
ಪ್ರತಿಧ್ವನಿ ಯಲ್ಲಾಪುರ : ಸನಾತನ ಪದ್ದತಿ,ಪರಂಪರೆಗಳು ಹಾಗು ಮೌಲ್ಯಾಧಾರಿತ ಜೀವನ ಕ್ರಮಕ್ಕೆ ಸನ್ಮಾರ್ಗ ತೋರುವ ಹಿಂದೂ ಧರ್ಮದ ಜೀವಾಳ ದೈವ ಗ್ರಂಥಗಳಾದ ರಾಮಾಯಣ ಮತ್ತು ಮಹಾ ಭಾರತ ಕುರಿತು ಭವಿಷ್ಯದ ಪೀಳಿಗೆಗೆ ಜಾಗೃತಗೊಳಿಸುವ ನಿಟ್ಟಿನಲ್ಲಿ ಸತತ ಎಂಟು ವರ್ಷಗಳಿಂದ ಗ್ರಂಥಗಳ ಕುರಿತು ಪರೀಕ್ಷೆ ನಡೆಸಿ ಬಹುಮಾನ ನೀಡುತ್ತಾ ಬರಲಾಗಿದೆ.

ಪ್ರಸಕ್ತ ವರ್ಷವು ಸಹ “ಓಂಕಾರ ಯೋಗಾ ಕೇಂದ್ರ, ವಿಶ್ವ ದರ್ಶನ ಶಿಕ್ಷಣ ಸಮೂಹ ಹಾಗು ಥ್ಯಾಂಕ್ಯೂ ಯೂನಿವಸ್೯ ಅಕಾಡಮಿ” ಯಲ್ಲಾಪುರ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ ಅಕ್ಟೋಬರ್, 31 ರಂದು ಶನಿವಾರ ಮದ್ಯಾಹ್ನ 2-30 ರಿಂದ ವಿಶ್ವ ದರ್ಶನ ಶಿಕ್ಷಣ ಸಂಸ್ಥೆ ಆವರಣದಲ್ಲಿ ರಾಮಾಯಣ ಮತ್ತು ಮಹಾಭಾರತದ ಕುರಿತು ಲಿಖಿತ ಪರೀಕ್ಷೆ ನಡೆಸಲಿದ್ದು ಆಸಕ್ತರು ಭಾಗವಹಿಸಬಹುದಾಗಿದೆ ಎಂದು ಸಂಘಟಕರು ಪ್ರಕಟಣೆ ಹೊರಡಿಸಿದ್ದಾರೆ.
ಸ್ಪರ್ಧಾ ವಿವರಗಳು
⏺ ರಾಮಾಯಣ ಪರೀಕ್ಷೆಯು ಪ್ರಾಥಮಿಕ ವಿಭಾಗ 4 ರಿಂದ 7 ನೆ ತರಗತಿ.
⏺ ಮಹಾಭಾರತ ಪರೀಕ್ಷೆಯು ಪ್ರೌಢ ವಿಭಾಗ 8 ರಿಂದ 10 ತರಗತಿ.
⏺ ಆಕರ ಗ್ರಂಥಗಳು :- ಎಳೆಯರ ರಾಮಾಯಣ ⏺ಮಹಾಭಾರತ ( ಭಾರತ ಭಾರತಿ ಪ್ರಕಾಶನ ).
⏺ ಪ್ರಶ್ನೆಗಳು – ಬಹು ಆಯ್ಕೆಯ 50 ಪ್ರಶ್ನೆಗಳು.
ನಗದು ಬಹುಮಾನಗಳು.
5+5=10 ಬಹುಮಾನಗಳು.
ಪ್ರಥಮ ಬಹುಮಾನ – ₹ 2000
ದ್ವಿತೀಯ ಬಹುಮಾನ- ₹ 1,500
ತೃತೀಯ ಬಹುಮಾನ- ₹ 1000
ನಾಲ್ಕನೆ ಮತ್ತು ಐದನೆ ಬಹುಮಾನ ತಲಾ ₹ 1000
ವಿಶೇಷತೆಗಳು
ಅಂದೇ ಮೌಲ್ಯಮಾಪನ ಬಹುಮಾನ ವಿತರಣೆ.
ಮೌಲ್ಯಮಾಪನದ ಅವಧಿಯಲ್ಲಿ ಉಪಯುಕ್ತವಾದ ಶೀಘ್ರಗಣಿತ (ಅಬಾಕಸ್) ಕಲಿಸುವ ಹಾಗು ಜ್ಞಾಪಕಶಕ್ತಿ ವೃದ್ದಿಯ ಬಗ್ಗೆ ವಿಶೇಷ ಪರಿಣಿತರಿಂದ ಮಾಹಿತಿ ( ಪರಿಕ್ಷೆ ಬರೆಯದವರು ಸಹ ಇದರಲ್ಲಿ ಭಾಗವಹಿಸಬಹುದಾಗಿದೆ ಮುಂದೆ ಮೆಮೊರಿ ಬೂಸ್ಟ್ ಕ್ಲಾಸ್ ನಡೆಸಲಾಗುವುದು).
ಬಹುಮಾನ ವಿತರಣೆಯ ನಂತರ ಆರೋಗ್ಯ ವೃದ್ದಿಗೆ ಸಿತಾರ್ ವಾದನದೊಂದಿಗೆ ಯೋಗ ಮುದ್ರಾ ಪ್ರಾಯೋಗಿಕ ಕಾರ್ಯಕ್ರಮ ಸಿತಾರ ಕಲಿಯಲು ಸಹ ಆಸಕ್ತರು ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ
ಸುಭ್ರಾಯ ಭಟ್ -9482185480
ಶಿವಪ್ರಸಾದ ಭಟ್ – 9483501363
ಚಂದ್ರಣ್ಣಾ – 9900882727 ಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.














Prathidvani Yellapura