Breaking News

ಯಲ್ಲಾಪುರ ಪೊಲೀಸರ ಮಿಂಚಿನ ಕಾರ್ಯಾಚರಣೆ 5 ಮಂದಿ ಗಾಂಜಾ ಪೆಡ್ಲರ್ ವಶಕ್ಕೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

ಪ್ರತಿಧ್ವನಿ ಯಲ್ಲಾಪುರ –ಬಹುದಿನಗಳಿಂದ ಕಾಣಿಸದ ಗಾಂಜಾ ಘಾಟು ಯಲ್ಲಾಪುರದಲ್ಲಿ ಮತ್ತೆ ಪ್ರತ್ಯಕ್ಷವಾಗಿದ್ದು ಶುಕ್ರವಾರ ಮಾರಾಟಕ್ಕಾಗಿ ಗಾಂಜಾ ಸಾಗಿಸುವ ವೇಳೆ ಮಾಲಿನ ಸಹಿತ ಐವರು ಪೆಡ್ಲರ್ ವಶಕ್ಕೆ ಪಡೆಯಲಾಗಿದೆ.

ಸಾಂದರ್ಭಿಕ ಚಿತ್ರ

ಯಲ್ಲಾಪುರ ಪಟ್ಟಣದ ನೂತನ ನಗರ ನಿವಾಸಿಗಳಾದ ಹಣ್ಣಿನ ವ್ಯಾಪಾರಿ ಸೈಯದ್ ನಹೀಮ್ ಸೈಯದ್ ಮಹ್ಮದ್ ( 28 ) ,
ಆದಿಲ್ ಮೀರ ಆದಂ ಮೀರ ಮುನಾಫ್ ( 18 ) , ಮಲ್ಲಿಕ್ ರೆಹಾನ್ ಹರುಣ ಶೇಖ್ ( 28) , ಉದ್ಯಮ ನಗರ ಬಟ್ಟೆ ವ್ಯಾಪಾರಿ ಪವನ್ ಸರ್ವೇಶ್ ಬನ್ಸೋಡೆ ( 21), ಮಾಲು ಲಕ್ಕು ಲಾಬೋರ (20) ಎಂಬ ಐದು ಮಂದಿ ಯುವಕರನ್ನೆ ಗಾಂಜಾ ಸಾಗಿಸುವ ವೇಳೆ ವಶಕ್ಕೆ ಪಡೆದಿರುವುದು.

ಸಾಂದರ್ಭಿಕ ಚಿತ್ರ


10 ಸಾವಿರ ಮೌಲ್ಯದ 565 ಗ್ರಾಂ ಗಾಂಜಾ, 2600 ನಗದು, 20 ಸಾವಿರ ಮೌಲ್ಯದ 4 ಮೊಬೈಲ್, 4 ಲಕ್ಷ ಮೌಲ್ಯದ ಐ 20 ಕಾರು ಒಟ್ಟು 4 ಲಕ್ಷದ 32 ಸಾವಿರದ 600 ರುಪಾಯಿ ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆದಿದ್ದು N.D.P.S 1985 ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ಉತ್ತರಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಯಕುಮಾರ , ಜಗದೀಶ ನಾಯ್ಕ ಹಾಗೂ ಶಿರಸಿ ಪೊಲೀಸ್ ಉಪಾಧೀಕ್ಷಕ ಗಣೇಶ್ ಕೆ.ಎಲ್ ಮಾರ್ಗದರ್ಶನದಲ್ಲಿ ಯಲ್ಲಾಪುರ ಪಿಐ ರಮೇಶ್ ಎಚ್ ಹಾನಾಪುರ ನೇತೃತ್ವದಲ್ಲಿ ಪಿಎಸ್‌ಐಗಳಾದ ಸಿದ್ದು ಗುಡಿ, ನಿರಂಜನ ಹೆಗಡೆ, ವಿನೋದ ರಾಜ, ನಸ್ರೀನ್ ತಾಜ್, ಎಎಸ್‌ಐ ವಿಠ್ಠಲ ಮಲವಡಕರ ಮತ್ತು ಸಿಬ್ಬಂದಿಗಳಾದ ಬಸವರಾಜ ಹಗರಿ, ಮಹ್ಮದ್ ಶಫಿ, ರಾಘವೇಂದ್ರ ನಾಯಕ, ಸಂತೋಷ ನಾಯ್ಕ, ಗಿರೀಶ್ ಲಮಾಣಿ, ಪರಶುರಾಮ ಕಾಳೆ, ಬೆನಕ ನಾಯಕ, ಮುತ್ತು ಲಮಾಣಿ, ಅಮರ್ ಜಿ, ಕೃಷ್ಣಾ ಮಾತ್ರೋಜಿ, ಶೋಭಾ ನಾಯ್ಕ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಆರೋಪಿತರನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *