
ಪ್ರತಿಧ್ವನಿ ಯಲ್ಲಾಪುರ (ಶಿರಸಿ) : ರಾಜ್ಯ ಸರ್ಕಾರದ ನೀತಿಗೆ ವ್ಯತಿರಿಕ್ತವಾಗಿ ಜರುಗುತ್ತೀರುವ ಅರಣ್ಯವಾಸಿಗಳ ಜಂಟಿ ಮಹಜರ್ ಪ್ರಕ್ರಿಯೆಯ ನ್ಯೂನ್ಯತೆಯ 6 ಅಂಶಗಳ ಪಟ್ಟಿಯನ್ನು ಬೃಹತ್ ಸಂಖ್ಯೆಯ ಅರಣ್ಯವಾಸಿಗಳ ಉಪಸ್ಥಿತಿಯಲ್ಲಿ ಏ,9 ರಗುರುವಾರ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ್ ನೇತೃತ್ವದಲ್ಲಿ ಶಿರಸಿಯಲ್ಲಿ ಉಪ ವಿಭಾಗಾಧಿಕಾರಿಗಳಿಗೆ ಸಮರ್ಪಿಸಿದರು.

ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಅರಣ್ಯ ಹಕ್ಕು ಕಾಯಿದೆಯ ಉಸ್ತುವಾರಿ ಸಮಿತಿಯು ಜನವರಿ.7 ರಂದು ತೆಗೆದುಕೊಂಡ ನಿರ್ಣಯದಲ್ಲಿ ಅರ್ಜಿಗಳು ದಾಖಲಾತಿ ಅಲಭ್ಯತೆ ಕಾರಣಕ್ಕೆ ತಿರಸ್ಕರಿಸಿದಲ್ಲಿ, ಅರಣ್ಯ ಕಂದಾಯ, ಗ್ರಾಮೀಣಾಭೀವೃದ್ದಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರನ್ನು ಒಳಗೊಂಡ ತಂಡದಿಂದ ಮುಂದಿನ 35 ದಿನಗಳೊಳಗಾಗಿ ಮಹಜರ್ ಮಾಡಿ, ಮಹಜರ್ ವರದಿಯನ್ನು ದಾಖಲೆಯಾಗಿ ಪರಿಗಣಿಸಲು ಸೂಚನೆ ನೀಡಲಾಗಿತ್ತು. ಆದರೆ, ಅರಣ್ಯ ಹಕ್ಕು ಕಾಯಿದೆ ಮತ್ತು ರಾಜ್ಯ ಮಟ್ಟದ ಉಸ್ತುವಾರಿ ಸಮಿತಿಯ ನಿರ್ಧೇಶನ ಉಲ್ಲಂಘಿಸಿರುವ ಅಂಶವನ್ನ ನ್ಯೂನ್ಯತೆಯ ಪಟ್ಟಿಯಲ್ಲಿ ಸೇರ್ಪಡಿಸಲಾಗಿದೆ.

ಸಭೆಯಲ್ಲಿ ಜಿಲ್ಲಾ ಸಂಚಾಲಕ ಇಬ್ರಾಹೀಂ ಗೌಡಳ್ಳಿ, ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ಹರಿಹರ ನಾಯ್ಕ ಓಂಕಾರ, ಮುಂಡಗೋಡ ಅಧ್ಯಕ್ಷ ಶಿವಾನಂದ ಜೋಗಿ, ಎಮ್ ಆರ್ ನಾಯ್ಕ ಕಂಡ್ರಾಜಿ, ರಾಜು ನರೇಬೈಲ್, ದಿವಾಕರ್ ಮರಾಠಿ ಆನಗೋಡ, ನಾಗಪತಿ ಗೌಡ ಹುಕ್ಕಳಿ, ಚಂದ್ರು ಪೂಜಾರಿ ಮಂಚಿಕೇರಿ, ರಾಮಚಂದ್ರ ನಾಯ್ಕ ವಾಜಗೋಡ, ಚಂದ್ರು ಶಾನಭಾಗ ಬಂಡಲ್, ಮಲ್ಲೇಶಿ ಸಂತೋಳ್ಳಿ, ಸ್ವಾತಿ ಜೈನ್, ಕಲ್ಪನಾ ನರೇಬೈಲ್, ರಾಜು ಗೌಡ, ಕೃಷ್ಣ ಕುಣಬಿ ಆನಗೋಡ, ಬಸ್ತ್ಯಾಂವ್ ಕಣ್ಣೆಗೇರಿ, ಶ್ರೀಧರ ಹೆಗಡೆ ಲಂಭಾಪುರ, ಸುಧಾಕರ ಮಡಿವಾಳ ಬಿಳಗಿ, ಸಂಕೇತ ನಾಯ್ಕ ಹಲಗೇರಿ, ಅಬ್ದುಲ್ ಸುಭಾನ್ ಅರೆಂದೂರು, ಸುಬ್ರಾಯ ಹೆಗಡೆ ಆನಗೋಡ, ಗಣಪತಿ ನಾಯ್ಕ ಬೆಡಸಗಾಂವ್, ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಪುಟ್ಟರಾಜ ಗೌಡ, ಸಿಪಿಐ ಶಶಿಕಾಂತ ವರ್ವ, ಉಪಸ್ಥಿತರಿದ್ದರು.
ನ್ಯೂನ್ಯತೆಯ 6 ಅಂಶಗಳ ಪಟ್ಟಿ ಜಿಲ್ಲಾಧಿಕಾರಿಗಳಿಗೆ ಸಮರ್ಪಣೆ:
ಮಹಜರ್ ಸಂದರ್ಭದಲ್ಲಿ ಅಧಿಕಾರಿ ತಂಡದೊಂದಿಗೆ- ಸ್ಥಳೀಯ ಮುಖಂಡರನ್ನು, ಸೇರಿಸಿಕೊಳ್ಳದೇ ಇರುವುದು. ಜಂಟಿ ಮಹಜರ್ ಯಾಂತ್ರೀಕವಾಗಿ ( ಬಿಟ್ಟಸ್ಥಳದಿಂದ ಕೂಡಿದ ಬೆರಳಚ್ಚು ಪ್ರತಿ ) ತಯಾರಿಸಿದ್ದು, ಅಪೂರ್ಣ ಅಂಶಗಳಿಂದ ಕೂಡಿರುತ್ತದೆ. ಜಂಟಿ ಮಹಜರ್ ಸಂದರ್ಭದಲ್ಲಿ ಅರಣ್ಯವಾಸಿಗೆ ಮುಂಚಿತವಾಗಿ ನೋಟಿಸ್ / ಮಾಹಿತಿ ನೀಡದೇ, ಅರಣ್ಯವಾಸಿಗಳ ಅನುಪಸ್ಥಿತಿಯಲ್ಲಿ ಸ್ಥಳ ಪರಿಶೀಲನೆ ಮಾಡುವುದು ನ್ಯೂನ್ಯತೆಯ ಪಟ್ಟಿಯಲ್ಲಿ ಪ್ರಮುಖ ಅಂಶವಾಗಿದೆ.
ಸಾಗುವಳಿ ಮತ್ತು ವಾಸ್ತವ್ಯಕ್ಕೆ ಸಂಭಂಧಿಸಿದ ಅರಣ್ಯವಾಸಿ ಮತ್ತು ಗ್ರಾಮದಲ್ಲಿ ಜನವಸತಿ ಇರುವ ಕುರಿತು ಸಾಂಧರ್ಭಿಕ ದಾಖಲೆಗಳನ್ನ ಮಹಜರ್ ಅಲ್ಲಿ ಉಲ್ಲೇಖಿಸದೇ ಇರುವುದು, ಜಿಲ್ಲೆಯಲ್ಲಿ, ಅಲ್ಪ ಕಂದಾಯ ಭೂಮಿ ಹೊಂದಿ, ಅರಣ್ಯ ಭೂಮಿಯ ಮೇಲೆ ಅವಲಂಭಿತರಾಗಿರುವ ಅರಣ್ಯವಾಸಿಗಳನ್ನ ಹಾಗೂ ಪ್ರತ್ಯೇಕ ಮನೆ, ಪ್ರತ್ಯೇಕ ರೇಷನ್ ಕಾರ್ಡ ಹೊಂದಿರುವ ಒಂದೇ ಕುಟುಂಬದ ಒಂದಕ್ಕಿಂತ ಹೆಚ್ಚು ಕುಟುಂಬ ಸದಸ್ಯರ ಅರ್ಜಿಯನ್ನು ಮಹಜರ್ ಪ್ರಕ್ರಿಯೆಗೆ ಅಳವಡಿಸದೇ ಇರುವುದು ಮನವಿ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಮಹಜರ್ ಸಂದರ್ಭದಲ್ಲಿ ಅವಶ್ಯ ಅಧಿಕಾರ ವರ್ಗದವರು ಉಪಸ್ಥಿತರಿರುವುದಿಲ್ಲ, ಜಂಟಿ ಮಹಜರ್ ಪ್ರಕ್ರಿಯೆಯಲ್ಲಿ ತಿರಸ್ಕರಿಸಿದ ಎಲ್ಲಾ ಅರ್ಜಿಗೆ ಸಂಬಂಧಿಸಿ ಮಹಜರ್ ಗಣನೆಗೆ ತೆಗೆದುಕೊಂಡಿದ್ದು ಇರುವುದಿಲ್ಲ ಹಾಗೂ ಜಂಟಿ ಮಹಜರಿಗೆ ಕೆಲವು ಕಡೆ ಅರಣ್ಯವಾಸಿಯ ಸಹಿಯನ್ನು ದಾಖಲಿಸದೇ ಇರುವುದು ಹಾಗೂ ಮಹಜರ್ ಅಧಿಕಾರಿ ತಂಡವೂ ಕೆಲವು ಕಡೆ ಅರಣ್ಯವಾಸಿ ಸಹಿ ಮಾತ್ರ ತೆಗೆದುಕೊಂಡು, ಮಾಹಿತಿ ತುಂಬದ, ಅಧಿಕಾರಿ ವರ್ಗದವರು ಸಹಿ ಮಾಡದ ಮಹಜರ್ ಪ್ರತಿಯನ್ನು ಒಯ್ಯುತ್ತೀರುವುದು ನ್ಯೂನ್ಯತೆಯ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದಲ್ಲಿ ಉಂಟಾಗುತ್ತಿರುವ ಸಮಸ್ಯೆಗಳು, ಸುಪ್ರೀಂ ಕೊರ್ಟನಲ್ಲಿ ಒಕ್ಕಲೆಬ್ಬಿಸುವ ಪ್ರಕ್ರಿಯೆ ವಿಚಾರಿಸುವ ಕುರಿತು ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ 3 ಎಕರೆಗಿಂತ ಕಡಿಮೆ ಇರುವ ಅರಣ್ಯವಾಸಿಗಳಿಗೆ ಭದ್ರತೆ ನೀಡುವ ರಾಜ್ಯ ಸರ್ಕಾರದ ಆದೇಶ ರದ್ದು ಪಡಿಸಲು ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಗೂ ಹೋರಾಟದ ಮುಂದಿನ ಕ್ರಿಯಾ ಯೋಜನೆಯನ್ನ ರಾಘವೇಂದ್ರ ಮಠದ ಕಲ್ಯಾಣ ಮಂಟಪದಲ್ಲಿ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತೃತ್ವದಲ್ಲಿ ಸಭೆ ಜರುಗಿತು




Prathidvani Yellapura