
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿ ಬಡವರಿಗಾಗಿ ಸ್ವಂತ ಸೂರು ನೀಡುವ ಸದುದ್ದೇಶದಿಂದ ಸ್ಲಂ ಬೋಡ್೯ ಅಡಿಯಲ್ಲಿ G+2 ಮಾದರಿಯಲ್ಲಿ ಹೆಬ್ಬಾರ್ ನಗರದಲ್ಲಿ ಮನೆಗಳನ್ನು ನಿರ್ಮಿಸಿದ್ದು ಮೂಲ ಉದ್ದೇಶ ಈಡೆರದೆ ಬಡವರಲ್ಲದ, ಈಗಾಗಲೆ ಸ್ವಂತ ಮನೆ ಹೊಂದಿದ್ದು ಕೆಲವು ಮನೆಗಳನ್ನು ಬಾಡಿಗೆಗೆ ನೀಡಿರುವ ಉಳ್ಳವರಿಗೆ ಮನೆ ನೀಡಿರುವುದು ಅಕ್ಷಮ್ಯ ವಾಗಿದೆ. ಚುನಾವಣಾಧಿಕಾರಿ ರಾಜಿನಾಮೆಗೆ ಆಗ್ರಹಿಸಿ ಪರಮ ಪವಿತ್ರ ಸಂವಿಧಾನ ಹಿಡಿದು ದೆಹಲಿ ರಸ್ತೆಏಲೆ ಮಲಗಿ ನಾಟಕವಾಡುವ ಕಾಂಗ್ರೆಸ್ ಬಡವರಿಗೆ ಅನ್ಯಾಯವಾಗಿದೆ ಎಂದು ಯಲ್ಲಾಪುರG+2 ಮನೆಗಳ ಮುಂದೆ ಸಂವಿಧಾನ ಪ್ರತಿ ಹಿಡಿದು ಪ್ರತಿಭಟಿಸಲಿ ಎಂದು ಭಾರತೀಯ ಜನತಾ ಪಕ್ಷದ ಯಲ್ಲಾಪುರ ತಾಲೂಕು ಮಂಡಲಾಧ್ಯಕ್ಷ ಪ್ರಸಾದ್ ಹೆಗಡೆ ಹೇಳಿದರು.

ಅವರು ಪಟ್ಟಣದ ಹೆಬ್ಬಾರ್ ನಗರದಲ್ಲಿ ಸ್ಲಂ ಬೊಡ್೯ ನಿಂದ ಬಡವರಿಗಾಗಿ ನಿರ್ಮಿಸಲಾದ ಮನೆಗಳನ್ನು ಅರ್ಹರಲ್ಲದವರು,ಸಶಕ್ತರಿಗೆ ಅವ್ಯವಹಾರದ ಮೂಲಕ ತಮಗಿಷ್ಟ ಬಂದವರಿಗೆ ನೀಡಿರುವುದರ ವಿರುದ್ದ ಯಲ್ಲಾಪುರ ಮಂಡಲ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸಿಡಿದೆದ್ದ ಸೋಮಣ್ಣ ಬಹಿರಂಗ ಚರ್ಚೆಗೆ ಶಾಸಕರಿಗೆ ಸವಾಲ್
ಕೊಳಚೆ ನಿರ್ಮೂಲನ ಮಂಡಳಿ ಅಡಿಯಲ್ಲಿ ಸ್ವಂತ ಸೂರಿಲ್ಲದ ಬಡವರಿಗೆಂದೆ ನಿರ್ಮಿಸಿದ ಮನೆಗಳನ್ನು ಅರ್ಹತೆ ಇರದವರಿಗೆ ನೀಡಿರುವುದೇ ಹೆಚ್ಚಾಗಿದೆ. ಯಲ್ಲಾಪುರಕ್ಕೆ ವ್ಯಾಪಾರ ದೃಷ್ಟಿಯಿಂದ ವಲಸೆ ಬಂದ ಉತ್ತರ ಭಾರತದ ಬಹುತೇಕ ಸೇಟುಗಳಿಗೆ ಬಡವರ ಮನೆ ನೀಡಲಾಗಿದೆ, ಉದಾಹರಣೆಗೆ ಭವರ್ ಲಾಲ್ ಎಂಬಾತ ಯಲ್ಲಾಪುರ ಪಟ್ಟಣದಲ್ಲಿ ಮೂರು ಬಟ್ಟೆ ಅಂಗಡಿಗಳನ್ನು ಹೊಂದಿದ್ದು,ಟಿನ್ ನಂಬರ್ ಇದ್ದು ಸರ್ಕಾರಕ್ಕೆ ವರಮಾನ ತೆರಿಗೆ ಭರಣ ಮಾಡುತ್ತಿದ್ದಾನೆ ಆತ ಬಡವ ನಿರ್ಗತಿಕ ಎಂದು ಮನೆ ನೀಡಲಾಗಿದೆ ಇದು ಭ್ರಷ್ಟಾಚಾರವಲ್ಲದೆ ಮತ್ತೇನು. ಶಾಸಕರು ಮುಖಾಮುಖಿ ಬಹಿರಂಗ ಚರ್ಚೆಗೆ ಬರಲಿ ದಾಖಲೆ ಸಹಿತ ಉತ್ತರಿಸಲು ಸಿದ್ದರಿದ್ದೇವೆ ಎಂದರು.

ಅರ್ಹ ಬಡವರಿಗೆ ಪೂರ್ಣ ಹಣಕೊಡಲಾಗದು ಎಂಬ ಕಾರಣಕ್ಕೆ ಪಟ್ಟಣ ಪಂಚಾಯತ್ ನಮ್ಮ ಅವಧಿಯಲ್ಲಿ 19 ವಾಡ್೯ ಸದಸ್ಯರು ತಮ್ಮ ವಾಡ್೯ ಅಭಿವೃದ್ಧಿಗೆ ಬಳಸಬೇಕಾದ ಹಣ ನೀಡಿದ್ದು ಮತ್ತಷ್ಟು ಕೊರತೆಯನ್ನು ಶಾಸಕರು ಸರ್ಕಾರದಿಂದ ಪಡೆದು ಬಡವರಿಗೆ ಮನೆ ನೀಡಲಿ.ಇಂತಹ ಅವ್ಯವಹಾರಗಳ ಬಗ್ಗೆ ಧ್ವನಿ ಎತ್ತಿದರೆ ಇಲ್ಲ ಸಲ್ಲದ ಕೇಸುಗಳನ್ನು ಹಾಕಿಸಿ ಭಯ ಹುಟ್ಟಿಸುವ ಬುದ್ದಿ ಬಿಟ್ಟು ನ್ಯಾಯವಾಗಿ ಮನೆ ಇಲ್ಲದ ಬಡವರಿಗೆ ಮನೆ ನೀಡಲಿ, ಶಾಸಕರ ಮಾತಿಗೆ ತಲೆಯಾಡಿಸುವ ಅಧಿಕಾರಿಗಳು ಕೊಂಚವಾದರು ಆತ್ಮಸಾಕ್ಷಿ ಒಪ್ಪುವಂತೆ ಮತ್ತು ಭಾರತದ ಸಂವಿಧಾನಕ್ಕೆ ಬೆಲೆ ನೀಡಿ ಅರ್ಹ ಬಡವರಿಗೆ ಮನೆ ನೀಡಬೇಕು ಹಾಗು ಅರ್ಹತೆ ಇಲ್ಲದೆ ಸುಳ್ಳು ಅಫಿಡವಿಟ್ ನೀಡಿ ಮೊಸದಲ್ಲಿ ಮನೆ ಪಡೆದವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಗುಡುಗಿದರು.

ನಾವು ಬಡವರೆಂದು ಸುಳ್ಳು ಅಫಿಡವಿಟ್ ನೀಡಿ ಮನೆ ಪಡೆದವರ ತನಿಖೆ ಆಗಬೇಕಿದೆ.ಗಣೇಶ್ ಪಾಟಣಕರ್ ವಕೀಲರು
ಹೆಬ್ಬಾರ್ ನಗರದಲ್ಲಿ ಈಗಾಗಲೆ ವಾಸ ಮಾಡುತ್ತಿರುವ ಬಹುತೇಕ ಉಳ್ಳವರು ಸುಳ್ಳು ಅಫಿಡವಿಟ್ ನೀಡಿ ಮನೆ ಪಡೆದಿದ್ದಾರೆ, ಸ್ವಂತ ಮನೆ ಇದೆ, ವರಮಾನ ತೆರಿಗೆ ಭರಣ ಮಾಡುತ್ತಿದ್ದಾರೆ, ಸ್ಲಂ ನಿವಾಸಿಗಳಲ್ಲ, ಕೆಲವರು ಖಾಯಂ ಯಲ್ಲಾಪುರ ನಿವಾಸಿಗಳಲ್ಲ ಆದರು ಸುಳ್ಳು ಸುಳ್ಳು ಅಫಿಡವಿಟ್ ನೀಡಿರುವುದು ಕಾನೂನು ಕಣ್ಣಿಗೆ ಮಣ್ಣೆರಚಿದ್ದು ಮಹಾ ಅಪರಾದವಾಗಿದೆ. ಅಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕಿದೆ. ಇಲ್ಲವಾದಲ್ಲಿ ಅಫಿಡವಿಟ್ ಗೆ ಯಾವುದೆ ಮಾನ್ಯತೆ ಇಲ್ಲವಾಗುವ ಸಾದ್ಯತೆ ಇದೆ ಹಾಗು ಸುಳ್ಳು ಹೇಳಿ ಬಡವರ ಪಾಲು ಹೊಡೆಯುವವರಿಗೆ ಬುದ್ದಿ ಬರಲಿದೆ ಎಂದು ಹಿರಿಯ ವಕೀಲ ಬಿಜೆಪಿ ಪ್ರಮುಖ ಗಣೇಶ್ ಪಾಟಣ್ಕರ್ ಆಗ್ರಹಿಸಿದರು

ಚುನಾವಣಾ ನೀತಿಸಂಹಿತೆ ಹಿನ್ನೆಲೆಯಲ್ಲಿ ಪ್ರತಿಭಟನೆ ತೀವ್ರಸ್ವರೂಪದಲ್ಲಿ ನಡೆಸಲಾಗದ ಕಾರಣ ಸಾಂಕೇತಿಕವಾಗಿ ಪ್ರತಿಭಟಿಸಿ ಮನವಿ ಸಲ್ಲಿಸಲಾಯಿತು ಪ್ರತಿಬಾರಿ ಮನವಿ ಸಲ್ಲಿಸುತ್ತಿದ್ದು ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಬರುವಂತೆ ತನಿಖೆ ಮಾಡಿ ಎಂದು ಆಗ್ರಹಿಸಲಾಯಿತು. ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕೇಶವ ಚೌಗುಲೆ ಮನವಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ರಾಘವೇಂದ್ರ ಭಟ್, ವಕೀಲ ಗಣೇಶ್ ಪಾಟಣಕರ, ಜಿಲ್ಲಾ ಬಿಜೆಪಿ ಪ್ರಮುಖ ಉಮೇಶ್ ಭಾಗ್ವತ್, ನಟರಾಜ್ ಗೌಡರ್, ರವಿ ದೇವಾಡಿಗ, ವಿನೋದ ತಳೇಕರ್ ಹಾಗು ಇನ್ನಿತರ ಪ್ರಮುಖರು, ಸಾರ್ವಜನಿಕರು ಉಪಸ್ಥಿತರಿದ್ದರು.
















Prathidvani Yellapura