
ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ಪೊಲೀಸರ CEIR ಪೋರ್ಟಲ್ ಕಾರ್ಯಾಚರಣೆ – ಹತ್ತು ಮೊಬೈಲ್ ವಾರಸುದಾರರ ಕೈಗೆ.

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಕಳೆದುಕೊಳ್ಳುವುದು ಅಥವ ಕಳ್ಳತನವಾಗುವ ಪ್ರಕರಣಗಳು ಹೆಚ್ಚುತ್ತಲಿವೆ,ಪೊಲೀಸರು ವಿವಿಧ ರೂಪದಲ್ಲಿ ಜಾಗೃತಿ ಮೂಡಿಸುತ್ತಾ ಬಂದರು ಮೊಬೈಲ್ ಕಳೆದುಕೊಳ್ಳುವ ಪ್ರಕರಣಗಳು ಹೆಚ್ಚತ್ತಲೆ ಇವೆ.
ಯಲ್ಲಾಪುರ ಪೊಲೀಸರು ಮೊಬೈಲ್ ಕಾಣೆಯಾದ ಪ್ರಕರಣಗಳ ಬೆನ್ನು ಹತ್ತಿದ್ದು CEIR ಪೊರ್ಟಲ್ ಮೂಲಕ 10 ಮೊಬೈಲ್ ಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ತಲುಪಿಸಿದ್ದಾರೆ.

ಈ ಸಂದರ್ಭದಲ್ಲಿ ಪಿಎಸ್ಐ ಗಳಾದ ರಾಜಶೇಖರ ವಂದಲಿ, ಮಹಾವೀರ ಕಾಂಬ್ಳೆ ಉಪಸ್ಥಿತರಿದ್ದು ವಾರಸುದಾರರಿಗೆ ಮೊಬೈಲ್ ಹಸ್ತಾಂತರಿಸಿ ಮುಂದೆ ಜಾಗ್ರತೆಯಿಂದಿರಲು ಸೂಚಿಸಿದರು. ಮೊಬೈಲ್ ಪಡೆದ ವಾರಸುದಾರರು ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.


https://www.facebook.com/share/v/1M5vB7J7H2/













Prathidvani Yellapura