




ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ – ಅಖಾಡಕ್ಕಿಳಿದು ತಿಂಗಳಾಗಲಿಲ್ಲ ಆಗಲೆ ಆಟ ಶುರುವಿಟ್ಟುಕೊಂಡ ಕ್ರಿಯಾಶೀಲ ತಹಶಿಲ್ದಾರ ಅಶೋಕ್ ಭಟ್.

ಹಾಲಿ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ಬಳಿ ಈ ಹಿಂದೆ ಆಪ್ತ ಕಾರ್ಯದರ್ಶಿಯಾಗಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಸಾರ್ವಜನಿಕ ವಲಯದಲ್ಲಿ ಒಳ್ಳೆಯ ಹೆಸರು ಗಳಿಸಿದವರಾಗಿದ್ದಾರೆ.

ಅಶೋಕ್ ಭಟ್ ತಮ್ಮ ಕರ್ತವ್ಯವನ್ನು ಅತ್ಯಂತ ಗೌರವ ಮತ್ತು ಪ್ರೀತಿಯಿಂದ ನಡೆಸುವ ಮನಸ್ಸಿನವರು ವಿನಾ ಕಾರಣ ರಜೆಯನ್ನು ಹಾಕದೆ ತನಗಾಗಿ ಕಾಯುವ ತನ್ನಿಂದ ಒಂದಿಷ್ಟು ಕೆಲಸವಾಗಬೇಕಾದವರಿಗೆ ನನ್ನಿಂದ ಲೋಪವಾಗಬಾರದೆಂಬ ಮನಸ್ಸಿನಲ್ಲಿ ಸಮಯಕ್ಕೆ ಸರಿಯಾಗಿ ಕಚೇರಿಗೆ ಆಗಮಿಸುವುದಲ್ಲದೆ ಕರ್ತವ್ಯದ ಸಮಯಕ್ಕಿಂತ ಹೆಚ್ಚಿನ ಸಮಯ ಕೆಲಸ ನಿರ್ವಹಿಸುವ ಕ್ರಿಯಾಶೀಲ ತಾಲೂಕು ದಂಡಾಧಿಕಾರಿಯಾಗಿದ್ದಾರೆ. ತಮ್ಮ ಸಹೋದ್ಯೋಗಿಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ಅಕ್ಕರೆಯಿಂದ ಮಾತನಾಡಿಸಿ ಹಮ್ಮು ಬಿಮ್ಮು ಇಲ್ಲದೆ ಎಲ್ಲರೊಂದಿಗೆ ಬೆರೆಯುವ ಸರಳತೆಯ ವ್ಯಕ್ತಿತ್ವದವರು.

ಮೊಟ್ಟ ಮೊದಲು ಅವರು ಮಾಡಿದ ಕೆಲಸ ತನ್ನ ಕಚೇರಿಯ ಶಿಸ್ತು ಮತ್ತು ಸ್ವಚ್ಚತೆ. ಆಡಳಿತ ಸೌಧದ ಮುಂಭಾಗ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡಿ ಸಮಸ್ಯೆಯಾಗುತ್ತಿರುವುದ ಗಮನಿಸಿ ವಾಹನ ನಿಲುಗಡೆ ಶಿಸ್ತು ಬದ್ದ ವ್ಯವಸ್ಥೆ ಮಾಡಿದ್ದಾರೆ. ಇತರರಿಗೆ ತಿಳಿ ಹೇಳಿ ಜಾಗೃತಿ ಮೂಡಿಸುವ ಮೊದಲು ತನ್ನ ಕಚೇರಿಯಲ್ಲಿ ಸ್ವಚ್ಚತೆ ಮುಖ್ಯ ಎಂದು ಖುದ್ದು ತಾವೇ ತಮ್ಮ ಕಚೇರಿ ಶೌಚಾಲಯ ವ್ಯವಸ್ಥೆ ನೋಡಿ ಸರಿಪಡಿಸಲು ಸೂಚಿಸಿ ಸ್ವಚ್ಚಗೊಳಿಸಿದ್ದಾರೆ. ಅಧಿಕಾರಿಗಳು ಯಾರು ಸಾರ್ವಜನಿಕರು ಯಾರೆಂದು ತಿಳಿಯದ ಪರಿಸ್ಥಿತಿ ಬದಲಿಸಿ ಕಂದಾಯ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಗುರತಿನ ಪತ್ರ ಕೊರಳಲ್ಲಿ ಸದಾ ಧರಿಸುವಂತೆ ಮಾಡಿದ್ದಾರೆ. ಕಚೇರಿಗೆ ಸಮಯಕ್ಕೆ ಸರಿಯಾಗಿ ಬರುವಂತೆ ಸೂಚಿಸಿದ್ದಾರೆ. ಬಂದಂತಹ ಸಿಬ್ಬಂದಿಗಳು ತನಗೆ ಮುಖತಃ ಭೇಟಿಯಾಗುವಂತೆ ತಿಳಿಸಿದ್ದಾರೆ ಇಂತಹ ಸಾತ್ವಿಕ ನಡೆಗೆ ಎಲ್ಲಾ ಸಾರ್ವಜನಿಕರು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.

ಶಾಸಕರು,ಜನಪ್ರತಿನಿಧಿಗಳು, ಹಿರಿಕಿರಿ ಅಧಿಕಾರಿಗಳು ಸಂಘಸಂಸ್ಥೆಗಳ ಪ್ರಮುಖರು ಸಾರ್ವಜನಿಕರು ಮಾಧ್ಯಮದವರ ಸಲಹೆ ಸೂಚನೆಗೆ ಸ್ಪಂದಿಸಿ ಆ ಬಗ್ಗೆ ಹೆಚ್ಚಿನ ಗಮನ ಹರಿಸಿ ಸಮಸ್ಯೆಗಳನ್ನು ಬಗೆಹರಿಸುವತ್ತ ಮುಂದಾಗುವ ಜನಪರ ಕಾಳಜಿ ಇರುವ ಅಧಿಕಾರಿಯಾಗಿದ್ದಾರೆ ಅಶೋಕ್ ಭಟ್.

ನನ್ನ ಪ್ರಕಾರ ಸರ್ಕಾರಿ ನೌಕರಿ ಎಂಬುದು ಜನರಿಗೆ ಸೇವೆ ನೀಡುತ್ತ ನಮಗೆ ವಹಿಸಿರುವ ಜವಾಬ್ದಾರಿ ಕಾರ್ಯವನ್ನು ಭಗವಂತ ಸೇವೆ ಎಂದು ಪರಿಗಣಿಸಿ ಕರ್ತವ್ಯ ನಿರ್ವಹಿಸಬೇಕಿದೆ. ಮಳೆ ಕೆಲವು ತಿಂಗಳ ಕಾಲ ಸುರಿದರು ಭೂಮಿಯ ಹಸಿರು ವರ್ಷ ಪೂರ್ಣ ಇರುವ ರೀತಿ ಕೆಲವು ಸ್ಥಳಗಳಲ್ಲಿ ನಮ್ಮ ಕರ್ತವ್ಯಕ್ಕೆ ಕೆಲವೇ ತಿಂಗಳ ಅವಕಾಶ ದೊರೆತರು ತಾನಿದ್ದಷ್ಟು ಸಮಯ ಸಮಾಜದ ಕಟ್ಟಕಡೆಯ ವ್ಯಕ್ತಿಗು ನಮ್ಮ ಕೈಲಾದ ಸೇವೆ ನೀಡುವುದು ಆತ್ಮ ತೃಪ್ತಿ ಕಾರ್ಯವಾಗಿದೆ.
ಅಶೋಕ್ ಭಟ್, ತಹಶಿಲ್ದಾರ, ಯಲ್ಲಾಪುರ

Prathidvani Yellapura