Breaking News

ಯಲ್ಲಾಪುರ ಕುದಲೆ ಕುಟುಂಬದ ಕುಡಿಗೆ ಒಲಿದ “ವಿಶ್ವಕರ್ಮ ರಾಷ್ಟ್ರೀಯ ಪ್ರಶಸ್ತಿ “


ಪ್ರತಿಧ್ವನಿ ಯಲ್ಲಾಪುರ : ಹಲವು ದಶಕಗಳ ಹಿಂದಿನ ಯಲ್ಲಾಪುರದ ಮೂಲ ಕುಟುಂಬಗಳಲ್ಲಿ ಒಂದೆನಿಸಿಕೊಂಡ ಕುದಲೆ ಕುಟುಂಬದ ನಂದಕಿಶೋರ ಕುದಲೆ ಅವರಿಗೆ “ವಿಶ್ವಕರ್ಮ ರಾಷ್ಟ್ರೀಯ ಪ್ರಶಸ್ತಿ ” ಲಭಿಸಿದ್ದು ಕುದಲೆ ಕುಟುಂಬದ ನಿಕಟವರ್ತಿಗಳಿಗೆ ವಿಶೇಷವಾಗಿ ತಿಲಕ್ ಚೌಕ್ ಸಮಸ್ತ ಕುಟುಂಬಗಳಿಗೆ ಸಂತಸ ತಂದಿದೆ.


ರಾಷ್ಟ್ರ ಪ್ರಶಸ್ತಿ ಪಡೆದ ನಂದಕಿಶೋರ ಕುದಲೆ ಹುಟ್ಟಿದ್ದು ಬೆಳೆದಿದ್ದು ಪ್ರಾಥಮಿಕ ಹಾಗು ಪ್ರೌಡ ಶಿಕ್ಷಣ ಪಡೆದದ್ದು ಸಹ ಇದೇ ಯಲ್ಲಾಪುರದ ನೆಲದಲ್ಲೆ. ಕುದಲೆ ಕುಟುಂಬದ ವಿಶೇಷತೆ ಎಂದರೆ ಅವರು ಎಂದಿಗು ಹಿಗ್ಗಲಿಲ್ಲ,ಅಹಂಕಾರ ಪಡಲಿಲ್ಲ ಹುಟ್ಟಿದ ಊರನ್ನು ಎಂದಿಗು ನಿರ್ಲಕ್ಷಿಸಲಿಲ್ಲ ಅದು ಆ ಕುಟುಂಬದ ದೊಡ್ಡತನ ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲವರು. ನಂದಕಿಶೋರ ಕುದಲೆ ದೇಶದ ಪ್ರತಿಷ್ಠಿತ ಶಿರ್ಕೆ ಅಂಡ್ ಶಿರ್ಕೆ ಕಂಪನಿ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದು ಬೆಳಗಾವಿಯ ಸುವರ್ಣಸೌಧ ಕಟ್ಟಿಸಿದ ಉಸ್ತುವಾರಿ ಪ್ರಮುಖ ಅಭಿಯಂತರರಲ್ಲಿ ನಮ್ಮೂರಿನ ಮಗ ನಂದಕಿಶೋರ ಕುದಲೆ ಸಹ ಒಬ್ಬರು.ಅವರ ನೇತೃತ್ವದಲ್ಲಿ ಹಲವು ದೊಡ್ಡ ದೊಡ್ಡ ನಿರ್ಮಾಣಗಳು ನಡೆದಿದೆ ನಡೆಯುತ್ತಲಿದೆ ಆ ಎಲ್ಲಾ ಶ್ರೇಯದಲ್ಲಿ ನಂದಕಿಶೋರ ಕುದಲೆ ಹೆಸರಿದೆ ಎಂಬುದೆ ಯಲ್ಲಾಪುರಕ್ಕೆ ಹೆಮ್ಮೆ ತರುವ‌ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಶ್ವಕರ್ಮ ಪ್ರಶಸ್ತಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಉಪಸ್ಥಿತಿಯಲ್ಲಿ ಪಡೆದು ಅಭಿನಂದನೆಗೆ ಪಾತ್ರರಾಗಿದ್ದಾರೆ.


ನಂದಕಿಶೋರ ಕುದಲೆ ತನ್ನ ಬಳಿಗೆ ಸಹಾಯ ಎಂದು ಬಂದವರಿಗೆ  ಇಲ್ಲ ಎನ್ನದೆ ಕೈಲಾದ ಸಹಾಯ ಮಾಡುತ್ತಲೆ ಜನ‌ಮಾನಸದಲ್ಲಿ ಹೆಸರಾದ ಅತ್ಯಂತ ಹೆಮ್ಮೆಯ ಸಂಗತಿ
ಹುಟ್ಟೂರಿನ ಮೇಲಿನ ಪ್ರೀತಿ ಮತ್ತು ಅಭಿಮಾನದಿಂದ ಇಂದಿಗು ಹಲವು ಬಡ ಮತ್ತು ಪ್ರತಭಾವಂತ ಯಲ್ಲಾಪುರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಶಿಕ್ಷಣಕ್ಕೆ ಪ್ರೋತ್ಸಾಹಿಸುತ್ತಿದ್ದಾರೆ, ಧಾರ್ಮಿಕ ಸೇವೆಯಲ್ಲಿಯು ಮುಂದಿರುವ ಕುದಲೆ ಕುಟುಂಬ ದೇವಸ್ಥಾನಗಳಿಗೆ ತಮ್ಮಿಂದಾದ ಆರ್ಥಿಕ ದೇಣಿಗೆ ನೀಡುತ್ತಾ ಬಂದಿದ್ದಾರೆ, ವಿಶೇಷವಾಗಿ ತಿಲಕ್ ಚೌಕ್ ಸಭಾಭವನಕ್ಕೆ ಹೆಚ್ಚಿನ ಧನಸಹಾಯ ನೀಡಿದ ಕುಟುಂಬ ಎಂದರೆ ಕುದಲೆ ಕುಟುಂಬ, ಪುರಾತನ ಈಶ್ವರ ದೇವಸ್ಥಾನಕ್ಕೆ ನಂದಿ ವಿಗ್ರಹ ನೀಡಿ ಭಕ್ತಿ ಸಮರ್ಪಿಸಿದ್ದಾರೆ, ಬಹು ಮುಖ್ಯವಾಗಿ ಯಲ್ಲಾಪುರದ ಗ್ರಾಮದೇವಿಯರಿಗೆ ಅರ್ಪಿಸಿದ ಬಂಗಾರದ ಕಿರೀಟಕ್ಕೆ ಹೆಚ್ಚಿನ ಬಂಗಾರ ನೀಡಿ ಯಲ್ಲಾಪುರ ಜನತೆಯ ಹೃದಯ ಗೆದ್ದಿದ್ದಾರೆ ಬಹಳ ಅಪರೂಪದ ವ್ಯಕ್ತಿತ್ವದ ಕುದಲೆ ಕುಟುಂಬದ ಎಲ್ಲಾ ಸದಸ್ಯರು ಯಲ್ಲಾಪುರದ ಜನಮಾನಸದಲ್ಲಿ ಉನ್ನತ ಸ್ಥಾನ ಸಂಪಾದಿಸಿದ್ದಾರೆ. ಎಂದಿಗು ಅಂತಸ್ತಿನ ಅಹಂ ಅವರನ್ನು ಹಾಳು ಮಾಡಲಿಲ್ಲ ಮತ್ತು ಬಲಗೈಯಲ್ಲಿ ಮಾಡುದ ದಾನ ಎಡಗೈಗು ತಿಳಿಯದಂತೆ ಎಲೆಮರೆಕಾಯಿಯಂತೆ ಉಳಿದರೆ ವಿನಹಃ ಎಲ್ಲಿಯು ಪ್ರಚಾರ ಪಡೆಯಲಿಲ್ಲ ಅಂತಹ ಮೇರು ಕುಟುಂಬ ಕುದಲೆ ಕುಟುಂಬ ಅಂತಹ ಕುಟುಂಬದ ನಂದಕಿಶೋರ ಕುದಲೆ ರಾಷ್ಟ್ರ ಪ್ರಶಸ್ತಿ ಗಳಿಸಿದ ಹಿನ್ನೆಲೆಯಲ್ಲಿ ಯಲ್ಲಾಪುರದ ಸಮಸ್ತ ಕುಟುಂಬಗಳು ಶುಭಕೋರಿದ್ದು ತಾಯಿ ಗ್ರಾಮದೇವಿಯ ಅನುಗ್ರಹ ಸದಾ ಅವರಿಗಿರಲಿ ಇನ್ನಷ್ಟು ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಲಭಿಸಲಿ ರಾಷ್ಟ್ರ ಮಟ್ಟದಲ್ಲಿ ಯಲ್ಲಾಪುರದ ಹೆಸರು ಚಿರಸ್ಥಾಯಿಯಾಗಿಸಲಿ ಎಂದು ಅಭಿನಂದಿಸಿದ್ದಾರೆ..

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಸೃಜನಶೀಲತೆಯು ವಿದ್ಯಾರ್ಥಿಗಳ ಸಾಧನೆಯ ಪ್ರತಿಬಿಂಬವಾಗಿದೆ – ರೇಖಾ ನಾಯ್ಕ್.ಬಿ.ಇ.ಒ

ಪ್ರತಿಧ್ವನಿ ಯಲ್ಲಾಪುರ : ಗ್ರಾಮೀಣ ಪ್ರದೇಶದಲ್ಲಿನ ಕಲಿಕೆ ಅನನ್ಯವಾದ ಅನುಭವ ನೀಡುತ್ತದೆ.ಶಿಕ್ಷಕ ಮಾರ್ಗದರ್ಶನದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸಿ …

Leave a Reply

Your email address will not be published. Required fields are marked *