ಸದಾ ಒಂದಿಲ್ಲೊಂದು ಅಪಘಾತ ಅಥವ ಆರೋಗ್ಯ ಏರುಪೇರಾದಾಗ ಸಮಯಕ್ಕೆ ಸರಿಯಾಗಿ ದಾವಿಸುವ ಆ್ಯಂಬುಲೆನ್ಸ್ ಗಳು ವಿವಿಧ ಹೂಗಳಿಂದ ತಳಿರು ತೋರಣಗಳಿಂದ ಅಲಂಕೃತಗೊಂಡು ಪಟ್ಟಣದಾದ್ಯಂತ ರ್ಯಾಲಿ ನಡೆಸಿ ಸಂತಸ ಹಂಚಿಕೊಂಡರು.

ತಾಲ್ಲೂಕು ಆರೋಗ್ಯಾಧಿಕಾರಿ ಮತ್ತು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ನರೇಂದ್ರ ಪವಾರ್ ಮಾರ್ಗದರ್ಶನದಲ್ಲಿ ಆಸ್ಪತ್ರೆ ವೈದ್ಯರು ಹಾಗು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಶುಶ್ರೂಷಕಿಯರು,ಸಹಾಯಕರು,ಆ್ಯಂಬುಲೆನ್ಸ್ ಚಾಲಕರು,ಡಿಗ್ರೂಪ್ ನೌಕರರು ಹಾಗು ಇನ್ನಿತರರು ಆತುಧ ಪೂಜೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.























Prathidvani Yellapura