Breaking News

ಜಿಪಿಎಸ್ ಆಗದಿರುವ ಅರಣ್ಯ ಜಾಗವನ್ನು ಇಲಾಖೆ ಸ್ವಾಧೀನ ಪಡಿಸಿಕೊಂಡಿದೆ –  ದಬ್ಬಾಳಿಕೆ ಸತ್ಯಕ್ಕೆ ದೂರವಾದ ಮಾತು-ಹಿಮವತಿ ಭಟ್,ಎಸಿಎಫ್

ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ತಾಲೂಕಿನ ಶೀಗೆಪಾಲ ಗ್ರಾಮದ ರೈತ ಗುಡೇಪಾಲ  ರಾಮಚಂದ್ರ ಭಟ್ಟರಿಗೆ ಸೇರಿದ ಸುಮಾರು ಅರ್ಧ ಎಕರೆ ಅಡಕೆ ತೋಟವನ್ನು ಸ್ಥಳೀಯ ಅರಣ್ಯ ಇಲಾಖೆ ಫಾರೆಸ್ಟರ್ ಮತ್ತು ಗಾರ್ಡ್ ಗಿಡಗಳನ್ನು ಕಡಿದು,ಕಿತ್ತು ಧ್ವಂಸ ಮಾಡಿದ್ದಾರೆ ಎಂಬ ಸುದ್ದಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಅಪ್ಪಟ ಅರಣ್ಯ ಜಾಗವನ್ನು ಸ್ವಾಧೀನಪಡಿಸಿಕೊಂಡಿದ್ದೇವೆ ಮತ್ತು ಇದು ಜಿಪಿಎಸ್ ಆಗದ ಜಾಗ ಹಾಗು ಯಾವುದೆ ರೀತಿಯಲ್ಲಿ ಗಿಡಗಳನ್ನು ಕಿತ್ತು ಧ್ವಂಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಮ್ ಭಟ್ಟರ ಜಮೀನಿಗೆ ಜಿಪಿಎಸ್ ಮ್ಯಾಪ್ ಆಗಿರುವ ಸ್ಥಳವೆ ಬೇರೆ ಅಪ್ಪಟ್ಟ ಅರಣ್ಯವೆಂದು ಇಲಾಖೆಯ ಅಧೀನಕ್ಕೆ ಪಡೆದ ಜಾಗವೆ ಬೇರೆಯಾಗಿದೆ. ಈ ಸಂಬಂಧ ಸಂಬಂಧಿಸಿದ ಪ್ರಮುಖರಿಗೆ ಇಲಾಖೆಯಿಂದ ಸ್ಪಷ್ಟವಾದ ಮಾಹಿತಿ ರವಾನಿಸಲಾಗಿದೆ.


ಸ್ಥಳದಲ್ಲಿ ಯಾವುದೆ ರೀತಿಯ ಗಿಡಗಳ ಹಾನಿಯಾಗಿಲ್ಲ ಹೊಸದಾಗಿ ನೆಟ್ಟ ಅಡಕೆ ಗಿಡಗಳನ್ನು ತೆಗೆಯಲಾಗಿದ್ದು ಅದನ್ನು ಸಹ ಈಗಾಗಲೆ ಅವರು ಬೇರೆಡೆಗೆ ನೆಟ್ಟುಕೊಂಡಿದ್ದಾರೆ.

ಅರಣ್ಯ ಇಲಾಖೆಗೆ ಸಂಬಂಧಿಸಿದ ಮತ್ತು ಜಿಪಿಎಸ್ ಆಗದಿರುವ ಸ್ಥಳವನ್ನು ಇಲಾಖೆ ತನ್ನ ಅಧೀನಕ್ಕೆ ಪಡೆದುಕೊಂಡಾಗ ಇಲಾಖೆ ಮೇಲೆ ಗಂಭೀರ ಸ್ವರೂಪದ ಆರೋಪ ಹೊರಿಸಿ ಅಧಿಕಾರಿಗಳು ಜನ ವಿರೋಧಿಗಳು ಎಂಬಂತೆ ಬಿಂಬಿಸಲಾಗುತ್ತದೆ ಆದರೆ ನಿಜವಾದ ವಸ್ತು ಸ್ಥಿತಿ ಹಾಗಿರುವುದಿಲ್ಲ. ಹಾಗೊಂದು ವೇಳೆ ಅನಧಿಕೃತವಾದ ಅತಿಕ್ರಮಣ ಇಲಾಖೆ ತಡೆಯದೆ ಕುಳಿತರೆ ಭವಿಷ್ಯದ ಪೀಳಿಗೆಗೆ ಅರಣ್ಯವನ್ನು ಚಿತ್ರಪಟದಲ್ಲಿ ತೋರಿಸಬೇಕಾಗುತ್ತದೆ.
ಯಾವುದೆ ಅರಣ್ಯ ಅಧಿಕಾರಿಗಳು ಅತಿಕ್ರಮಣ ತೆರವುಗೊಳಿಸಿ ಆ ಜಾಗದಲ್ಲಿ ತಮ್ಮ ಸ್ವಂತಕ್ಕಾಗಿ ತೋಟ,ಗದ್ದೆ,ಮನೆ ಮಾಡುವುದಿಲ್ಲ ಅದು ಸರ್ಕಾರದ ಸ್ವತ್ತು ಅಂದರೆ ಸಮಸ್ತ ಸಾರ್ವಜನಿಕ ಸ್ವತ್ತು ಅದನ್ನು ಉಳಿಸಲೆಂದೆ ಇಲಾಖೆಯು ಅಸ್ತಿತ್ವದಲ್ಲಿರುವುದು. ಯಾವುದೆ ಅಧಿಕಾರಿ,ಸಿಬ್ಬಂದಿಗಳಿಗೆ ವೈಯಕ್ತಿಕ ಕಾರಣಗಳೇನು ಇರುವುದಿಲ್ಲ. ಅವರೆಲ್ಲರು ಸರ್ಕಾರದ ಆದೇಶ ಪಾಲಿಸುತ್ತ ನಮ್ಮದೆ ಪರಿಸರ ಕಾಪಾಡುವಲ್ಲಿ ಶ್ರಮಿಸುತ್ತಿರುತ್ತಾರೆ ಹೊರತು ಯಾವುದೆ ವೈಯಕ್ತಿಕ ಇಚ್ಛೆ ಇರುವುದಿಲ್ಲ ಎಂಬುದು ಪರಿಸರ ಪ್ರೇಮಿ ಒಬ್ಬರ ಮಾತಾಗಿದೆ.

ಶಿಗೇಪಾಲ ಗ್ರಾಮದ ರಾಮಚಂದ್ರ ಭಟ್ಟರಿಗೆ ಸೇರಿದ ಜಿಪಿಎಸ್ ಆಗಿರುವ ಜಾಗವನ್ನು ನಮ್ಮ ಅಧಿಕಾರಿಗಳು ವಶಪಡಿಸಿಕೊಂಡಿಲ್ಲ ಬದಲಾಗಿ ಜಿಪಿಎಸ್ ಆಗದಿರುವ ಅರ್ಧ ಎಕರೆಯಷ್ಟು ಅಪ್ಪಟ ಅರಣ್ಯ ಅತಿಕ್ರಮಣವನ್ನು ತೆರವುಗೊಳಿಸಲಾಗಿದೆ. ಅದನ್ನು ಸಹ ಎರಡು ದಿನಗಳ ಮುಂಚಿತವಾಗಿಯೆ ಮಾಹಿತಿ ನೀಡಿದ್ದಾಗಿತ್ತು. ಹೊಸದಾಗಿ ಅತಿಕ್ರಮಣ ಮಾಡಲು ಇಲಾಖೆ ಬಿಡುವುದಿಲ್ಲ ಹಾಗು ಸರ್ಕಾರದ ಆದೇಶ ಚಾಚುತಪ್ಪದೆ ಪಾಲಿಸುವುದು ನಮ್ಮ ಇಲಾಖೆಯ ಜವಾಬ್ದಾರಿ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಸ್ಥಳದ ನಕ್ಷೆ ಸಹಿತವಾದ ಮಾಹಿತಿಯನ್ನು ಪ್ರಮುಖರಿಗೆ ನೀಡಲಾಗಿದೆಹಿಮವತಿ ಭಟ್, ಎಸಿಎಫ್, ಯಲ್ಲಾಪುರ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ದೇಶದ ಪ್ರಧಾನಿ,ಅರಣ್ಯ ಸಚಿವರು ಮತ್ತು ಸಚಿವಾಲಯದ ಕಾರ್ಯದರ್ಶಿಯವರಿಗೆ ಪಶ್ಚಿಮ ಘಟ್ಟಗಳ ವಿಚಾರದಲ್ಲಿ ಮದ್ಯ ಪ್ರವೇಶಿಸುವಂತೆ ಚಂದ್ರಕಾಂತ ಕೊಚರೇಕರ್ ಮನವಿ

ಪ್ರತಿಧ್ವನಿ ಯಲ್ಲಾಪುರ :  ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸುವ ಸಂಬಂಧ 27-07-2026ರಂದು …

Leave a Reply

Your email address will not be published. Required fields are marked *