Breaking News

ಯಲ್ಲಾಪುರದ ಸ್ವರ ಮಾಧುರಿ ಸಂಗೀತ ವಿದ್ಯಾಲಯದ ಆಶ್ರಯದಲ್ಲಿ ಗುರು ಪೂರ್ಣಿಮಾ ನಿಮಿತ್ತ ನಾದ ಪೂರ್ಣಿಮಾ ಸಂಗೀತ ಕಾರ್ಯಕ್ರಮ.


ಪ್ರತಿಧ್ವನಿ ಯಲ್ಲಾಪುರ – ತಾಲೂಕಿನ ಹೆಸರಾಂತ ಸಂಗೀತ ವಿದ್ಯಾಲಯವಾಗಿ ಗುರುತಿಸಿಕೊಂಡ ರಮೇಶ್ ಹೆಗಡೆ ಸಾರಥ್ಯದ ” ಸ್ವರ ಮಾಧುರಿ ಸಂಗೀತ ವಿದ್ಯಾಲಯ ” ಆಶ್ರಯದಲ್ಲಿ ತಟಗಾರ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ ಪ್ರಾಂಗಣದಲ್ಲಿ ಗುರು ಪೂರ್ಣಿಮಾ ನಿಮಿತ್ತ ಮತ್ತು ದಿ, ಸಂಗೀತ ಉಡುಪ ಗುರುಗಳ ಸ್ಮರಣಾರ್ಥವಾಗಿ ನಾದ ಪೂರ್ಣಿಮಾ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.


ವೇ|ಶ್ರೀ, ನಾಗಪತಿ ಹೆಗಡೆ ದೇವಾಲಯದ ಅರ್ಚಕರು ಕಾರ್ಯಕ್ರಮ ಉದ್ಘಾಟಿಸಿ ಶುಭಕೋರಿದರು, ದೇವಸ್ಥಾನದ ಅಧ್ಯಕ್ಷ ಗೋಪಾಲ ಹಂಗಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ನುಡಿಗಳನ್ನಾಡಿದರು.
ನರಸಿಂಹ ಬೋಳ್ಪಾಲ್, ಎಂ.ಜಿ.ಭಟ್ಟ ಶೀಗೆಪಾಲ್, ಮಂಜುನಾಥ ಸಾತುಗದ್ದೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ರಮೇಶ್ ಹೆಗಡೆ ಸಾರಥ್ಯ, ವಿದೂಷಿ ವಾಣಿ ರಮೇಶ್ ಹೆಗಡೆ ಪ್ರಾಚಾರ್ಯತ್ವದಲ್ಲಿ, ಗುರುಗಳಾದ ಗಣಪತಿ ಹೆಗಡೆ ಕಲಿಕೆಯಲ್ಲಿ ಸ್ವರ ಮಾಧುರಿ ಸಂಗೀತ ಸಂಸ್ಥೆಯ ಕಾರ್ಯಕ್ರಮ ಸಂಗೀತದ ಕಡಲಿನಲ್ಲಿ ತೇಲಿತು.


ಸ್ವರ ಮಾಧುರಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಮನಕ್ಕೆ ಇಂಪಾಗಿಸುವ ಹೃದಯವ ತಂಪಾಗಿಸುವ ಮತ್ತು ಭಗವಂತನಲ್ಲಿ ತಲ್ಲೀನಗೊಳ್ಳುವ ವಿವಿಧ ಸಂಗೀತ ಸುಧೆ ಹರಿಸಲಾಯಿತು,ನೆರೆದ ಪ್ರೇಕ್ಷಕರನ್ನು ಕೆಲಕಾಲ ಮಂತ್ರಮುಗ್ದರನ್ನಾಗಿಸಿತು.


ಇಂತಹ ಅಮೋಘ ಸಂಗೀತ ರಸಗವಳಕ್ಕೆ ಸವಿಸೇರಿಸಿದ ತಬಲ ಕಲಾವಿದರಾದ ಗಣೇಶ್ ಭಾಗ್ವತ್ ಗುಂಡ್ಕಲ್, ಪ್ರದೀಪ್ ಕೋಟೆಮನೆ,ಶಶಿಧರ ಭಟ್ ಅಂಕೋಲ, ರಾಜೇಂದ್ರ ಭಾಗ್ವತ್ ಹೆಗ್ಗಾರ್, ಶ್ರೀಶ ವೈದ್ಯ ವೈದ್ಯ ಹೆಗ್ಗಾರ್ ಸಹಕರಿಸಿದರು, ಹಾರ್ಮೋನಿಯಂ ಸಾಥ್ ಸತೀಶ್ ಭಟ್ ಹೆಗ್ಗಾರ್, ಸುದೇಶ ಭಟ್ ಮಣ್ಮನೆ ತಾಳದಲ್ಲಿ ಅನಂತ್ ಯಲ್ಲಾಪುರಕರ ಸಹಕರಿಸಿದರು.
ಶಿರಸಿಯ ಡಿ.ಡಿ.ಹೆಗಡೆ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದರು.
ವೇದಿಕೆಯಲ್ಲಿ ಗುರು ವಂದನಾ ಕಾರ್ಯಕ್ರಮ ಜರುಗಿತು. ಸುಧಾಮ ದಾನಗೇರಿ ಸ್ವಾಗತಿಸಿದರು, ಗಣೇಶ ಹೆಗಡೆ ನೆರ್ಲೆಮನೆ ವಂದಿಸಿದರು,ಶ್ರೀಧರ ಹೆಗಡೆ ಮಾಳಕೊಪ್ಪ ನಿರ್ವಹಿಸಿದರು.

https://www.facebook.com/share/v/1M5vB7J7H2/

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಬಸ್ ಅಪಘಾತದಲ್ಲಿ ಗಾಯಗೊಂಡವರಿಗೆ ಸಾಂತ್ವನ ಹೇಳಿದ ಶಾಸಕ ಹೆಬ್ಬಾರ್ ಮತ್ತು ಪುತ್ರ ವಿವೇಕ್ ಹೆಬ್ಬಾರ್.

ಪ್ರತಿಧ್ವನಿ ಯಲ್ಲಾಪುರ : ಮುಂಡಗೋಡ ತಾಲ್ಲೂಕಿನ ಶಿಡ್ಲಗುಂಡಿ ಗ್ರಾಮದಲ್ಲಿ ಬುಧವಾರ ಎರಡು ಸಾರಿಗೆ ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ, ಬಸ್ ಚಾಲಕ …

Leave a Reply

Your email address will not be published. Required fields are marked *