

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ.
ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದಿಂದ ಹುಬ್ಬಳ್ಳಿ ಮಾರ್ಗದಲ್ಲಿ ಸಾಗಿದರೆ ನ್ಯೂ ಮಲಬಾರ್ ಹೊಟೆಲ್ ಸಮೀಪ ಬಳ್ಳಾರಿ – ಕಾರವಾರ ರಾಷ್ಟ್ರೀಯ ಹೆದ್ದಾರಿ ಮೇಲೆ ಅಪಾಯಕಾರಿ ತಿರುವಿನಲ್ಲಿ ಗಜಗಾತ್ರದ ಸಿಮೆಂಟ್ ಸ್ಲಾಬ್ ರಸ್ತೆ ಅಂಚಿಗೆ ಅನಾಥವಾಗಿ ಬಿದ್ದಿದ್ದು ಯಾರದೊ ಮನೆಯ ದೀಪ ಆರಿಸಿ ಅನಾಥವಾಗಿಸಲು ಹೊಂಚು ಹಾಕಿ ಕುಳಿತಂತಿದೆ.

ಕಳೆದ ನಾಲ್ಕು ತಿಂಗಳಿಂದ ಹೆದ್ದಾರಿ ಬದಿಯಲ್ಲಿ ದಡೂತಿಯಂತೆ ಬಿದ್ದಿರುವ ನಾಲ್ಕೈದು ಸಿಮೆಂಟ್ ಸ್ಲಾಬ್ ಗಳು ವಾಹನ ಸಂಚಾರಿಗಳಿಗೆ ಪ್ರಾಣಕಂಟಕವಾಗಿ ಕಾದು ಕುಳಿತಿದೆ.
ಇತ್ತೀಚೆಗೆ ಹೆದ್ದಾರಿ ಪಕ್ಕದಲ್ಲಿ ಎಲ್ಲಿ ಬೇಕೆಂದರಲ್ಲಿ ಕಸದ ರಾಶಿ ಸೃಷ್ಟಿಯಾಗುತ್ತಿದೆ. ಯವುದೊ ಊರಿನ ತ್ಯಾಜ್ಯ ಹೆದ್ದಾರಿ ಪಕ್ಕದಲ್ಲಿ ಸದ್ದಿಲ್ಲದೆ ರಾತ್ರಿ ವೇಳೆಯಲ್ಲಿ ಸುರಿದು ಹೋಗುತ್ತಿದ್ದಾರೆ. ಮೊದಲೆ ಹೇಳಿಕೇಳಿ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಅಪಘಾತಗಳಿಗೆ ಹಾಟ್ ಸ್ಪಾಟ್ ಎನ್ನತ್ತಿರುವ ಸಂದರ್ಭದಲ್ಲಿ ಇಂತಹ ಇನ್ನಷ್ಟು ಅವಾಂತರಗಳು ಕಣ್ಣಮುಂದೆಯೆ ಕಾಣುತ್ತಿದ್ದರು ಹೆದ್ದಾರಿ ನಿರ್ವಹಣೆ ಜವಾಬ್ದಾರಿ ಹೊತ್ತವರು ಸಿಮೆಂಟ್ ಸ್ಲಾಬ್ ಮಾಲಿಕನ ಮೇಲೆ ಕಾನೂನು ಕ್ರಮ ಜರುಗಿಸದಿರುವುದಿ ವಿಷಾಧನಿಯ.
ಕಳೆದ ಕೆಲವುದಿನಗಳ ಹಿಂದೆ ಇದೇ ಅಪಾಯಕಾರಿ ತಿರುವಿನಲ್ಲಿ ಅಪಘಾತವಾಗಿ ಪ್ರಾಣಪಕ್ಷಿ ಹಾರಿ ಹೋಗಿದೆ. ಇನ್ನಾದರು ಎಚ್ಚೆತ್ತು ಕೊಂಡು ಹೆದ್ದಾರಿ ಪ್ರಾಧಿಕಾರ ಅಥವ ಪೊಲೀಸರು ಸಮಸ್ಯೆ ಬಗೆಹರಿಸಬೇಕಿದೆ ಇಲ್ಲವಾದರೆ ರಸ್ತೆ ಸುರಕ್ಷತೆಗಾಗಿ ಸೂಚನ ಫಲಕಗಳ ಸಂಖ್ಯೆ ಹೆಚ್ಚಿಸಿ ” ರಸ್ತೆ ಬದಿಯಲ್ಲಿ ಸಿಮೆಂಟ್ ಸ್ಲಾಬ್ ಬಿದ್ದಿದೆ ನಾವು ತೆಗೆದಿಲ್ಲ ನೀವು ನಿಧಾನವಾಗಿ ಚಲಿಸಿ ಎಂದು ಹೊಸ ಫಲಕ ಅಳವಡಿಸಬೇಕಾಗಬಹುದು ” ಎನ್ನುತ್ತಿದ್ದಾರೆ ರಸ್ತೆ ಸವಾರರು.
ಈಗಾಗಲೆ ಸಿಮೆಂಟ್ ಸ್ಲಾಬ್ ಸಂಬಂಧಿಸಿದ ಕಂಪನಿಗೆ ನೋಟಿಸ್ ನೀಡಲಾಗಿದ್ದು ಶೀಘ್ರವಾಗಿ ತೆರವುಗೊಳಿಸಲಾಗುವುದು. ಇಲ್ಲವಾದಲ್ಲಿ ಸಂಬಂಧಪಟ್ಟ ಕಂಪನಿಯ ಮೇಲೆ ಕಾನೂನು ಕ್ರಮಕ್ಕೆ ಕೈಗೊಳ್ಳಲಾಗುವುದು.
ರಂಗನಾಥ ನೀಲಮ್ಮನವರ್
ಪಿ.ಐ ಯಲ್ಲಾಪುರ ಪೊಲೀಸ್ ಠಾಣೆ
ಹೆದ್ದಾರಿ ಮೇಲೆ ಏನೆ ಆದರು ತಕ್ಷಣದಲ್ಲಿ ನಮ್ಮ ಕಾರ್ಯಾಚರಣೆ ಮಾಡಿ ಸರಿ ಪಡಿಸಬಹುದು ಇದು ವಾಹನದಿಂದ ಬಿದ್ದ ಸ್ಲಾಬ್ ಗಳನ್ನು ರಸ್ತೆ ಬದಿ ಸರಿಸಿದ್ದಾರೆ ಈ ಕುರಿತು ಪೊಲೀಸರ ಗಮನಕ್ಕೆ ತಂದಿದ್ದೇನೆ. ಈ ವರೆಗು ಖುಲ್ಲಪಡಿಸಿಲ್ಲ ಅವರು ಸೂಚನೆ ನೀಡಿದರೆ ನಮ್ಮ ಜಿ.ಸಿ.ಬಿ ಬಳಸಿ ಮತ್ತಷ್ಟ ಪಕ್ಕಕ್ಕೆ ಸರಿಸಬಹುದಾಗಿದೆ. ಇದು ಅಪಾಯಕಾರಿಯಂತು ಹೌದಾಗಿದೆ.
ಮುರುಗೇಶ್
ರಾಷ್ಟ್ರೀಯ ಹೆದ್ದಾರಿ ನಿರ್ವಹಣೆ ಸಿಬ್ಬಂದಿ
Prathidvani Yellapura