Breaking News

ಮಹಜರ್ ಪ್ರಕ್ರಿಯೆಯ 6 ನ್ಯೂನ್ಯತೆಯ ಪಟ್ಟಿ ಜಿಲ್ಲಾಡಳಿತಕ್ಕೆ – ರವಿಂದ್ರ ನಾಯ್ಕ.

ಕೇಬಲ್ ನಾಗೇಶ್ ಯಲ್ಲಾಪುರ🖋

ಪ್ರತಿಧ್ವನಿ ಯಲ್ಲಾಪುರ: ಅರಣ್ಯ ಹಕ್ಕು ಕಾಯಿದೆ ಮತ್ತು ರಾಜ್ಯ ಸರ್ಕಾರದ  ನಿರ್ದೇಶನ ಉಲ್ಲಂಘಿಸಿ, ರಾಜ್ಯ ಮಟ್ಟದ ಉಸ್ತವಾರಿ ಸಮಿತಿಯ ನಡವಳಿಕೆಗೆ ವ್ಯತಿರಿಕ್ತವಾಗಿ ಜಂಟಿ ಮಹಜರ್ ಜರುಗುತ್ತಿರುವುದಕ್ಕೆ ಅರಣ್ಯವಾಸಿಗಳು, ಶಿರಸಿಯಲ್ಲಿ ಎಪ್ರಿಲ್ 9 ಗುರುವಾರದಂದು, ಮುಂಜಾನೆ.10-30  ಕ್ಕೆ ಮಹಜರ್ ಪ್ರಕ್ರಿಯೆಯ 9 ನೂನ್ಯತೆ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಕೊಡಲು ತೀರ್ಮಾನಿಸಲಾಗಿದೆ ಎಂದು  ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಮಾದ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


  ಇಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಯಲ್ಲಾಪುರ ತಾಲೂಕಿನ ಗ್ರೀನ್ ಕಾರ್ಡ ಪ್ರಮುಖರು ಸ್ಥಳೀಯ ವೆಂಕಟರಮಣ ದೇವಸ್ಥಾನದ ಆವರಣದಲ್ಲಿ ತೆಗೆದುಕೊಂಡ ನಿರ್ಣಯವನ್ನ ಅವರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


     ಜಿಲ್ಲಾದ್ಯಂತ 18 ಸಾವಿರಕ್ಕೂ ಮಿಕ್ಕಿ ಅರಣ್ಯವಾಸಿಗಳು ಡಿ.6 ರಂದು ಕಾರವಾರದಲ್ಲಿ ಸಂವಿಧಾನ ಪರಿವರ್ತನ ದಿನದ ಅಂಗವಾಗಿ ಜರುಗಿದ ಕಾರ್ಯಕ್ರಮದಲ್ಲಿ  3 ತಲೆಮಾರಿನ ದಾಖಲೆ ಆಕ್ಷೇಪಿಸಿ, ಆಕ್ಷೇಪ ಪತ್ರ ಸಲ್ಲಿಸಿರುವ ಹಿನ್ನಲೆಯಲ್ಲಿ  ರಾಜ್ಯ ಅರಣ್ಯ ಹಕ್ಕು ಉಸ್ತವಾರಿ ಸಮಿತಿಯ ಅಧ್ಯಕ್ಷರಾದ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ, ಪ್ರಸಕ್ತ ವರ್ಷದ ಜನವರಿ. 6  ಸಭೆಯಲ್ಲಿ ಮಹಜರ್ ಕುರಿತು ನಡವಳಿಕೆ ದಾಖಲಿಸಲಾಗಿತ್ತು.
      ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಅರಣ್ಯ ಹಕ್ಕು ಕಾಯಿದೆಯ ಉಸ್ತುವಾರಿ ಸಮಿತಿಯು  ಜನವರಿ.6 ರಂದು ತೆಗೆದುಕೊಂಡ ನಿರ್ಣಯದಲ್ಲಿ ಅರ್ಜಿಗಳು ದಾಖಲಾತಿ ಅಲಭ್ಯತೆ ಕಾರಣಕ್ಕೆ ತಿರಸ್ಕರಿಸಿದಲ್ಲಿ, ಅರಣ್ಯ ಕಂದಾಯ, ಗ್ರಾಮೀಣಾಭೀವೃದ್ದಿ ಪರಿಶಿಷ್ಟ ವರ್ಗಗಳ ಕಲ್ಯಾಣ  ಇಲಾಖೆಗಳ  ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರನ್ನು ಒಳಗೊಂಡ ತಂಡದಿಂದ  ಮುಂದಿನ 45 ದಿನಗಳೊಳಗಾಗಿ   ಮಹಜರ್   ಮಾಡಿ,   ಮಹಜರ್ ವರದಿಯನ್ನು ದಾಖಲೆಯಾಗಿ ಪರಿಗಣಿಸಲು  ಸೂಚನೆ ನೀಡಲಾಗಿತ್ತು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
   ನಡವಳಿಕೆಗೆ ಮತ್ತು ಕಾನೂನಿಗೆ ವ್ಯತಿರಿಕ್ತವಾಗಿ ಜಿಲ್ಲಾಡಳಿತವು ನ್ಯೂನ್ಯತೆಯಿಂದ ಪ್ರಕ್ರಿಯೆ ಜರುಗುತ್ತಿರುವುದು ಸಭೆಯು ಚರ್ಚಿಸಿತು  ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
     ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಸಂಚಾಲಕ ಇಬ್ರಾಹೀಂ ಸಾಬ ಗೌಡಳ್ಳಿ ಅವರ ಅಧ್ಯಕ್ಷತೆ ಜರುಗಿದ ಸಭೆಯಲ್ಲಿ, ಗ್ರೀನ್ ಕಾರ್ಡ ಪ್ರಮುಖರಾದ  ದಿವಾಕರ್ ಮರಾಠಿ ಆನಗೋಡ, ಯೋಗೇಶ್ ಪುಟ್ಟ ನಾಯ್ಕ ಚಂದಗುಳಿ, ವಿಷ್ಣು ಗಾವಡೆ, ಈಶ್ವರ ನಾಯ್ಕ, ಸುಬ್ರಾಯ ಹೆಗಡೆ ಆನಗೋಡ, ಚಂದ್ರಕಾಂತ ಮರಾಠಿ ಹಾಸಣಗಿ, ಬಸ್ತಾಂವ್ ಡಿಸೋಜಾ ಕಣ್ಣಿಗೇರಿ, ಶಿವಾನಂದ ನಾಯ್ಕ ಮದನೂರು, ಗಣಪತಿ ಹೆಗಡೆ ಇಡಗುಂದಿ, ರಾಮಚಂದ್ರ ದೇಸಾಯಿ, ಪ್ರೇಮಾನಂದ ಭಂಡಾರಿ ಮಾವಿನಮನೆ, ಸುಭಾಷ್ ಸಿದ್ದಿ, ರಾಮ ತುಕರಾಮ ಗಾವಡೆ, ಶಿವರಾಮ ಆಚಾರಿ,  ಮುಂತಾದ ಪ್ರಮುಖರು ಚರ್ಚೆಯಲ್ಲಿ ಭಾಗವಹಿಸಿದರು.

ಪ್ರಮುಖ 6 ನ್ಯೂನತೆ ಪಟ್ಟಿ:
   ಅರಣ್ಯ ಹಕ್ಕು ಕಾಯಿದೆಯಲ್ಲಿ ರಾಜ್ಯ ಉಸ್ತವಾರಿ ಸಮಿತಿಯ ನಡವಳಿಕೆ ಮತ್ತು 6 ನ್ಯೂನತೆ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಎಫ್ರಿಲ್ 9 ರಂದು ಶಿರಸಿಯಲ್ಲಿ ನೀಡಲಾಗುವುದು ಎಂದು ಜಿಲ್ಲಾದ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ದೇವರ ಕಲ್ಲಳ್ಲಿಯಲೊಂದು ಬುಡಕಟ್ಟು ಸಿದ್ದಿ ಸಮುದಾಯದ ಜಾನಪದ ಜಗತ್ತಿನ ಪರಿಚಯ.

ಕೇಬಲ್ ನಾಗೇಶ್, ಯಲ್ಲಾಪುರ.🖋 ಪ್ರತಿಧ್ವನಿ ಯಲ್ಲಾಪುರ : ನಶಿಸಿ ಹೋಗುತ್ತಿರುವ ಅನೇಕ ಸಂಸ್ಕೃತಿಗಳಲ್ಲಿ ಅರಣ್ಯ ವಾಸಿ ಬುಡಕಟ್ಟು ಸಿದ್ದಿ ಸಮುದಾಯದ …

Leave a Reply

Your email address will not be published. Required fields are marked *