
ಪ್ರತಿಧ್ವನಿ ಯಲ್ಲಾಪುರ : ರಾಜ್ಯದಲ್ಲಿ ಹಾಲಿನ ದರ ಮತ್ತೊಮ್ಮೆ ಏರಿಕೆ ಕಾಣುವ ಸುಳಿವು ದೊರೆಯುತ್ತಿದ್ದು ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ತಡವಾಗುತ್ತಿದೆ. ಹಾಲು ಉತ್ಪಾದಕ ಒಕ್ಕೂಟಗಳು ಪ್ರತಿ ಲೀಟರ್ ಗೆ 10 ರುಪಾಯಿ ಹೆಚ್ಚಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದವು, ಬಲ್ಲ ಮೂಲಗಳ ಪ್ರಕಾರ ಲೀಟರ್ ಗೆ 5 ರಿಂದ 8 ರುಪಾಯಿ ವರೆಗೆ ಹೆಚ್ಚಿಸುವ ಸಾದ್ಯತೆ ಬಗ್ಗೆ ಮಾಹಿತಿ ದೊರೆಯುತ್ತಿದೆ. ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣ ಆಯೋಗಕ್ಕೆ ಪತ್ರ ಬರೆದು ಅನುಮತಿ ಪಡೆಯಲಿದ್ದಾರೆ. ದರ ಹೆಚ್ಚಳ ಮಾಡುವುದರಿಂದ ರೈತರಿಗೆ ವರವಾದರೆ ಗ್ರಾಹಕರಿಗೆ ಶಾಪವಾಗಲಿದೆ ಎಂಬುದು ಗ್ರಾಹಕರ ಅಭಿಪ್ರಾಯವಾಗಿದೆ.

ಬಹುತೇಕ ನಿತ್ಯ ಬಳಕೆ ವಸ್ತುಗಳ ಬೆಲೆ ಹೆಚ್ಚಳವಾದಾಗ ಅದರ ನೇರ ಪರಿಣಾಮ ಎದುರಿಸುವುದು ಬಡ ಮದ್ಯಮ ವರ್ಗದ ಕುಟುಂಬಗಳೆ ಆಗಿದೆ.ದರ ಏರಿಕೆ ಬೆನ್ನಲ್ಲೆ ಟೀ, ಕಾಫಿ ಬೆಲೆ ಏರಿಕೆಯಾಗಲಿದ್ದು ಹಾಲಿಗೆ ಸಂಬಂಧಿಸಿದಂತಹ ಪದಾರ್ಥಗಳ ಬೆಲೆ ಕೂಡ ಹೆಚ್ಚಳಗೊಳ್ಳಲಿದೆ.
ಹೈನುಗಾರಿಕೆ ನಡೆಸುವುದು ದುಬಾರಿ ಮತ್ತು ಆರ್ಥಿಕವಾಗಿ ನಷ್ಟ ಎನುವುದಾದರೆ ಅಂತಹ ವ್ಯವಸ್ಥೆ ಬಲಪಡಿಸಲು ಸರ್ಕಾರ ರೈತರಿಗಾಗಿ ಬೇರೆ ವ್ಯವಸ್ಥೆ ಮೂಲಕ ಅವರ ಬೆನ್ನಿಗೆ ನಿಲ್ಲಬೇಕೆ ಹೊರತು ನಿತ್ಯ ದುಡಿದ ಹಣದಲ್ಲಿ ಬದುಕುವ ಬಡ ಮದ್ಯಮವರ್ಗವನ್ನೆ ಪ್ರತಿ ಬಾರಿ ಗುರಿಯಾಗಿಸಿ ಹೊಟ್ಟೆ ಮೇಲೆ ಹೊಡೆಯುವುದು ಎಷ್ಟು ಸಮಂಜಸ ಇದು ರಾಜ್ಯದಲ್ಲಿ ಯಾವುದೇ ಸರ್ಕಾರ ಇದ್ದಾಗಲು ನಡೆಸುವ ಬಡವರ ಮೇಲಿನ ದಬ್ಬಾಳಿಕೆಯಾಗಿದೆ ಎನ್ನುತ್ತಾರೆ ಗ್ರಾಹಕರು.

ಹೈನುಗಾರ ರೈತರಿಗೆ ಕಷ್ಟವಾಗುತ್ತಿದೆ ಎಂದು ಹಾಲಿನ ಬೆಲೆ ಹೆಚ್ಚಿಸಿ ಮದ್ಯಮ ವರ್ಗದವರಿಂದ ಹೆಚ್ಚಿನ ಬೆಲೆ ಕಿತ್ತು ಕೊಡಲು ಹೊರಟಿರುವ ಸರ್ಕಾರ ಬಡಮದ್ಯಮ ವರ್ಗದ ಬದುಕು ದುಸ್ತರವಾಗಿದೆ ಎಂದಾಗ ಏಕೆ ಯಾರ ಬಳಿಯಾದರು ಹಣ ಕಿತ್ತು ಕೊಡುವುದಿಲ್ಲ.? ಇನ್ನಾದರು ಬಡವರ ಹೊಟ್ಟೆ ಮೇಲೆ ಹೊಡೆಯುವುದನ್ನು ಸರ್ಕಾರಗಳು ಬಿಡಬೇಕು ಎಂಬುದು ನೊಂದ ಗ್ರಾಹಕರ ಆಂತರ್ಯದ ನುಡಿಗಳಾಗಿವೆ.

ಇನ್ನು ಹಾಲಿನ ದರ ಹೆಚ್ಚುತ್ತಲೆ ಹಾಲಿನಿಂದ ತಯಾರಾಗುವ ಪದಾರ್ಥಗಳ ಬೆಲೆ ಅನಿವಾರ್ಯವಾಗಿ ಹೆಚ್ಚಳಗೊಳಿಸಬೇಕಾಗುತ್ತದೆ ಎಂದು ಬೆಂಗಳೂರು ಹೊಟೇಲ್ ಗಳ ಸಂಘದ ಗೌರವಾಧ್ಯಕ್ಷರಾದ ಪಿ.ಸಿ.ರಾವ್ ಅವರು ತಿಳಿಸಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು “ಪ್ರತಿದಿನ ನಾಲ್ಕು ಲಕ್ಷ ಲೀಟರ್ ನಷ್ಟು ಹಾಲನ್ನು ಹೊಟೇಲ್ ಗಳಲ್ಲಿ ಬಳಸಲಾಗುತ್ತಿದೆ. ಕೆಎಂಎಫ್ ಉತ್ಪಾದಿಸುವ ಶೇಕಡ 40ರಷ್ಟು ಹಾಲನ್ನು ಹೊಟೇಲ್ ನವರೇ ಖರೀದಿಸುತ್ತಾರೆ. ಆದ್ದರಿಂದ ದರ ಏರಿಕೆಯನ್ನು ಲೀಟರ್ ಗೆ 2 ರಿಂದ 3 ರೂಪಾಯಿಗೆ ಸೀಮಿತಗೊಳಿಸಬೇಕು. ಹೈನುಗಾರರಿಗೆ ಆಗುತ್ತಿರುವ ನಷ್ಟಕ್ಕೆ ಸರ್ಕಾರವೇ ಅನುದಾನ ಅಥವಾ ಇನ್ನಿತರ ಬೆಂಬಲ ನೀಡಬೇಕು. ಹೊಟೇಲ್ ಉದ್ಯಮ ರಾಜ್ಯದ ರೈತರ ಪರವಾಗಿದೆ. ಬೆಲೆ ಹೆಚ್ಚಳ ಅಧಿಕವಾದರೆ ಹೊರರಾಜ್ಯಗಳಿಂದ ಬರುವ ಹಾಲಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ನಂದಿನಿ ಹಾಲಿನ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಹುದು” ಎಂದು ಅವರು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಏನೆ ಬೆಲೆ ಹೆಚ್ಚಳ ಮಾಡಿದರು ಅದನ್ನು ಭರಿಸುವುದ ಮಾತ್ರ ಬಡ ಮದ್ಯಮವರ್ಗದ ಕುಟುಂಬದ ಹಣೆ ಬರಹ ಎಂಬಂತಾಗಿದೆ. ದುಡಿಯುವ ಓಟದ ನಡುವೆ ಈ ಎಲ್ಲಾ ಸಮಸ್ಯೆಗಳನ್ನು ಗಮನಿಸುವುದಕ್ಕಾಗದೆ ಕಾಲದ ಚಕ್ರದೊಂದಿಗೆ ಎಲ್ಲವನ್ನು ಭರಿಸುತ್ತಾ ಜೀವನದ ಪಥದಲ್ಲಿ ಎಳೆಯಲಾಗದ ಬಂಡಿಯನ್ನು ಕಷ್ಟ ಪಟ್ಟು ಎಳೆದೊಯ್ಯುತ್ತಿರುವ ಬಡ ಮದ್ಯಮವರ್ಗದ ವ್ಯಕ್ತಿ ಎಂದಾದರೊಮ್ಮೆ ಸಿಡಿಯಲಿದ್ದಾನೆ ಎಚ್ಚರ..ಎಚ್ಚರ..ಎಚ್ಚರ ಎನ್ಬುತ್ತಿದ್ದಾನೆ ನೊಂದ ಗ್ರಾಹಕ















Prathidvani Yellapura