
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿ ದಶಕಗಳಿಂದ ಉತ್ತಮ ಸೇವೆಯೊಂದಿಗೆ ನಂಬಿಕೆಯ ವ್ಯವಹಾರಕ್ಕೆ ಹೆಸರಾದ ಹೀರೋ ಬೈಕ್ ಷೋರೂಂ ತನ್ನ ಹೊಸ ಮಳಿಗೆಯನ್ನು ಜನತೆಗೆ ಪರಿಚಯಿಸುತ್ತಿದ್ದು ನೂತನ ಮಳಿಗೆಯನ್ನು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ವಾರ್ ಉದ್ಘಾಟಿಸಿ ಶುಭಕೋರಿದರು.

ಕಳೆದ ಕೆಲವು ದಶಕಗಳಿಂದ ಗ್ರಾಹಕರಿಗೆ ದ್ವಿಚಕ್ರ ವಾಹನಗಳಿಗೆ ಉತ್ತಮ ಸೇವೆ ನೀಡುತ್ತ ಎಲ್ಲರ ಮನ ಗೆದ್ದಿರುವ ಶ್ರೀ ಶಕ್ತಿ ಹಿರೊ ಷೊರೂಂ ಈಗಿನ ಮಳಿಗೆಯ ಪಕ್ಕದಲ್ಲಿ ಹೊಚ್ಚ ಹೊಸದಾದ ಗ್ರಾಹಕರಿಗೆ ಪಾರದರ್ಶಕವಾಗಿ ವಾಹನಗಳನ್ನು ನೋಡುವಂತೆ ನೂತನ ಷೊರೂಂ ತೆರೆದಿದ್ದು ಎಂದಿನಂತೆ ಗ್ರಾಹಕರು ಮತ್ತಷ್ಟು ಹೆಚ್ಚಿನ ಸೇವೆ ಹಾಗು ವ್ಯವಹಾರ ನಮ್ಮಲ್ಲೆ ಮಾಡುವಂತೆ ಮಾಲಿಕ ಸುಬ್ಬಣ್ಣನವರು ಜನತೆಯಲ್ಲಿ ಕೋರಿದ್ದಾರೆ.

ಗ್ರಾಹಕರ ನಂಬಿಕೆ ಮತ್ತು ವಿಶ್ಚಾಸ ನಮ್ಮ ದ್ಯೇಯ, ನಿಮ್ಮೆಲ್ಲರ ನೆಚ್ಚಿನ ಸಹಕಾರ ಪ್ರೋತ್ಸಾಹ ಮತ್ತಷ್ಟು ಹೆಚ್ಚಿನ ಸೇವೆ ಸಲ್ಲಿಸಲು ಪ್ರೇರಣೆಯಾಗಲಿದೆ ಎನ್ನುತ್ತಾರೆ ಷೊರೂಂ ಮಾಲಿಕರಾದ ಸುಬ್ಬಣ್ಣನವರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ್ ಮಿರಾಶಿ, ಶಿರಸಿ ಶ್ರೀ ಶಕ್ತಿ ಮೊಟಸ್೯ ಮಾಲಿಕ ರಾಜು ಬಳ್ಳಾರಿ, ಮುಂಡಗೋಡು ಶ್ರೀ ಶಕ್ತಿ ಮೊಟಸ್೯ ಮಾಲಿಕ ಮಹೇಶ್ ಹೆಗಡೆ, ಯಲ್ಲಾಪುರ ಶ್ರೀ ಶಕ್ತಿ ಮೊಟಸ್೯ ಮಾಲಿಕ ಸುಬ್ರಹ್ಮಣ್ಯ ಹೆಗಡೆ ಪತ್ನಿ ವಿಜಯಶ್ರೀ ಹೆಗಡೆ, ವಿಶಾಲ್ ವಾಳಂಬಿ, ಹಾಗು ಹಿತೈಷಿಗಳು, ಗ್ರಾಹಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.



















Prathidvani Yellapura