Breaking News

ಯಲ್ಲಾಪುರ ತಾಲೂಕಿನ ಪ್ರವಾಸಿ ತಾಣಗಳ ಮೂಲಭೂತ ಸೌಕರ್ಯಗಳ ಕೊರತೆ ನೀಗಿಸಿ – ವಸೂಲಿ ನಿಲ್ಲಿಸಿ – ಶಂಶು ಮಾರ್ಕರ್.

ಪ್ರತಿಧ್ವನಿ ಯಲ್ಲಾಪುರ : ಉತ್ತರ ಕನ್ನಡ ಎಂದರೆ ಪ್ರವಾಸಿ ತಾಣಗಳ ತವರು. ಇಲ್ಲಿ ಸುಂದರ ಸಮುದ್ರತೀರ, ಹಚ್ಚ ಹಸಿರಾದ ಪ್ರಕೃತಿ, ಬೋರ್ಗರೆದು ದುಮ್ಮಿಕ್ಕುವ ಜಲಪಾತಗಳು, ಪುರಾತನ ಇತಿಹಾಸ ಸಾರುವ ನೂರಾರು ದೇವಾಲಯಗಳು, ವಿಶಿಷ್ಟ ಸಂಸ್ಕೃತಿ ಪರಂಪರೆ ಹೊಂದಿದ ಬುಡಕಟ್ಟು ಸಮುದಾಯಗಳು ಇನ್ನು ಹಲವು ವೈಶಿಷ್ಟ್ಯ ಹೊಂದಿ ಪ್ರವಾಸಿಗರ ಪ್ರವಾಸಕ್ಕೆ ಕೈ ಬೀಸಿ ಕರೆವ ಜಿಲ್ಲೆಯಾಗಿದೆ.

ವಿಶೇಷವಾಗಿ ಯಲ್ಲಾಪುರ ತಾಲೂಕು ಜಲಪಾತಗಳ ಆಗರವಾಗಿದೆ. ಇಲ್ಲಿನ ಸಾತೊಡ್ಡಿ ಮತ್ತು ಮಾಗೋಡು ಪ್ರವಾಸಿಗರ ನೆಚ್ಚಿನ ಜಲಪಾತಗಳಾಗಿದ್ದು ಜೇನುಕಲ್ಲು ಗುಡ್ಡದ ಸುಂದರ ನೋಟ ವರ್ಣನೆಗು ಮೀರಿದ್ದು ಇಂತಹ ಪ್ರವಾಸಿ ತಾಣಗಳು ಅಭಿವೃದ್ಧಿ ಹೊಂದಬೇಕೆ ವಿನಃ ವಂಚಿತವಾಗಬಾರದು. ಅದಕ್ಕೆ ಪ್ರಮುಖವಾಗಿ ಪ್ರಚಾಸಿಗರ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸುವ ಇಲಾಖೆ ಮತ್ತು ಅಧಿಕಾರಿಗಳು  ಶ್ರಮವಹಿಸಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯ ಬೇಕಿದೆ .

ಆದರೆ ದುರ್ದೈವ ಬರುವ ಪ್ರವಾಸಿಗರಿಗೆ ಸರಿಯಾದ ರಕ್ಷಣೆ ಇಲ್ಲ, ಸಮರ್ಪ ಮಾಹಿತಿ ನೀಡುವವರಿಲ್ಲ, ಪ್ರವಾಸಿ ತಾಣಗಳಲ್ಲಿ ನಶೆ ಪದಾರ್ಥಗಳಿಗೆ ಅವಕಾಶವಿಲ್ಲ ಎಂಬುದರ ಮಾಹಿತಿ ನೀಡುವ ಯಾವುದೆ ಫಲಕಗಳು ಸಹ ಇಲ್ಲದಿರುವುದು ದುರಂತವಾಗಿದೆ.

ಸಾತೋಡಿ, ಮಾಗೋಡು ಮತ್ತು ಜೇನುಕಲ್ ಗುಡ್ಡ ಪ್ರವಾಸ ಸ್ಥಳಗಳ ಅಭಿವೃದ್ಧಿಗಾಗಿ ಬಂದ ಹಣ ಪೋಲಾಗುತ್ತಿದೆ.  ಪ್ರವಾಸಿಗರಿಂದ ಯಾವುದೇ ಫೀ ವಸೂಲಿ ಮಾಡದೆ ಬಂದಂತ ಪ್ರವಾಸಿಗರಿಗೆ ರಕ್ಷಣೆ ನೀಡುವುದು ಅರಣ್ಯ ಇಲಾಖೆ ಅಧಿಕಾರಿಗಳ ಜವಾಬ್ದಾರಿ ಆಗಿದೆ. ಯಾವುದೇ ಕಾರಣಕ್ಕೂ ಪ್ರವಾಸಿಗರಿಗೆ ತೊಂದರೆಯಾಗದ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಬೇಕಿದ್ದು ಸಮರ್ಪಕ ಮಾಹಿತಿ ಇರುವ ಫಲಕಗಳನ್ನು ಅಳವಡಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಬಗೆಹರಿಸಬೇಕಿದೆ ಎಂದು ಕರ್ನಾಟಕ ರಕ್ಷಣಾ ವೇಧಿಕೆ ಗಜಪಡೆ ಯಲ್ಲಾಪುರ ತಾಲೂಕು ಅಧ್ಯಕ್ಷ ಶಂಶು ಮಾರ್ಕರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ದೇಶ ವಿದೇಶಗಳಿಂದ ಪ್ರವಾಸಿಗರು ಬರುವ ಸ್ಥಳಗಳಲ್ಲಿ ಪ್ರವಾಸಿಗರ ರಕ್ಷಣೆಗೆ ಯಾವ ವ್ಯವಸ್ಥೆ ಇಲ್ಲ, ಅಲ್ಲಿನ ಅಪಾಯಗಳ ಬಗ್ಗೆ ಮಾಹಿತಿ ನೀಡಿ ಎಚ್ಚರಿಸುವವರು ಇಲ್ಲ, ಕೆಲವೆಡೆ ಶುಲ್ಕ ವಸೂಲಿ ಮಾಡುತ್ತಿರುವುದರ ಬಗ್ಗೆ ಮಾಹಿತಿ ಲಭಿಸಿದ್ದು ಅದರ ಉಪಯೋಗವು ಸಹ ಪ್ರವಾಸಿಗರಿಗೆ ಆಗುತ್ತಿಲ್ಲ. ಸರ್ಕಾರದಿಂದ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಬರುವ ಹಣ ಏನಾಗುತ್ತಿದೆ ಎಂಬುದನ್ನು ತಾಲೂಕು ಆಡಳಿತ ಜನತೆಗೆ ಸ್ಪಷ್ಟಪಡಿಸಬೇಕಿದೆ. ಪ್ರವಾಸೋದ್ಯಮ ಅಭಿವೃದ್ಧಿ ಆಗಬೇಕೆಂದು ಹೇಳಿದರೆ ಸಾಲದು ಮಾಡಿ ತೋರಿಸಬೇಕಿದೆ. ಶಂಶು ಮಾರ್ಕರ್, ಅಧ್ಯಕ್ಷ,  ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಯಲ್ಲಾಪುರ ತಾಲೂಕ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಸೆ,6 ರಂದು ಯಲ್ಲಾಪುರದಲ್ಲಿ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಹಾಗು “ಉತ್ತಮ ಸೇವಾ ಸಂಸ್ಥೆ”, “ಕಾಯಕ ರತ್ನ” ಪ್ರಶಸ್ತಿ ಪ್ರಧಾನ ಸಮಾರಂಭ.

ಪ್ರತಿಧ್ವನಿ ಯಲ್ಲಾಪುರ : ಕರ್ನಾಟಕ ರಾಜ್ಯ ಸರ್ಕಾರದ ನೌಕರರ ಸಂಘ ಹಾಗೂ ಸಾಹಿತ್ಯ ಪರಿಷತ್ತು, ಬೆಂಗಳೂರು – ಉತ್ತರ ಕನ್ನಡ …

Leave a Reply

Your email address will not be published. Required fields are marked *