
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಪ್ರಸಿದ್ದ ಪುಣ್ಯಕ್ಷೇತ್ರ ಚಂದಗುಳಿ ಘಂಟೆ ಗಣಪನ ಸಾನಿದ್ಯದಲ್ಲಿ ಮಂಗಳವಾರ ದೇವಸ್ಥಾನ ಸಮಿತಿಯು ಸೇರಿದಂತೆ ಜ್ಞಾನ ತರಂಗಿಣಿ ಫೌಂಡೇಶನ್ ಮತ್ತು ಡಾ.ಅಗರ್ ವಾಲ್ ಕಣ್ಣಿನ ಆಸ್ಪತ್ರೆ ಹುಬ್ಬಳ್ಳಿ ಇವರ ಸಹಯೋಗದಲ್ಲಿ ಜರುಗಿದ ಕಣ್ಣಿನ ಉಚಿತ ತಪಾಸಣೆ ಶಿಭಿರ ಅತ್ಯಂತ ಯಶಸ್ವಿಯಾಯಿತು.


ಅಂಗಾರಕ ಸಂಕಷ್ಟಿಯ ಪುಣ್ಯ ದಿನದಂದು ಸಾರ್ಥಕತೆಯ ಭಾವದಲ್ಲಿ ಭಗವಂತನಿಗರ್ಪಿಸುವ ಭಕ್ತಿ ಬದ್ದತೆಯ ಪ್ರತೀಕವಾಗಿ ” ಕಣ್ಣಿನ ಉಚಿತ ತಪಾಸಣೆ ” ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಜರುಗಿದ್ದು ಸಾರ್ಥಕವಾಯಿತು. ದೊಡ್ಡ ದೊಡ್ಡ ನಗರ ಪ್ರದೇಶಗಳಲ್ಲಿ ಇಂತಹ ಶಿಭಿರ ನಡೆಸುವುದು ಸರಳವಾಗಲಿದೆ ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಅದರಲ್ಲೂ ಪವಿತ್ರ ಗಣಪನ ಸಾನಿದ್ಯದಲ್ಲಿ ಶಿಭಿರ ನಡೆಸಿದ್ದು ಸ್ಥಳೀಯ ನಾಗರಿಕರ ಮತ್ತು ದೇಗುಲಕ್ಕೆ ಬಂದ ಭಕ್ತರ ಪ್ರಶಂಸೆಗೆ ಪಾತ್ರವಾಯಿತು.


ಶಿಭಿರದಲ್ಲಿ 130 ದಿಗೆ ಕಣ್ಣಿನ ತಪಾಸಣೆ ಮಾಡಲಾಯಿತು, ದೇವಸ್ಥಾನದ ಪ್ರಮುಖ ಲಕ್ಷ್ಮೀ ನಾರಾಯಣ್ ಭಟ್ ಸಹಕಾರದಲ್ಲಿ ಘಂಟೆ ಗಣಪನಿಗೆ ಪೂಜೆ ಸಲ್ಲಿಸಿ ಶಿಭಿರ ಪ್ರಾಭಿಸಲಾಯಿತು, ಯಲ್ಲಾಪುರ ಪಿಐ ಆಗಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಯಾದ ರಮೇಶ್ ಹಾನಾಪುರ್ ಶಿಭಿರಕ್ಕೆ ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದು ಸಂಘಟಕರ ಸಂತಸಕ್ಕೆ ಕಾರಣವಾಯಿತು.

ವಿಶೇಷವಾಗಿ “ಜ್ಞಾನ ತರಂಗಿಣಿ ಫೌಂಡೇಶನ್ ಸಂಸ್ಥೆ” ತಾಲೂಕಿನಾದ್ಯಂತ ವಿವಿಧ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದ್ದು “ಅಪ್ಪು ವರಕ್” ಮುಂದಾಳತ್ವದಲ್ಲಿ ಸಮಾಜಮುಖಿ ಕಾರ್ಯಗಳು ಜರುಗುತ್ತಿದ್ದು ಇಲ್ಲಿಯವರೆಗೆ ಹಲವು ಆರೋಗ್ಯ ಶಿಭಿರ ನಡೆಸಲಾಗಿದೆ 1200 ಕ್ಕು ಅಧಿಕ ಫಲಾನುಭವಿಗಳು ಶಿಭಿರದ ಪ್ರಯೋಜನ ಪಡೆದಿದ್ದಾರೆ, 350 ಕ್ಕು ಹೆಚ್ಚು ವ್ಯಕ್ತಿ ವಿಕಸನ ಕಾರ್ಯಕ್ರಮ ನಡೆಸಲಾಗಿದೆ, ಅರಣ್ಯ ಪರಿಸರ ಜಾಗೃತಿ, ಸಸಿ ನೆಡುವುದು ಸ್ವಚ್ಚತಾ ಕಾರ್ಯ, ಶಿಕ್ಷಣಕ್ಕೆ ಸಂಬಂಧಿಸಿದ ಸೇವೆ, ಸೇರಿದಂತೆ ಸಮಾಜಮುಖಿ ಸೇವೆಯಲ್ಲಿ ತೊಡಗಿಕೊಂಡ ಜ್ಞಾನ ತರಂಗಿಣಿ ಫೌಂಡೇಶನ್ ಭವಿಷ್ಯದ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಮಾಜಿಕ ಕಳಕಳಿಯ ಸೇವಾ ಕಾರ್ಯಗಳಲ್ಲಿ ತೊಡಗಲಿದೆ. ಇದಕ್ಕೆ ಸಮಾಜದ ಹಿರಿಯರು,ಜನಪ್ರತಿನಿಧಿಗಳು, ಅಧಿಕಾರಿ ವರ್ಗ, ಇತರ ಸಂಘ ಸಂಸ್ಥೆಗಳ ಸಹಕಾರ ಹಾಗು ವಿಶೇಷವಾಗಿ ನಾಗರಿಕರ ಸಹಕಾರ ಅತ್ಯಂತ ಪ್ರಮುಖವಾಗಿದ್ದು ಮತ್ತಷ್ಟು ಉತ್ತಮ ಕೆಲಸಗಳಿಗೆ ಪ್ರೇರಣೆಯಾಗಲಿದೆ. ಅಪ್ಪು ವರಕ್, ಜ್ಞಾನ ತರಂಗಿಣಿ ಫೌಂಡೇಶನ್ ಸ್ಥಾಪಕಾಧ್ಯಕ್ಷ.ಯಲ್ಲಾಪುರ











Prathidvani Yellapura