Breaking News

ಯಲ್ಲಾಪುರದಲ್ಲಿ ಪುಟ್ಟ ಕಂದಮ್ಮನ ಮೇಲೆ ಬೀದಿ ನಾಯಿ ದಾಳಿ ಬದುಕಿದ್ದೇ ಹೆಚ್ಚು – ಜಾಗೃತ ಕ್ರಮಗಳಿಗೆ ಮುಂದಾದ ಯಲ್ಲಾಪುರ ಪಟ್ಟಣ ಪಂಚಾಯತ್

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿ ನಿಲ್ಲದ ಬೀದಿ ನಾಯಿಗಳ ಕಾಟ, ಎರಡು ವರ್ಷದ ಮಗುವಿನ ಮೇಲೆಯೂ ನಾಯಿ ದಾಳಿ ಮಾಡಿದ್ದು. ದಾಳಿಗೊಳಗಾದ ಪುಟ್ಟ ಕಂದ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ.

ಘಟನೆ ವಿವರ :- ಯಲ್ಲಾಪುರದ ಕಾಳಮ್ಮ ನಗರದಲ್ಲಿ ನಾಯಿಗಳ ಕಾಟ ಮಿತಿ ಮೀರಿದೆ. ಬೈಕ್ ಗ್ಯಾರೇಜ್ ಮಾಲಕ ಮುನ್ನಾ ಎಂಬುವರ ಪುತ್ರಿ ಆಶ್ರಯ ಕಾಲೋನಿಯಲ್ಲಿರುವ ಮನೆ ಅಂಗಳದಲ್ಲಿ ಆಟ ಆಡುವಾಗ ಅವರ ಮೇಲೆ ನಾಯಿ ದಾಳಿ ನಡೆದಿದೆ. ಎರಡು ವರ್ಷದ ಮಗು ಅಳುವುದನ್ನು ನೋಡಿ ಪಾಲಕರು ಮನೆಯಿಂದ ಹೊರ ಬಂದಾಗ ಮುಖದ ಮೇಲೆ ದೊಡ್ಡ ಗಾಯ ನೋಡಿದ್ದಾರೆ. ತಕ್ಷಣ ಮಗುವನ್ನು ಅವರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇನ್ನೂ ನಾಲ್ಕು ಜನರಿಗೆ ಇಲ್ಲಿ ನಾಯಿ ಕಚ್ಚಿದ ದೂರುಗಳಿವೆ.

ಯಲ್ಲಾಪುರ ಆಸ್ಪತ್ರೆಯಲ್ಲಿ ಬಾಲಕಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸದ್ಯ ಬಾಲಕಿ ಚೇತರಿಸಿಕೊಳ್ಳುತ್ತಿದ್ದು, ಮುಖದ ಮೇಲಿನ ಗಾಯ ವಾಸಿ ಮಾಡುವುದೇ ದೊಡ್ಡ ಸವಾಲಾಗಿದೆ. ಯಲ್ಲಾಪುರ ಪಟ್ಟಣದ ಇನ್ನೂ ಅನೇಕ ಕಡೆ ಬೀದಿ ನಾಯಿ ಹಾಗೂ ಬೀಡಾಡಿ ಹಂದಿಗಳ ಕಾಟ ಹೆಚ್ಚಿದೆ. ಅವುಗಳ ನಿಯಂತ್ರಣಕ್ಕೆ ಕ್ರಮ ಆಗಬೇಕು ಎಂದು ಜನ ಆಗ್ರಹಿಸುತ್ತಿದ್ದು ಸಮಾಜಿಕ ಜಾಲತಾಣದಲ್ಲಿ ಬಾಲಕಿಪರ ಕೂಗು ಜೋರಾಗಿದೆ.

ಇಂತಹ ಘಟನೆ ಎಲ್ಲಿಯು ಯಾರಿಗು ನಡೆಯಬಾರದು ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ. ಬೀದಿ ನಾಯಿಗಳಿಗೆ ನಮಗೆ ಇಷ್ಟ ಬಂದಂತೆ ಕ್ರನ ಕೈಗೊಳ್ಳಲು ಸಾಧ್ಯವಿಲ್ಲ ಕಾರಣ ದೇಶದ ಸರ್ವೋಚ್ಚ ನ್ಯಾಯಾಲಯದ ಹಲವು ನಿರ್ದೇಶನಗಳಿವೆ. ಸದ್ಯ ಆಗಿರುವ ಪ್ರಮಾದವನ್ನು ಗಮನದಲಿಟ್ಟು. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಈ ಸಂಬಂಧ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆಯಲಾಗಿದೆ. ನಾಯಿ ದಾಳಿಗೆ ಒಳಗಾದ ಬಾಲಕಿಗೆ ಚಿಕಿತ್ಸಾ ವೆಚ್ ವಾಗಿ 5 ಸಾವಿರ ನೀಡಿದ್ದು ಹೆಚ್ಚಿನ ಆರ್ಥಿಕ ಸಹಾಯಕ್ಕೆ ಶಾಸಕರ ಗಮನಕ್ಕೆ‌ತರಲಾಗಿದೆ. ಒಟ್ಟಿನಲ್ಲಿ ಜನರ ಜಾಗ್ರತೆಗಾಗಿ ಯಲ್ಲಾಪುರ ಪಟ್ಟಣ ಪಂಚಾಯತ್ ಸದಾ ಸಿದ್ದವಿದೆ. ಕೇಶವ ಚೌಗುಲೆ, ಮುಖ್ಯಾಧಿಕಾರಿ, ಪಟ್ಟಣ ಪಂಚಾಯತ್, ಯಲ್ಲಾಪುರ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಜನಸ್ನೇಹಿ,ಜನಾನುರಾಗಿ ಎಸಿಎಫ್ ಹಿಮವತಿ ಭಟ್ ಪದೋನ್ನತಿಯೊಂದಿಗೆ ಗೌರವದ ವರ್ಗಾವಣೆ ಬೆಂಗಳೂರಿಗೆ.

ವಿಧಾನಪರಿಷತ್ ಮಾಜಿ ಸದಸ್ಯ “ಶಾಂತಾರಾಮ್ ಸಿದ್ದಿ” ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ : ಅರಣ್ಯ ಇಲಾಖೆಯ ಕೆನರಾ ವೃತ್ತದಲ್ಲಿ ಉತ್ತಮ ಕರ್ತವ್ಯ …

Leave a Reply

Your email address will not be published. Required fields are marked *