
ಪ್ರತಿಧ್ವನಿ ಯಲ್ಲಾಪುರ : ಜನ ಶಿಕ್ಷಣ ಸಂಸ್ಥಾನ, ಉತ್ತರ ಕನ್ನಡ, ಜಿಲ್ಲೆಯ ಒಂದು ವೃತ್ತಿಪರ ಸಂಸ್ಥೆ ಆಗಿ, ನೂರಾರು ಜನರ ಸ್ವಾವಲಂಬಿ ಬದುಕಿಗೆ ದಾರಿ ಮಾಡಿಕೊಟ್ಟಿದೆ ಎಂದು ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ, ಆರ್. ಡಿ ಜನಾರ್ಧನ ಅಭಿಪ್ರಾಯ ಪಟ್ಟರು.
ಅವರು ಜನ ಶಿಕ್ಷಣ ಸಂಸ್ಥಾನ ಉತ್ತರ ಕನ್ನಡ ಇದರ ಆಶ್ರಯದಲ್ಲಿ ಯಲ್ಲಾಪುರದ ಕ್ರಿಯೇಟಿವ್ ಸಂಸ್ಥೆ ಆವರಣದಲ್ಲಿ ನಡೆದ “ ತರಬೇತಿ ಸಂಪನ್ಮೂಲವ್ಯಕ್ತಿಗಳಿಗಾಗಿ ನಡೆದ ಒಂದು ದಿನದ 2 ನೇ ಹಂತದ ಸಾಮರ್ಥ್ಯಾಭಿವೃದ್ಧಿ ತರಬೇತಿ ಶಿಬಿರ” ಉದ್ಘಾಟಿಸಿ ಮಾತನಾಡಿದರು.

ಒಂದು ಸಂಸ್ಥೆ ಕ್ರಿಯಾಶೀಲವಾಗಿರಬೇಕಾದರೆ, ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಪಾತ್ರ ಕೂಡ ಬಹಳಮುಖ್ಯ ಆಗಿರುತ್ತದೆ. ಇದನ್ನು ಗಮನದಲ್ಲಿ ಇಟ್ಟು ಜನ ಶಿಕ್ಷಣ ಸಂಸ್ಥಾನ ಕಾರ್ಯಗಾರಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಕೆಲಸ ಅಂದರು.ಜನ ಶಿಕ್ಷಣ ಸಂಸ್ಥೆಯ ಹಿರಿಯ ಅಧಿಕಾರಿ ರಮೇಶ ಭಂಡಾರಿ ಇದೇ ಕಾರ‍್ಯಕ್ರಮದ ರೂಪರೇಶೆ ಹಾಗೂ ತರಬೇತಿಯ ಅಗತ್ಯತೆ, ಅದರಲ್ಲಿ ಪಾಲ್ಗೊಳ್ಳುವಿಕೆಯ ಕುರಿತು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ನಿರ್ದೇಶಕ ಶಶಿಕಾಂತ ನಾಯ್ಕ ಮಾತನಾಡಿ “ಸಂಪನ್ಮೂಲ ವ್ಯಕ್ತಿಗಳು ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂಸ್ಥೆಯ ಉದ್ದೇಶ, ಕಾರ್ಯ ಚಟುವಟಿಕೆ ಗಳನ್ನು ಸರಿಯಾದ ದಿಕ್ಕಿನಲ್ಲಿ ಹೋಗಲು ಅನುವು ಮಾಡಿಕೊಡುವತ್ತ ಪ್ರಯತ್ನಿಸಬೇಕೆಂದು” ತಿಳಿಸಿದರು.
“ನಾಯಕತ್ವ ಹಾಗೂ ನಿರ್ಣಯ ತೆಗೆದುಕೊಳ್ಳುವುದು” ವಿಷಯದ ಬಗ್ಗೆ ಪದವಿ ಕಾಲೇಜಿನ ಪ್ರಾಂಶುಪಾಲರು ಆರ್. ಡಿ ಜನಾರ್ಧನ “ಬ್ಯಾಂಕ ಜತೆಗಿನ ಸಂಬಂಧ ಸಾಲ ಸೌಲಭ್ಯಗಳ ಬಗ್ಗೆ ಧಾನ ಫೌಡೇಶನ ಸಂಯೋಜಕಿ ಶೃತಿ ನಾಯ್ಕ ತರಬೇತಿ ನೀಡಿದರು. ಮಧ್ಯಾಹ್ನದ ವೇಳೆ “ಮಹಿಳೆ & ಸ್ವಾವಲಂಬಿ ಬದುಕು” ವಿಷಯದ ಬಗ್ಗೆ ಈಶ್ವರಿ ಫೌಂಡೇಶನ ಅಧ್ಯಕ್ಷೆ ಕಲ್ಪನಾ ಪಾಟೀಲ ಹಾಗೂ “ಸಂವಹನ ಕೌಶಲ್ಯ ಹಾಗೂ ಅಗತ್ಯತೆ” ಬಗ್ಗೆ ಸೊಪಟೆಕ್ ಸಂಸ್ಥೆಯ ಮುಖ್ಯಸ್ಥರಾದ ಸಯ್ಯದ್ ಇಸ್ಮಾಯಿಲ್ ತಂಗಳ ಮಾತನಾಡಿದರು.

ಜನ ಶಿಕ್ಷಣ ಸಂಸ್ಥಾನದಲ್ಲಿ ವಿವಿಧ ತರಬೇತಿಗಳ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸಿದ ಯಲ್ಲಾಪುರ ಕ್ರಿಯೇಟಿವ್ ಸಂಸ್ಥೆಯ ಶ್ರೀನಿವಾಸ ಮುರ್ಡೇಶ್ವರ ಹಾಗೂ ಇನ್ನೊಬ್ಬ ಸಂಪನ್ಮೂಲ ವ್ಯಕ್ತಿ ಪ್ರಶಾಂತ ಮಹೇಕರ, ಯಲ್ಲಾಪುರ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಯಲ್ಲಾಪುರ, ಮುಂಡಗೋಡ ಹಾಗೂ ದಾಂಡೇಲಿ ಹಾಗೂ ಜೊಯಿಡಾ ತಾಲೂಕುಗಳ ಎSS ಸಂಪನ್ಮೂಲ ವ್ಯಕ್ತಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು.
ಕ್ರಿಯೇಟಿವ್ ಸಂಸ್ಥೆಯ ವ್ಯವಸ್ಥಾಪಕ ಶ್ರೀನಿವಾಸ ಮುರ್ಡೇಶ್ವರ ಸ್ವಾಗತಿಸಿದರು. ಹಳಿಯಾಳದ ಸಾಪ್ಟೇಕ್ ಸಂಸ್ಥೆಯ ಮುಖ್ಯಸ್ಥ ಸಯ್ಯದ ಶರ್ಪುದ್ದೀನ ತಂಗಳ ವಂದಿಸಿದರು. ಸಂಪನ್ಮೂಲ ವ್ಯಕ್ತಿ ಶಾಲಿನಿ ಮುರ್ಡೇಶ್ವರ ಕಾರ್ಯಕ್ರಮ ನಿರ್ವಹಿಸಿದರು.










Prathidvani Yellapura