Breaking News

ಅಯ್ಯೋ ದುರ್ವಿಧಿ!!ಇದೆಂತ ಘೋರ
ಮೂರು ಮುಗ್ದರು ಬಾವಿಗಿಳಿದು ಸಾವು.


ಪ್ರತಿಧ್ವನಿ, ಯಲ್ಲಾಪುರ- ತಾಲ್ಲೂಕಿನ ಮಾವಿನಕಟ್ಟಾ ದಲ್ಲಿ ಗುರುವಾರ ನಡೆದ ಮನ ಕಲಕುವ ಘಟನೆ ಪಂಪ್ ದುರಸ್ತಿಗೆ ಇಳಿದ ವ್ಯಕ್ತಿಯ ಸಾವು. ಕಾಪಾಡಲು ತೆರಳಿದ ಮತ್ತೂ ಇಬ್ಬರ ದುರ್ಮರಣ ವಿಧಿಯಾಟಕ್ಕೆ ಮೂವರು ಬಲಿ ಮುಗಿಲು ಮುಟ್ಟಿದ ಕುಟುಂಬದ ಆಕ್ರಂದನ.


ಮಾವಿನಕಟ್ಟದಲ್ಲಿ ವ್ಯಕ್ತಿಯೋರ್ವರಿಗೆ ಸೇರಿದ ಬಾವಿಯಲ್ಲಿನ ಪಂಪ್ ದುರಸ್ತಿಗಾಗಿ ಗೋವಿಂದ ಸೋಮಯ್ಯ ಪೂಜಾರಿ (60) ಎಂಬುವರು ಪಂಪ್ ದುರಸ್ತಿಗೆ ಬಾವಿಯೊಳಗೆ ಇಳಿದಿದ್ದು ಬಹಳ ಸಮಯದವರೆಗೆ ಬಾರದಿದ್ದದ್ದನ್ನು ಕಂಡವರು ಕೂಗಿಕೊಂಡಿದ್ದಾರೆ ತಕ್ಷಣವೇ ಅಲ್ಲಿಯೆ ಹೋಗುತ್ತಿದ್ದ ಮಾವಿನಕಟ್ಟಾ ಸ್ಥಳೀಯ ನಿವಾಸಿ ಗಣೇಶ ರಾಮದಾಸ್ ಶೇಟ್ (23 ) ಎಂಬ ಯುವಕ ಸಹಾಯಕ್ಕೆಂದು ದಾವಿಸಿ ಬಾವಿಗಿಳಿದಿದ್ದಾನೆ ಆತನು ಸಮಸ್ಯೆಗೆ ಸಿಲುಕಿರುವ ಸೂಚನೆ ದೊರೆಯುತ್ತಿದ್ದಂತೆ ಅಲ್ಲಿಯೆ ಇದ್ದ ಸುರೇಶ ನಾಯರ್ ( 40) ಎಂಬಾತ ಬಾವಿಗಿಳಿದಿದ್ದಾನೆ ಆತನ ಪ್ರಾಣ ಪಕ್ಷಿಯು ಹಾರಿ ಹೋಗಿದ್ದು‌ ಮೂವರ ಪ್ರಾಣ ಪಕ್ಷಿ ಹಾರಿ ಹೋಗಿದೆ.
ತಕ್ಷಣ ಪೊಲಿಸರಿಗೆ ಮಾಹಿತಿ ನೀಡಿದ್ದು ಪೋಲಿಸರು ಸ್ಥಳಕ್ಕಾಗಮಿಸಿ ಅಗ್ನಿಶಾಮಕ ದಳದ ಸಹಾಯದಿಂದ ಮೂವರ ಮೃತದೇಹ‌ಹೊರ ತಗೆಯಲಾಯಿತು . ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ಮಾಡಲು ಯಲ್ಲಾಪುರ ಸರ್ಕಾರಿ ಆಸ್ಪತ್ರೆ ಗೆ ಸಾಗಿಸಲಾಯಿತು.

.

ಸಚಿವ ಶಿವರಾಮ ಹೆಬ್ಬಾರ್ಗೆ ಸುದ್ದಿ ತಿಳಿಯುತ್ತಲೆ ತಕ್ಷಣ ಹೊರಟು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ದೈರ್ಯ ತುಂಬಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ವೈ.ಟಿ.ಎಸ್‌.ಎಸ್ ನಿಂದ ರಾಧಾ ಕೃಷ್ಣ ವೇಷ ಸ್ಪರ್ಧೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ ವರದಿ, ಯಲ್ಲಾಪುರ : ಸ್ಥಳೀಯ ವೈ.ಟಿ.ಎಸ್.ಎಸ್ …

Leave a Reply

Your email address will not be published. Required fields are marked *