Breaking News

ಯಲ್ಲಾಪುರ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ- ಹಲವು ಮಹತ್ವದ ನಿರ್ಧಾರಕ್ಕೆ ಒಪ್ಪಿಗೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ : ಸರ್ಕಾರದ ನಿರ್ದೇಶನವನ್ನು ಅನುಸರಿಸಿ ಜನರ ಜೀವನ ಮಟ್ಟವನ್ನು ಆದರಿಸಿ ಪಟ್ಟಣ ಪಂಚಾಯತ್ ಆಸ್ತಿ ತೆರಿಗೆ ಪರಿಷ್ಕರಿಸಿ ವಿಧಿಸಬೇಕಿದೆ. ಇದಕ್ಕಾಗಿ ಆಯಾ ವಾಡ್೯ ಸದಸ್ಯರು ಸಹಕರಿಸಿ ಕರವಸೂಲಿ ಸಮರ್ಪಕವಾಗಿಸಲು ಕೈ ಜೋಡಿಸಬೇಕಿದೆ. ಕಳೆದ ಮೂರು ವರ್ಷಗಳಿಂದ ನಿವೇಶನಗಳನ್ನು ಖಾಲಿ ಬಿಟ್ಟಿದ್ದಲ್ಲಿ ನೋಟಿಸ್ ನೀಡಿ ಪಟ್ಟಣ ಪಂಚಾಯತ್ ವಶಕ್ಕೆ ಪಡೆಯ ಬಹುದಾಗಿದ್ದು ಈ ಕುರಿತು ಆಯಾ ವಾಡ್೯ ವ್ಯಾಪ್ತಿಯ ಸದಸ್ಯರು ಮಾಹಿತಿಯನ್ನು ಲಿಖಿತವಾಗಿ ನೀಡಬೇಕಿದೆ ಎಂದು ಪಟ್ಟಣ ಪಂಚಾಯತ ಆಡಳಿತಾಧಿಕಾರಿ ತಹಶಿಲ್ದಾರ ಗುರುರಾಜ್ ಹೇಳಿದರು.


ಅವರು ಪಟ್ಟಣ ಪಂಚಾಯತ್ ನಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಸಭೆಯ ಎಲ್ಲಾ ನಡವಳಿಗಳನ್ನು ಚರ್ಚಾ ವಿಷಯಗಳನ್ನು ದಾಖಲಿಸಬೇಕಿದೆ ಮತ್ತು ಸದಸ್ಯರು ತಮ್ಮ ಅಭಿಪ್ರಾಯ ಆಕ್ಷೇಪಗಳನ್ನು ಲಿಖಿತ ರೂಪದಲ್ಲಿ ನೀಡಬೇಕಿದೆ ಎಂದರು.


ಪಟ್ಟಣ ಪಂಚಾಯತ್ ಉತ್ತಮ ಜಿಡಿಪಿ ಸಾಧಿಸದಿದ್ದಲ್ಲಿ ಸರ್ಕಾರದಿಂದ ದೊಡ್ಡ ಮಟ್ಟದ ಅನುದಾನ ನಿರೀಕ್ಷೆ ಕಷ್ಟಸಾದ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶಗಳನ್ನು ಪಾಲಿಸಿ ಸಭೆಯು ಚರ್ಚಿಸಿ ಉತ್ತಮವಾದ ಆಡಳಿತದೆಡೆಗೆ ಪಟ್ಟಣ ಪಂಚಾಯತ್ ಅನ್ನು ಕೊಂಡೊಯ್ಯಬೇಕಿದೆ ಅದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸುನಿಲ್ ಎಸ್ ಗಾವಡೆ ಹೇಳಿದರು.


ಸಭೆಯಲ್ಲಿ ಬಹು ಮುಖ್ಯವಾಗಿ ಸುಮಾರು 92 ಕೋಟಿಗು ಅಧಿಕ ವೆಚ್ಚದ ಪಟ್ಟಣದ ಶಾಶ್ವತ ಕುಡಿಯುವ ನೀರಿನ ಯೋಜನೆಯ ಅನುಷ್ಟಾನದ ಕುರಿತು ಸರ್ಕಾರದ ಸುತ್ತೋಲೆ ಓದಿ ತಿಳಿದು ಸಭೆ ಸರ್ವಾನುಮತದ ಒಪ್ಪಿಗೆ ಸೂಚಿಸಿತು.


ಕೆಲವೊಂದು ಮನೆಗಳಿಗೆ ಜಿಪಿಎಸ್ ಮಾಡಿಸುವುದಾಗಿ ಹೇಳಿ ಹಣ ಪಡೆದು ಮೊಸ ಮಾಡಿರುವುದಾಗಿ ಮಾಹಿತಿ ಇದೆ ಎಂಬ ನೂತನ ನಗರ ವಾಡ್೯ ಸದಸ್ಯೆ ಪುಷ್ಪಾ ನಾಯ್ಕ್ ಮಾತಿಗೆ ಲಿಖಿತವಾಗಿ ದೂರು ನೀಡಿ ಪರಿಶೀಲಿಸಲಾಗುವುದು ಎಂದು ತಹಶಿಲ್ದಾರ ಗುರುರಾಜ್ ಉತ್ತರಿಸಿದರು.

ಆರು ಸಮುದಾಯಗಳಿಗೆ ಅಂದರೆ ಬಂಜಾರ ಸೇವಾ ಪ್ರತಿಷ್ಟಾನ, ಸಮಗ್ರ ನಾಮದಾರಿ ಸಂಘ , ದೈವಜ್ಞ ಹಿತವರ್ಧಕ ಸಂಘ , ಕನ್ನಡ ವೈಶ್ಯ ಸಮಾಜ, ಅಖಿಲ ಕರ್ನಾಟಕ ಬೋವಿ ವಡ್ಡರ್ ಯುವ ವೇಧಿಕೆ , ಹಿಂದುಳಿದ ಒಕ್ಕಲಿಗರ ಅಭಿವೃದ್ಧಿ ಸಂಘ ಸಮಾಜಗಳಿಗೆ ಸಮುದಾಯ ಭವನ ನಿರ್ಮಾಣಕ್ಕಾಗಿ ತಲಾ 5 ಗುಂಟೆ ಸ್ಥಳ ಮಂಜೂರಾಗಿದ್ದು ಇದಕ್ಕೆ ಪಟ್ಟಣ ಪಂಚಾಯತ್ ಸಭೆ ನಡೆಸಿ  ಠರಾವು ಕಳಿಸಬೇಕೆಂಬ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಸಭೆಯಲ್ಲಿ ಒಪ್ಪಿಗೆ ಸೂಚಿಸಿ ಠರಾವು ಹೊರಡಿಸಲಾಯಿತು.


ಪಟ್ಟಣದಲ್ಲಿನ ಐದು ಸಾರ್ವಜನಿಕ ಶೌಚಾಲಯ ನಿರ್ವಹಣೆ ಯನ್ನು ವಿಜಯಪುರ ಮೂಲದ ನೇಹಾ ಫೌಂಡೇಶನ್ ಸಂಸ್ಥೆ ಗೆ ವರ್ಷದ ಅವಧಿಗೆ ಗುತ್ತಿಗೆ ನೀಡಲು ಒಪ್ಪಿಗೆ ಸೂಚಿಸಲಾಯಿತು ಇದರನ್ವಯ ಮೂತ್ರ ವಿಸರ್ಜನೆ ಉಚಿತ. ಶೌಚಾಲಯ ಬಳಕೆ 5 ರುಪಾಯಿ ಮತ್ತು ಸ್ನಾನದ ಬಳಕೆಗೆ 20 ರುಪಾಯಿ ನಿಗಧಿಪಡಿಸಲಾಯಿತು.
ಇನ್ನಿತರ ವಿಷಯಗಳ ಬಗ್ಗೆ ಗಂಭೀರ ಚರ್ಚೆ ನಡೆದು ಸಭೆಯು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿತು.
ತಹಶಿಲ್ದಾರ ಗುರುರಾಜ್ ಅಧ್ಯಕ್ಷತೆಯಲ್ಲಿ ಮುಖ್ಯಾಧಿಕಾರಿ ಸುನಿಲ್ ಗಾವಡೆ ಉಪಸ್ಥಿತಿಯಲ್ಲಿ ಪಟ್ಟಣ ಪಂಚಾಯತ್ ಸದಸ್ಯರು ಮತ್ತು ನಾಮ ನಿರ್ದೇಶಿತ ಸದಸ್ಯರು ಹಾಗು ಸಿಬ್ಬಂದಿಗಳ ಭಾಗವಹಿಸುವಿಕೆಯಲ್ಲಿ ಸಾಮಾನ್ಯ ಸಭೆ ಜರುಗಿತು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *