
ಪ್ರತಿಧ್ವನಿ ಯಲ್ಲಾಪುರ : ಸ್ಥಳೀಯ ಜನರಿಗೆ ಉತ್ತಮ ಸಹಕಾರಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಆರಂಭಗೊಂಡಿರುವ ಪರ್ವ ಸೌಹಾರ್ದ ಸಹಕಾರಿ ಸಂಘ ನಿಯಮಿತ, ಯಲ್ಲಾಪುರ ತನ್ನ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಿದೆ.

“ಉಜ್ವಲ ಭವಿಷ್ಯದೆಡೆ ಹೊಸ ಹೆಜ್ಜೆ” ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯಾರಂಭಿಸಿರುವ ಸಂಘವು ಸಾರ್ವಜನಿಕರಲ್ಲಿ ಉಳಿತಾಯದ ಮನೋಭಾವ ಬೆಳೆಸುವುದು, ಆರ್ಥಿಕ ಶಿಸ್ತು ಉತ್ತೇಜಿಸುವುದು ಹಾಗೂ ಗ್ರಾಹಕರಿಗೆ ವಿಶ್ವಾಸಾರ್ಹ, ಪಾರದರ್ಶಕ ಮತ್ತು ತ್ವರಿತ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಸಂಘದ ಮೂಲಕ ವಿವಿಧ ಠೇವಣಿ ಸೌಲಭ್ಯಗಳು ಹಾಗೂ ನಿಯಮಾನುಸಾರ ಸಾಲ ಸೌಲಭ್ಯಗಳನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ. ಸ್ಥಳೀಯ ವ್ಯಾಪಾರಸ್ಥರು, ಸಣ್ಣ ಉದ್ಯಮಿಗಳು ಹಾಗೂ ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಹೊಂದಿರುವವರಿಗೆ ಆರ್ಥಿಕವಾಗಿ ನೆರವಾಗುವುದು ಸಂಘದ ಪ್ರಮುಖ ಆಶಯವಾಗಿದೆ.

ಸಂಘದ ಅಧ್ಯಕ್ಷರಾಗಿ ಸಚಿನ್ ಭಟ್ಟ ಕಲ್ಗದ್ದೆ, ಉಪಾಧ್ಯಕ್ಷರಾಗಿ ಶ್ರೀಕೃಷ್ಣ ಪಟೇಲ ಹಾಗೂ ವ್ಯವಸ್ಥಾಪಕರಾಗಿ ಮಂಜುನಾಥ ಹಿರೇಮಠ ಕಾರ್ಯನಿರ್ವಹಿಸಲಿದ್ದಾರೆ.
ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಠೇವಣಿ ಕೊಡುಗೆ:
ದಸರಾ ಹಬ್ಬದ ಪ್ರಯುಕ್ತ ಪರ್ವ ಸೌಹಾರ್ದ ಸಹಕಾರಿ ಸಂಘವು ಗ್ರಾಹಕರಿಗಾಗಿ ವಿಶೇಷ ಠೇವಣಿ ಕೊಡುಗೆಯನ್ನು ಘೋಷಿಸಿದೆ. ಅಕ್ಟೋಬರ್ 15ರಿಂದ ನವೆಂಬರ್ 15ರವರೆಗೆ ಮುದ್ದತಿ ಠೇವಣಿಗಳ ಮೇಲೆ ಒಂದು ವರ್ಷದ ಅವಧಿಗೆ ವಾರ್ಷಿಕ ಶೇ. 10ರಷ್ಟು ಬಡ್ಡಿದರವನ್ನು ನೀಡಲಾಗುತ್ತಿದೆ. ಗ್ರಾಹಕರು ಈ ವಿಶೇಷ ಕೊಡುಗೆಯ ಸದುಪಯೋಗ ಪಡೆದುಕೊಳ್ಳುವಂತೆ ಸಂಘದ ಆಡಳಿತ ಮಂಡಳಿ ಸದಸ್ಯರಾದ ವೆಂಕಟ್ರಮಣ ಕೊಂಬೆ, ಸುಬ್ರಹ್ಮಣ್ಯ ಭಟ್ಟ ಕುಂಕಿಪಾಲ್, ಗಜಾನನ ಬೆಳ್ಳಿ, ಸುಬ್ರಹ್ಮಣ್ಯ ಭಟ್ಟ ಬೈಲಪಾಲ್, ಪ್ರಸಾದ ದೇವಳಕರ್, ಸ್ನೇಹಾ ಭಟ್ಟ, ಲಲಿತಾ ನಾಯ್ಕ ಮನವಿ ಮಾಡಿಕೊಂಡಿದ್ದಾರೆ.

ಆಡಳಿತ ಮಂಡಳಿಯ ಮಾರ್ಗದರ್ಶನದಲ್ಲಿ ಸಂಘವು ಗ್ರಾಹಕರ ವಿಶ್ವಾಸಕ್ಕೆ ಆದ್ಯತೆ ನೀಡುತ್ತಾ, ಪಾರದರ್ಶಕ ಆಡಳಿತ ಮತ್ತು ಉತ್ತಮ ಸೇವಾ ಮನೋಭಾವದೊಂದಿಗೆ ಮುನ್ನಡೆಯಲು ಸಂಕಲ್ಪಿಸಿದೆ. ಸಾರ್ವಜನಿಕರು ಸಂಘದೊಂದಿಗೆ ಕೈಜೋಡಿಸಿ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಬೇಕೆಂದು ಆಡಳಿತ ಮಂಡಳಿ ವಿನಂತಿಸಿದೆ.























Prathidvani Yellapura