Breaking News

ಬಿಲ್ಲಿಗದ್ದೆ ಅರಣ್ಯ ಒತ್ತುವರಿ ಪ್ರಕರಣ ದಿನದಿಂದ ದಿನಕ್ಕೆ ಜಟಿಲ ಆರೋಪ-ಪ್ರತ್ಯಾರೋಪ.


ಪ್ರತಿಧ್ವನಿ ಯಲ್ಲಾಪುರ : ಕೆಲ ದಿನಗಳ ಹಿಂದೆ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಬಿಲ್ಲಿಗದ್ದೆ ಪರಿಸರದಲ್ಲಿ ಅರಣ್ಯ ಒತ್ತುವರಿಯಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪ – ಪ್ರತ್ಯಾರೋಪ ಕೇಳಿ ಬಂದಿದ್ದವು ಅದಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಬೆಳವಣಿಗೆಗಳು ನಡೆಯುತ್ತಿದ್ದು ಓದುಗರಿಗೆ ತಿಳಿಸಲೇ ಬೇಕಿದೆ.
ನಮ್ಮ ಕಣ್ಣ ಮುಂದೆ ನಿಧಾನವಾಗಿ ಹಂತಹಂತದಲ್ಲಿ ಸ್ಥಳಿಯರೊಬ್ಬರು ಅರಣ್ಯ ಒತ್ತುವರಿ ಮಾಡುತ್ತ ಅನಧಿಕೃತ ರಸ್ತೆ ನಿರ್ಮಿಸಿ ಅಕ್ರಮ ಎಸಗಲು ಪ್ರಯತ್ನಿಸುತ್ತಿರುವುದನ್ನು ಕಂಡರು ನಮಗೇಕೆ ಉಸಾಬರಿ ಎಂದು ಸುಮ್ಮನಿದ್ದೆವು ಸದ್ಯ ಮಾದ್ಯಮದಲ್ಲಿ ಸುದ್ದಿ ಬಂದ ನಂತರ ಅದರ ಕುರಿತು ಗಮನ ಹರಿಸಿದ್ದೇವೆ ಹೊರತು ಯಾವುದೆ ಆಮಿಷಕ್ಕಲ್ಲ. ಎಂದು ಬಿಲ್ಲಿಗದ್ದೆ ಪರಿಸರದಲ್ಲಿ ಕೃಷಿ ಭೂಮಿ ಕೊಂಡುಕೊಂಡ ವನಿತಾ ಆರ್ ಭಟ್ ಹೇಳಿದ್ದಾರೆ.

ಗೃಹೋದ್ಯಮ ನಡೆಸುತ್ತಿರುವ ವನಿತಾ ಆರ್ ಭಟ್


ಈ ಘಟನೆ ನಡೆದ ಬಳಿಕ ನಮಗೆ ಜಮೀನು ಮಾರಾಟ ಮಾಡಿದ ಮಾಲಿಕರು ಈ ಪ್ರಕರಣದಲ್ಲಿ ನಮ್ಮ ಪಾತ್ರವಿದೆ ಎಂದು ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ.
ನಾವು ಸ್ಥಳ ಕೊಂಡು ಕೊಂಡಾಗ ಏನು ತೋರಿಸಿ ಪತ್ರದಲ್ಲಿ ತಿಳಿಸಿದ್ದರೊ ಅದರ ಪ್ರಕಾರವೆ ನಡೆದುಕೊಳ್ಳುತ್ತಿದ್ದೇವೆ ಹೊರತು ಅರಣ್ಯ ಭೂಮಿಯಲ್ಲಾಗಲಿ,ನಕ್ಷೆಯಲ್ಲಿ ತೋರಿಸಿದ ರಸ್ತೆಯಲ್ಲಾಗಲಿ ಮನೆ ನಿರ್ಮಿಸಿಲ್ಲ. ಒಂದು ವೇಳೆ ನಿರ್ಮಿಸಿದ್ದಾಗಿದ್ದರೆ ಸರ್ವೆ ಕಾರ್ಯ ನಡೆಸಿ ಮಾಹಿತಿ ನೀಡಲಿ. ಅವರು ನನಗೆ ಜಾಗ ಮಾರಾಟ ಮಾಡಿದ ಸಂದರ್ಭದಲ್ಲಿ ಸ್ಟ್ರಿಪ್ ಸ್ಥಳದಲ್ಲಿ ಈಗಿರುವ ಮನೆ ಸ್ಥಳದಲ್ಲಿ ಪುಟ್ಟ ಮನೆ ಇತ್ತು ಅದು ಸಹ ನಮಗೆ ಜಾಗ ಮಾರಾಟ ಮಾಡಿದ ಮಾಲಿಕರೆ ನೀಡಿದ್ದರು ನಾವು  ಈಗ ಮನೆ ಕಟ್ಟಿಕೊಂಡವರಿಗೆ ಸ್ಥಳ ನೀಡಿರುವುದಲ್ಲ. ಪ್ರಮುಖವಾಗಿ ಮಹಿಳೆ ಸ್ವಾವಲಂಬಿ ಬದುಕು ನಡೆಸಲು ಸರ್ಕಾರವೆ ಆಕೆಯ ಬೆನ್ನಿಗೆ ನಿಲ್ಲತ್ತದೆ ಅದರ ಬಲದಲ್ಲಿ ನನ್ನ ಮನೆಯ ತಳಭಾಗದಲ್ಲಿ ಗೃಹೋದ್ಯಮ ಉಪ್ಪಿನ ಕಾಯಿ ತಯಾರಿಕೆ ಮಾಡಿ ಕಲವು ಮಹಿಳೆಯರಿಗೆ ಕೆಲಸ ನೀಡಿ ಪರೋಕ್ಷವಾಗಿ ನೂರಾರು ಕೈಗಳಿಗೆ ಕೆಲಸ ನೀಡಿದ್ದೇನೆ. ಅದೂ ಸಹ ಗೃಹೋದ್ಯಮ ನಡೆಸಲು ಸರ್ಕಾರದ ಎಲ್ಲಾ ಅನುಮತಿಯೊಂದಿಗೆ. ಆದರೆ ಜನರಿಗೆ ಸುಳ್ಳು ಸುದ್ದಿ ಹಬ್ಬಿಸಲು ಅನಧಿಕೃತವಾಗಿ ಕಾರ್ಖಾನೆ ನಡೆಸುತ್ತಿರುವುದಾಗಿ ಪುಕಾರು ಎಬ್ಬಿಸುತ್ತಿದ್ದಾರೆ. ನಿಯಮ ಬಾಹಿರವಾಗಿ ನನ್ನ ನಡೆ ಇದ್ದರೆ ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ಗೃಹೋದ್ಯಮ ನಡೆಸುತ್ತಿರುವ ವನಿತಾ ಆರ್ ಭಟ್ ಮಾದ್ಯಮಕ್ಕೆ ಪ್ರತಿಕ್ರಯಿಸಿದ್ದಾರೆ.

ಶೇಷಗಿರಿ ಮುರ್ತು ಪ್ರಭು ಹಿಂದಿನ ಮಾಲಿಕರು ಬಿಲ್ಲಿಗದ್ದೆ

ಬಿಲ್ಲಿಗದ್ದೆ ಪರಿಸರದಲ್ಲಿ ಈ ಹಿಂದೆ  ಶೇಷಗಿರಿ ಮುರ್ತು ಪ್ರಭು ಹೆಸರಿನ ನಾನು ನನ್ನ ಸ್ವಾಧೀನದಲ್ಲಿದ್ದ ಸ್ವತ್ತನ್ನು ನನ್ನ ವಿವೇಚನೆಗೆ ತಕ್ಕಂತೆ ಕಾಲಕಾಲಕ್ಕೆ ಮಾರಾಟ ಮಾಡುತ್ತ ಬಂದಿದ್ದೇನೆ. ಅದರಲ್ಲಿ ಓರ್ವರಿಗೆ 10 ಗುಂಟೆ ಕೃಷಿ ಭೂಮಿಯನ್ನು  ಮಾರಾಟ ಮಾಡಿದ್ದೆ. ಇದಕ್ಕೆ ಹೊಂದಿಕೊಂಡ ಎರಡು ಎಕರೆ ನನ್ನ ಸ್ವಾಧೀನದಲಿದ್ದ ಸ್ಟ್ರಿಪ್ ಭೂಮಿಯನ್ನು ಸಹ ನಿರ್ವಹಣೆಗೆ ಬಿಟ್ಟುಕೊಟ್ಟಿದ್ದೆ ಆದರೆ ಈ ಭೂಮಿಯನ್ನು ಮಾರಾಟ ಮಾಡಿರಲಿಲ್ಲ. ಸದ್ಯ ಇದಕ್ಕೆ ಸಂಬಂಧಿಸಿದ ಭೂಮಿಯಲ್ಲಿ ನನ್ನ ಅಪ್ಪಣೆ ಇಲ್ಲದೆ ಬೇರೊಬ್ಬರ ಮನೆ  ನಿರ್ಮಾಣ ಆಗಿದೆ ಆದಾಗ್ಯೂ ನಾನು ನನ್ನ ಜಮೀನು ಮಾರಾಟ ಮಾಡಿದವರು ಆ ಮೂರನೆ ವ್ಯಕ್ತಿಗೆ ಮನೆ ಕಟ್ಟಲು ಅನುಮತಿ ನಾನೆ ನೀಡಿರುವುದಾಗಿ ಹೇಳುತ್ತಿರುವುದು ಅಕ್ಷಮ್ಯವಾಗಿದೆ. ಒಂದು ವೇಳೆ ನಾನೆ ಆಸ್ಥಳವನ್ನು ನೀಡಿದ್ದಾಗಿದ್ದರೆ ವ್ಯಾಪಾರದ ವೇಳೆ ತಕರಾರು ತೆಗೆಯಬಹುದಾಗಿತ್ತು ಅಥವ ಪತ್ರದಲ್ಲಿ ಉಲ್ಲೇಖಿಸಬಹುದಾಗಿತ್ತು. ಇದೆಲ್ಲವನ್ನು ಬಿಟ್ಟು ಈಗ ಆ ಸ್ಥಳವನ್ನು ನಾನೆ ನೀಡಿರುವುದಾಗಿ ಹೇಳುತ್ತಿರುವುದು ಸುಳ್ಳಿನ ಕಂತೆಯಾಗಿದೆ. ಕನಿಷ್ಟಪಕ್ಷ ಆತನಿಗೆ ಮನೆಕಟ್ಟಲು ಸ್ಥಳ ನೀಡಿದ ಬಗ್ಗೆ ಅಥವ ಹಣ ಪಡೆದ ಬಗ್ಗೆ ದಾಖಲೆ ಏನಾದರು ಇದ್ದರೆ ಬಿಡುಗಡೆ ಮಾಡಲಿ. ಒಂದು ವೇಳೆ ನಾನೆ ನೀಡಿದ್ದಾಗಿದ್ದರೆ ಸ್ಟ್ರಿಪ್ ಸ್ಥಳದಲ್ಲಿ ಅರಣ್ಯ ಇಲಾಖೆಯ ಸ್ವತ್ತಿನಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿದಂತಾಗಿದೆ ಹಾಗಾಗಿ  ಭೂ ನ್ಯಾಯಾಲಯದ ಮೂಲಕ ಅರಣ್ಯ ಇಲಾಖೆಗೆ ಭೂಮಿಯನ್ನು ಸ್ವ ಹಿಚ್ಚೆಯಿಂದ ಬಿಟ್ಟು ಕೊಡಲಿದ್ದೇನೆ ಎನ್ನುತ್ತಿದ್ದಾರೆ ಜಾಗದ ಹಿಂದಿನ ಮಾಲಿಕ ಶೇಷಗಿರಿ ಮುರ್ತು ಪ್ರಭುಗಳು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಬಿಜೆಪಿ ವತಿಯಿಂದ ಸಂವಿಧಾನ ಶಿಲ್ಪಿ ಡಾ,ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ..

ಪ್ರತಿಧ್ವನಿ ಯಲ್ಲಾಪುರ: ಭಾರತದ ಸಂವಿಧಾನ ಶಿಲ್ಪಿ,ಸಾಮಾಜಿಕ ನ್ಯಾಯದ ಹರಿಕಾರರು,ಶೋಷಿತರ ದ್ವನಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ನಿಮಿತ್ತ ಭಾರತೀಯ ಜನತಾ ಪಾರ್ಟಿ …

Leave a Reply

Your email address will not be published. Required fields are marked *