
ಪ್ರತಿಧ್ವನಿ ಯಲ್ಲಾಪುರ : ತಾಲೂಕು ಪಂಚಾಯತ್ ಸಭಾ ಭವನದಲ್ಲಿ ಏ,8 ಬುಧವಾರ ವಿವಿಧ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನ ಸಭೆ ಶಾಸಕ ಶಿವರಾಮ ಹೆಬ್ಬಾರ್ ಅಧ್ಯಕ್ಷತೆಯಲ್ಲಿ ಜರುಗಿತು.

ಸಭೆಗು ಮುನ್ನ ವಿವಿಧ ಯೋಜನೆಗಳ ಅಡಿಯಲ್ಲಿ ಆಯ್ಕೆಯಾದ 70 ಫಲಾನುಭವಿಗಳಿಗೆ ಸರ್ಕಾರದ ಸವಲತ್ತು ನೀಡಲಾಯಿತು. ಟಿಲ್ಲರ್,ತ್ರಿಚಕ್ರ ವಾಹನ, ಹೊಲಿಗೆ ಮಿಷನ್,
ಮೀನು ಬಲೆ ಮತ್ತು ಸಲಕರಣೆಗಳು, ಪಂಪ್ ಸೆಟ್, ನೀರಾವರಿ ಸಲಕರಣೆಗಳು,ಕೃಷಿ ಕಾಯಕದ ಸಲಕರಣೆ ಸೇರಿದಂತೆ ವಿವಿಧ ಸವಲತ್ತುಗಳನ್ನು ಶಾಸಕ ಶಿವರಾಮ ಹೆಬ್ಬಾರ್ ವಿತರಿಸಿದರು.

ನಂತರ ಸಭಾ ಭವನದೊಳಗೆ ವಿವಿಧ ಇಲಾಖೆಗಳ ಪ್ರಮುಖ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನ ಸಭೆ ನಡೆಯಿತು.
ಸರ್ಕಾರದ ಯಾವುದೆ ಯೋಜನೆಗಳು ಜಾರಿಯಾಗಲು ಮತ್ತು ಜನ ಮಾನಸಕ್ಕೆ ಸಮರ್ಪಕವಾಗಿ ತಲುಪಲು ಅಧಿಕಾರಿಗಳ ಶ್ರಮ ಬಹುಮುಖ್ಯವಾಗಿದೆ. ಆ ದಿಸೆಯಲ್ಲಿ
ತಾಲೂಕಿನ ಎಲ್ಲಾ ಇಲಾಖೆಗಳ ಕಾರ್ಯ ವೈಖರಿ ಶ್ಲಾಘನೀಯ. ಜನಪ್ರತಿನಿಧಿಗಳು ಜನರಿಗೆ ಬೇಕಾದ ಸವಲತ್ತುಗಳನ್ನು ಮತ್ತು ಆದೇಶಗಳನ್ನು ಮಾಡಬಹುದೆ ಹೊರತು ಜನರಿಗೆ ತಲುಪಿಸುವ ಕಾರ್ಯ ಅಧಿಕಾರಿಗಳಿಂದಲೆ ಆಗಬೇಕಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ಇದೇ ಸಂದರ್ಭದಲ್ಲಿ ದೇಶಕ್ಕೆ ಅನ್ನ ನೀಡುವ ಕಾಯಕ ಅಂದರೆ ತಾಲೂಕಿನಲ್ಲಿ ಅತಿ ಹೆಚ್ಚು ಭತ್ತ ಬೆಳೆದ ಮೂವರು ರೈತರಿಗೆ ಸನ್ಮಾನಿಸಿ ಗೌರವಿಸಿ ಪ್ರಶಸ್ತಿ ನೀಡಲಾಯಿತು.

ಅರಣ್ಯ ಇಲಾಖೆ ಅಧಿಕಾರಿಗಳಿಂದ ಪ್ರಾರಂಭಗೊಂಡ ಪ್ರಗತಿ ಪರಿಶೀಲನ ಸಭೆ ತಾಲೂಕಿನ ವಿವಿಧ ಇಲಾಖೆಗಳ ಪ್ರಮುಖ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು. ಕೆಲವು ಪ್ರಮುಖ ವಿಚಾರಗಳ ಕುರಿತು ಚರ್ಚೆ, ಸಂವಾದ ನಡೆದು ಶಾಸಕರು ಕೆಲವು ನಿರ್ದೇಶನ ನೀಡಿದರು.ಪ್ರಮುಖವಾಗಿ ಬೆಸಿಗೆ ನಡೆಯುತ್ತಿದ್ದು ಎಲ್ಲಿಯು ನೀರಿಗೆ ಕೊರತೆಯಾಗದಂತೆ ಸ್ಥಳೀಯ ಆಡಳಿತ ಎಚ್ಚರಿಕೆ ವಹಿಸಬೇಕು ಮತ್ತು ಅರಣ್ಯ ಇಲಾಖೆ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಜನರೊಂದಿಗೆ ಸಂಯಮದಿಂದ ನಡೆದುಕೊಳ್ಳುತ್ತಿದ್ದು ಇಲಾಖೆಗೆ ಅಭಿನಂದನೆ ಸಲ್ಲಿಸಿದರು.

ವೇದಿಕೆ ಯಲ್ಲಿ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಪಾಂಡು ಕೆ.ಹೆಚ್, ತಹಶಿಲ್ದಾರ್ ಚಂದ್ರಶೇಖರ ಹೊಸಮನಿ, ಕಾರ್ಯ ನಿರ್ವಾಹಕ ಅಧಿಕಾರಿ ರಾಜೇಶ್ ಧನವಾಡಕರ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ್ ಮಿರಾಶಿ ನಾಮನಿರ್ದೇಶಿತ ಸದಸ್ಯರಾದ ರಾಧಾ ಹೆಗಡೆ, ಲಾರೆನ್ಸ್ ಸಿದ್ದಿ, ದ್ಯಾಮಣ್ಣ ಭೋವಿ ವಡ್ಡರ್, ಎಂ.ಡಿ.ಮುಲ್ಲಾ,ಪ್ರಶಾಂತ ಸಭಾಹಿತ್ ಉಪಸ್ಥಿತರಿದ್ದರು.
ತಾಲೂಕಿನ ಎಲ್ಲಾ ಇಲಾಖೆಗಳ ಪ್ರಮುಖ ಅಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.





Prathidvani Yellapura