

ಪ್ರತಿಧ್ವನಿ ಯಲ್ಲಾಪುರ : ಭಾರತದ ಭವ್ಯ ಪರಂಪರೆ ಸನಾತನ ಸಂಸ್ಕ್ರತಿ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿ ಬೆರೆತುಕೊಂಡಿದೆ. ಸಂಸ್ಕಾರವಂತ ಮತ್ತು ಸ್ವಾಭಿಮಾನಿ ಸಮಾಜ ನಿರ್ಮಾಣಕ್ಕೆ ಹಿಂದುತ್ವದ ತತ್ವ ಅನುಷ್ಟಾನ ಪ್ರಮುಖವಾಗಿದೆ. ಭವಿಷ್ಯದ ಯುವ ಪೀಳಿಗೆ ರಾಷ್ಟ್ರೀಯ ಭಕ್ತಿ ಧರ್ಮದ ಆಚರಣೆ ಮತ್ತು ರಕ್ಷಣೆಯ ಜವಾಬ್ದಾರಿ ಹೊರಬೇಕಿದೆ ಆ ನಿಟ್ಟಿನಲ್ಲಿ ಹಿಂದು ಸಮಾಜದ ಮಾತಪಿತೃ ಜಾಗೃತರಾಗಿ ಮಕ್ಕಳಿಗೆ ಮನೆಯಲ್ಲಿ ಧಾರ್ಮಿಕ ಪದ್ದತಿ ಆಚರಣೆ ಪರಂಪರೆ ಹೇಳಿಕೊಡಬೇಕಿದೆ ಎಂದು ಹಿಂದುತ್ವದ ಪ್ರಖರ ವಾಗ್ಮಿ ಹಾರಿಕಾ ಮಂಜುನಾಥ್ ತಮ್ಮ ದಿಕ್ಸೂಚಿ ಭಾಷಣದಲ್ಲಿ ಹೇಳಿದರು.

ಅವರು ಮುಂಡಗೋಡ ಹಿಂದೂ ಮಹಾ ಗಣಪತಿ ಮತ್ತು ಹಿಂದೂ ಜಾಗರಣ ವೇದಿಕೆ ಬಜರಂಗ ದಳ ವಿಶ್ವ ಹಿಂದೂ ಪರಿಷತ ಆವರ ಆಶ್ರಯದಲ್ಲಿ ನಡೆದ ” ವಿರಾಟ್ ಹಿಂದೂ ಸಮಾ ವೇಶ ” ದಲ್ಲಿ ದಿಕ್ಸೂಚಿ ಭಾಷಣಕಾರಿಣಿಯಾಗಿ ಭಾಗವಹಿಸಿ ಮಾತನಾಡಿದರು.

ಸಭೆಯಲ್ಲಿ ಕನ್ನೇರಿ ಶ್ರೀ ಗಳು ಹಿಂದು ಸಮಾಜ ಮತ್ತು ಸಂಸ್ಕೃತಿಗಳ ವಿಚಾರಗಳನ್ನು ವಿಸ್ತೃತ ರೂಪದಲ್ಲಿ ಪ್ರಸ್ತುತಪಡಿಸಿ ಸನ್ಮಾರ್ಗದೆಡೆಗೆ ಹೇಗೆ ಸಾಗಬೇಕೆಂದು ಆಶಿರ್ವಚನ ನೀಡಿದರು.


ಮುಖ್ಯ ಅತಿಥಿಯಾಗಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮುಖಂಡ ಹಿಂದು ಸಂಘಟನೆಗಳ ಪ್ರೋತ್ಸಹಿ ಉದ್ಯಮಿ ಬಾಲಕೃಷ್ಣ ನಾಯಕ್ ಆರ್ಥಿಕ ಸಹಾಯದೊಂದಿಗೆ ಸಭೆಯಲ್ಲಿ ಉಪಸ್ಥಿತರಿದ್ದು ವಿರಾಟ ಹಿಂದು ಸಮವೇಶಕ್ಕೆ ಶುಭಕೋರಿದರು.ಸಭೆಯಲ್ಲಿ ಸಮಿತಿಯರಿಗೆ ಗೌರವಿಸಿ ಸನ್ಮಾನಿಸಲಾಯಿತು.


ಸಭೆಯಲ್ಲಿ ಮಾಜಿ ಶಾಸಕ ವಿ.ಎಸ್.ಪಾಟೀಲ್, ಪ್ರಮುಖರಾದ ಎಲ್.ಟಿ.ಪಾಟೀಲ್, ವಿವಿಧ ಕ್ಷೇತ್ರಗಳ ಗಣ್ಯರು, ಸ್ಥಳೀಯ ಮುಖಂಡರು, ಧಾರ್ಮಿಕ ಕ್ಷೇತ್ರದ ಪ್ರಮುಖರು ಇನ್ನಿತರರು ಉಪಸ್ಥಿತರಿದ್ದರು. ಮೈದಾನದ ತುಂಬಾ ಎಂಟು ಸಾವಿರಕ್ಕು ಅಧಿಕ ಜನಸ್ತೋಮ ನೆರೆದಿದ್ದು ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.













Prathidvani Yellapura