Breaking News

ಯಲ್ಲಾಪುರ ಬಸ್ ನಿಲ್ದಾಣದ ಮಹಡಿಯಲ್ಲಿ ಆರಂಭಗೊಂಡ ಮಕ್ಕಳ ” ಬೇಸಿಗೆ ಶಿಭಿರ “

ಪ್ರತಿಧ್ವನಿ ಯಲ್ಲಾಪುರ : ಪ್ರೋಪಾತ್ ಅಕಾಡೆಮಿ ಮತ್ತು ಸ್ಪೂರ್ತಿ ಟ್ಯೂಷನ್ಸ್ ಹಾಗು ವಿ.ಹೆಚ್ ಹೌಸ್ ಆಫ್ ಡಾನ್ಸ್ ಕ್ಲಾಸ್ ವತಿಯಿಂದ ಆರಂಭವಾದ ಮಕ್ಕಳ ಬೇಸಿಗೆ ಶಿಭಿರ.
ಪ್ರತಿ ವರ್ಷ 6 ರಿಂದ 16 ವರ್ಷದ ಮಕ್ಕಳ ಕಲಿಕೆಗೆ ಸ್ಪೂರ್ತಿ ತುಂಬುವ ಹಾಗು ಬೇಸಿಗೆ ರಜಾ ದಿನಗಳನ್ನು ವ್ಯರ್ಥ ಮಾಡದಂತೆ ಮಕ್ಕಳ ಭವಿಷ್ಯದ ಶೈಕ್ಷಣಿಕ ದಿನಗಳಿಗೆ ಸಹಕಾರಿಯಾಗುವಂತೆ ಸಾರ್ಥಕ ದಿಕ್ಕಿನೆಡೆಗೆ ಸಾಗಿಸುವ ಮತ್ತು ಸಂಸ್ಕಾರ ಕಲಿಸುವ ಬೇಸಿಗೆ ಶಿಭಿರವನ್ನು ಪ್ರೋಪಾತ್ ಅಕಾಡೆಮಿ ಮತ್ತು ಸ್ಪೂರ್ತಿ ಟ್ಯೂಷನ್ಸ್ ಹಾಗು ವಿ.ಹೆಚ್ ಹೌಸ್ ಆಫ್ ಡಾನ್ಸ್ ಕ್ಲಾಸ್ ವತಿಯಿಂದ ನಡೆಸಿಕೊಂಡು ಬರುತ್ತಿದ್ದು ಪಸಕ್ತ ವರ್ಷದ ಬೇಸಿಗೆ ಶಿಭಿರ ಏ,5 ರವಿವಾರ ವಿದ್ಯುಕ್ತವಾಗಿ ಚಾಲನೆ ಪಡೆಯಿತು.


ಪಟ್ಟಣದ ಕೆ.ಎಸ್.ಆರ್‌.ಟಿ.ಸಿ ಬಸ್ ನಿಲ್ದಾಣದ ಮೇಲ್ಬಾಗದಲ್ಲಿ ಬೇಸಿಗೆ ಶಿಭಿರ ಶುಭಾರಂಭಗೊಂಡಿದ್ದು ಶಿಕ್ಷಕರು,ಪಾಲಕರು,ಮಕ್ಕಳು ಶಿಭಿರಕ್ಕೆ ಚಾಲನೆ ನೀಡಿದರು.
ಶಿಭಿರದಲ್ಲಿ ವಿಶೇಷವಾಗಿ ಬೆರಳು ರಂಗೋಲಿ, ( ಬೇಸಿಕ್ ಮೆಹಂದಿ ವಿನ್ಯಾಸ) ಬೆಂಕಿ ಇಲ್ಲದ ಅಡುಗೆ, ಮುಖವಾಡ ತಯಾರಿಕೆ, ಬಲೂನ್ ಕಲೆ, ಅಬಾಕಸ್, ಯೋಗ,ದ್ಯಾನ,ಶ್ಲೋಕ, ಕೈ ಬರಹ,ಮಣ್ಣಿನ ಕಲಾಕೃತಿ ರಚನೆ, ಮೆದುಳು ಚುರುಕಾಗಿಸುವ ಚಟುವಟಿಕೆ, ಸ್ಮರಣ ಶಕ್ತಿ ಉತ್ತೇಜನ ಕ್ರೀಡೆಗಳು,ರಂಗ ಪ್ರಸ್ತುತಿ, ಕೇರಂ, ಚೆಸ್, ಹಾಡುಗಾರಿಕೆ,ಚಿತ್ರಕಲೆ, ಭಾಷಣ,ನಾಟಕ,ಕಲೆ,ಕರಕುಶಲ, ಹಿಪ್ ಹಾಪ್ ನೃತ್ಯ ಇನ್ನು ಹಲವು ವಿದ್ಯೆಗಳನ್ನು ಕಲಿಸುವುದರೊಂದಿಗೆ ವಿಶೇಷ ವಿಷಯಗಳ ಉಪನ್ಯಾಸಗಳು ಜರುಗಲಿದೆ.


ಇಷ್ಟೆಲ್ಲಾ ಕಲೆ ಸಾಹಿತ್ಯ ಸಂಸ್ಕೃತಿ ಕ್ರೀಡಾ ಕಲಿಕೆಗೆ ನಿಮ್ಮ ಮಕ್ಕಳನ್ನು ಸಹ ನೊಂದಾಯಿಸಬಹುದಾಗಿದೆ. ಧಿಭಿರವು ಮೇ,5 ರವರೆಗೆ ಜರುಗಲಿದ್ದು ಬೆಳಗ್ಗೆ 10-00 ರಿಂದ ಮದ್ಯಾಹ್ನ 1-30 ರ ವರೆಗೆ ನಡೆಯಲಿದೆ. ಆಸಕ್ತ ಪೊಷಕರು ಮಕ್ಕಳನ್ನು ಶಿಭಿರಕ್ಕೆ ಸೇರಿಸಬಹುದಾಗಿದೆ ಎಂದು ಶಿಭಿರ ಆಯೋಜಕರಲ್ಲಿ ಪ್ರಮುಖರಾದ ಶಿಕ್ಷಕಿ ಜ್ಯೋತಿ ನಾಯ್ಕ್ ತಿಳಿಸಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಖರ್ಗೆ ಕೋಮು ಪ್ರಚೋದನೆ ಭಾಷಣಕ್ಕೆ ಬಿಜೆಪಿ ಕೆಂಡಾಮಂಡಲ   ಎಫ್ ಐ ಆರ್ ದಾಖಲಿಸಲು ಆಗ್ರಹ.

ಪ್ರತಿಧ್ವನಿ ಯಲ್ಲಾಪುರ : ಇತ್ತೀಚಿನ ಕೆಲ ದಿ‌ಗಳ ಹಿಂದೆ ಅಸ್ಸಾಂ ಚುನಾವಣ ಪ್ರಚಾರ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಯವರು ಕೋಮು …

Leave a Reply

Your email address will not be published. Required fields are marked *