
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಅಂಬೇಡ್ಕರ್ ವೃತ್ತ, ಮುಂಡಗೋಡು ರಸ್ತೆ ಸುತ್ತ ಮುತ್ತ ಕಳೆದ ಕೆಲವು ದಿನಗಳಿಂದ ಎರಡು ಕುದುರೆಗಳು ಅನಾಥವಾಗಿ ಸುತ್ತುತ್ತಿದ್ದು ಪ್ರಾಣಿ ಪ್ರಿಯರು ಅಥವಾ ಅರಣ್ಯ ಇಲಾಖೆ ಯವರು ಅಥವಾ ಸಂಬಂಧಿಸಿದ ಇಲಾಖೆಯವರು ಈ ಮೂಕ ಪ್ರಾಣಿಗಳಿಗೆ ಆಸರೆ ಒದಗಿಸುವತ್ತ ಗಮನ ಹರಿಸಬೇಕಿದೆ ಎಂಬುದು ಸ್ಥಳೀಯ ನಾಗರಿಕರ ಅಭಿಪ್ರಾಯವಾಗಿದೆ.

ಬೇರಾವುದೋ ಊರಿನಿಂದ ವಾಹನದಲ್ಲಿ ತಂದು ಯಲ್ಲಾಪುರ ಅರಣ್ಯ ಪರಿಸರದಲ್ಲಿ ಬಿಟ್ಟು ಹೋಗಿರುವ ಸಾದ್ಯತೆ ಇದೆ. ಅಥವಾ ಮಾಲಿಕರು ಇಲ್ಲೆ ಸುತ್ತಮುತ್ತಲಿನ ಪ್ರದೇಶದಲಿದ್ದು ಕುದುರೆಗಳನ್ನು ತಿರುಗಾಡಲು ಬಿಟ್ಟಿದ್ದಾರೋ ತಿಳಿಯುತ್ತಿಲ್ಲ. ಮೇಲ್ನೋಟಕ್ಕೆ ಕುದುರೆಗಳು ಆರೋಗ್ಯವಂತವಾಗಿದ್ದು ಯಾವುದೆ ನಿತ್ರಾಣ ಸ್ಥಿತಿ ಕಂಡುಬರುತ್ತಿಲ್ಲ. ಕಾರಣ ಕೆಲವು ಸಂದರ್ಭಗಳಲ್ಲಿ ಕುದುರೆಗಳು ಅಪ್ರಯೋಜನ ಎನಿಸಿದಾಗ ಮಾಲುಕ ಅವುಗಳನ್ನು ಸಾಗಾ ಹಾಕಲು ಚಿಂತಿಸುತ್ತಾನೆ ಆದರೆ ಇಲ್ಲಿ ಅಂತಹ ಸ್ಥಿತಿ ಇರುವುದಿಲ್ಲ.

ಅನಾವಶ್ಯಕವಾಗಿ ಕಟುಕರ ಕಣ್ಣಿಗೆ ಬಿದ್ದು ಮೂಕ ಪ್ರಾಣಿಗಳ ಜೀವಕ್ಕೆ ಅಪಾಯವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ತಕ್ಷಣ ಸಂಬಂಧಿಸಿದ ಇಲಾಖೆಯವರು ಸಮಸ್ಯೆ ಬಗೆಹರಿಸಬೇಕಿದೆ.









Prathidvani Yellapura