
ಪ್ರತಿಧ್ವನಿ ಯಲ್ಲಾಪುರ : ಹಿಂದುಗಳ ನೂತನ ವರ್ಷದ ಆಗಮನಕ್ಕೆ ಎರಡು ದಿನಗಳು ಬಾಕಿ ಇರುವಂತೆ ಯುಗಾದಿ ಉತ್ಸವ ನಿಮಿತ್ತ ಧರ್ಮ ಜಾಗೃತಿಗಾಗಿ ಬೃಹತ್ ಬೈಕ್ ರ್ಯಾಲಿ ಮದ್ಯಾಹ್ನ 3 ಗಂಟೆಗೆ ಕಾಳಮ್ಮ ದೇವಿ ದೇವಾಲಯದಿಂದ ಚಾಲನೆ ದೊರೆಯಲಿದ್ದು ಸಮಸ್ತ ಹಿಂದು ಕುಲಕೋಟಿ ಬಂಧುಗಳು ಆಗಮಿಸಿ ಬೈಕ್ ರ್ಯಾಲಿ ಯಲ್ಲಿ ಪಾಲ್ಗೊಳ್ಳುವಂತೆ ಸಮಿತಿಯವರು ಗೌರವಪೂರ್ವಕ ಧರ್ಮ ಕರೆ ನೀಡಿದ್ದಾರೆ.
ಯುಗಾದಿ ಉತ್ಸವದ ಹಿನ್ನೆಲೆಯಲ್ಲಿ ಸಮಸ್ತ ಯಲ್ಲಾಪುರ ಕೇಸರಿಮಯವಾಗಿದ್ದು ಬೈಕ್ ರ್ಯಾಲಿ ಸಾಗುವ ಮಾರ್ಗದುದ್ದಕ್ಕು ಕೇಸರಿ ಪತಾಕೆ,ಧ್ವಜ,ತೋರಣ, ರಂಗೋಲಿ ಸರ್ವರನ್ನು ಸ್ವಾಗತಿಸಲು ಸಜ್ಜಾಗಿದೆ.

ಸೋಮವಾರ ರಾತ್ರಿ ಮಂಜುನಾಥ ನಗರದ ಯುವಕರ ತಂಡ ಸತೀಶ್ ಶಿವಾನಂದ ನಾಯ್ಕ್ ನೇತೃತ್ವದಲ್ಲಿ ಕೇಸರಿ ಪತಾಕೆ,ಬಂಟಿಗ್ಸ್, ಶ್ರೀರಾಮನ ಕಟೌಟ್, ಧ್ವಜ,ತೋರಣ ಕಟ್ಟಿ ಸಿಂಗಾರ ಮಾಡಿದರು.

ಕಾಳಮ್ಮ ನಗರದ ಯುವಕರ ಬಳಗ ತ್ರಿಶೂಲ ಸರ್ಕಲ್ ಮತ್ತು ಆ ಭಾಗದ ರಸ್ತೆಗಳಲ್ಲಿ ಕೇಸರಿ ಶ್ರಿಂಗಾರ ಮಾಡಿದರು.

ಗೌತಮ್ ಕಾಮತ್ ಮತ್ತು ಸ್ನೇಹ ಬಳಗದವರು ಸಹ ನಗರದ ಕೇಸರಿ ಶಂಗಾರದಲ್ಲಿ ತೊಡಗಿದ್ದು ಶೋಭಾ ಯಾತ್ರೆಯೊಳಗೆ ಮತ್ತಷ್ಟು ಅಲಂಕಾರ ಕಾಣಲಿದೆ ಯಲ್ಲಾಪುರ.












Prathidvani Yellapura