
ಪ್ರತಿಧ್ವನಿ ಯಲ್ಲಾಪುರ : ಸಾಮಾಜಿಕ ಜಾಲತಾಣದಲ್ಲಿ ಯಾವುದೇ ವಿಭಾಗ ತೆರೆದರು ಒಂದೇ ಬೇಡಿಕೆ ಹಾಡುಗಳ ಮೂಲಕ ಮಾತಿನ ಮೂಲಕ ನೃತ್ಯಗಳ ಮೂಲಕ ಅಷ್ಟೇಕೆ ತಾವು ನಿತ್ಯ ಮಾಡುವ ತಮ್ಮ ವೃತ್ತಿಯ ಮೂಲಕ ಶಾಂತಿಕ್ರಾಂತಿ ಕನ್ನಡ ಚಲನ ಚಿತ್ರವನ್ನು ಮತ್ತೊಮ್ಮೆ ರೀ ರಿಲೀಸ್ ಮಾಡಬೇಕೆಂದು ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಅವರಿಗೆ ಒತ್ತಾಯಿಸುತ್ತಿದ್ದಾರೆ.

90 ರ ದಶಕದಲ್ಲಿ ಆಗಲೆ ಪ್ಯಾನ್ ಇಂಡಿಯಾ ಚಿತ್ರ ನೀಡಿದ ಹೆಗ್ಗಳಿಕೆ ನಮ್ಮ ಕನ್ನಡ ಚಿತ್ರರಂಗದ್ದು ಅದರಲ್ಲು ಚಲನ ಚಿತ್ರವನ್ನೆ ತನ್ನ ಉಸಿರಾಗಿಸಿಕೊಂಡ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪ್ರಯತ್ನ ಆಗಿತ್ತು. ಅದೇಕೊ ಚಿತ್ರ ಓಡಲೆ ಇಲ್ಲಾ ಆಗಿನ ಕಾಲಕ್ಕೆ 10 ಕೋಟಿಗು ಅಧಿಕ ಮೊತ್ತದ ಅದ್ದೂರಿ ಬಜೆಟ್ ಚಿತ್ರ ಇದಾಗಿತ್ತು,ನಂತರ ರವೀ ಸರ್ ಅತ್ಯಂತ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡರು ಸೋಲನ್ನು ಸವಾಲಾಗಿ ಸ್ವೀಕರಿಸಿ ತನ್ನ ಅಭಿಮಾನಿಗಳಿಗೆ ನಿರಾಸೆ ಮಾಡದೆ ಮತ್ತಷ್ಟು ಹಿಟ್ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡುತ್ತಾ ಬಂದಿದ್ದು ಇತಿಹಾಸ.

ರವಿಚಂದ್ರನ್ ಅವರ ತಂದೆ ಎನ್.ವೀರಸ್ವಾಮಿ ಅತ್ಯಂತ ಶ್ರೀಮಂತ ನಿರ್ಮಾಪಕರಾಗಿದ್ದು ತಮ್ಮ ಈಶ್ವರಿ ಪ್ರೊಡಕ್ಷನ್ ಅಡಿಯಲ್ಲಿ ಸಾವಿರಾರು ಕಲಾವಿದರು,ತಂತ್ರಜ್ಞರಿಗೆ ಅನ್ನ ಹಾಕಿದವರು. ಈಗಲು ಅನೇಕ ಕಲಾವಿದರು ತಮ್ಮ ಮನೆಯಲ್ಲಿ ವೀರಸ್ವಾಮಿ ಹೆಸರು ಹೇಳಿ ದೀಪ ಹಚ್ಚುತ್ತಾರೆ. ಅಂತಹವರ ಮಗನೆ ವಿ.ರವಿಚಂದ್ರನ್ ಹಣಕ್ಕೆ ಎಂದು ಬೆಲೆ ಕೊಡದೆ ಕೇವಲ ಪ್ರೇಕ್ಷಕನ ಅಭಿರುಚಿ ಪೂರೈಸಲೆಂದೇ ಪ್ರೇಮಲೋಕದಂತಹ ಸುಮಧುರ ಚಿತ್ರ ಕನ್ನಡ ಚಿತ್ರರಂಗಕ್ಕೆ ನೀಡಿದರು.

ಹಣ ತೊಡಗಿಸದೆ ಕೇವಲ ಸ್ಟುಡಿಯೋ ಒಳಾಂಗಣ ಚಿತ್ರೀಕರಣದಲ್ಲೆ ಕಾಲ ದೂಡುತ್ತಿದ್ದ ಕನ್ನಡ ಚಿತ್ರ ರಂಗವನ್ನು ಇತರೆ ಭಾಷೆಯ ಚಿತ್ರೋಧ್ಯಮ ಒಮ್ಮೆಲೆ ತಿರುಗಿ ನೋಡುವಂತೆ ಅದ್ದೂರಿತನ ಚಿತ್ರಗಳಿಗೆ ಮುನ್ನುಡಿ ಬರೆದವರು ವಿ, ರವಿಚಂದ್ರನ್ ಅವರು. ಸ್ವತಃ ಕನ್ನಡ ಕಂಠೀರವ ಡಾ,ರಾಜ್ ಕುಮಾರ್ ಸಹಿತ ಮೆಚ್ಚುಗೆ ವ್ಯಕ್ತಪಡಿಸಿ ಶಹಬಾಶ್ ಕೇಳಿಸಿಕೊಂಡ ಮಹಾನ್ ಕಲಾವಿದ ರವಿಚಂದ್ರನ್.

ಇಂತಹ ಕನಸುಗಾರ ತೆರೆಗೆ ತಂದ ಅದ್ದೂರಿ ತಾರಾಗಣ ನಾಲ್ಕು ಬಾಷೆಗಳಲ್ಲಿ ತೆರೆಕಂಡ ಶಾಂತಿಕ್ರಾಂತಿ ಸೋಲು ಸಹಿಸಿಕೊಳ್ಳಲಾಗದಂತ ಘಟನೆ ಆ ಕಹಿ ಘಟನೆಯನ್ನು ವರ್ತ ಮಾನದಲ್ಲಿ ಅಳಿಸಿ ಹೊಸ ಬಾಷ್ಯ ಬರೆಯಲು ಯುವ ಪೀಳಿಗೆ ಹಠ ತೊಟ್ಟಿದೆ.

ಭಾರತದ ಚಿತ್ರರಂಗದಲ್ಲಿ ಇಂತಹ ನಡೆ ಇರೋದು ಕರ್ನಾಟಕದಲ್ಲಿ ಮಾತ್ರ ಎಂಬುದು ವಿಶೇಷ. ಒಬ್ಬ ಕಲಾವಿದ ತಾನು ನಟಿಸಿ,ನಿರ್ದೇಶಿಸಿ,ನಿರ್ಮಾಣ ಮಾಡಿದ ಚಿತ್ರ ಸೋತರೆ ಅದು ಅವನ ಹಣೆ ಬರಹ ಎನ್ನದೆ. ಕಲಾವಿದನ ಸೋಲು ನಮ್ಮ ಕನ್ನಡಿಗರ ಸೋಲು ಅಂದು ಸೋತರು ಇಂದು Gen-z ಗಳ ಪ್ರಯತ್ನ ಮತ್ತು ವಯಸ್ಸಿನ ಬೇದವಿಲ್ಲದ ಅಭಿಮಾನಿಗಳ ಬಳಗವೆ ಇಂದು ರಾಜ್ಯಾದ್ಯಂತ ಮರು ಬಿಡುಗಡೆಗೆ ರವೀಮಾಮನ ಬಳಿ ಮೊರೆ ಇಡುತ್ತಿದ್ದಾರೆ. ಎಲ್ಲರದ್ದು ಒಂದೇ ಉದ್ದೇಶ ಕನಸುಗಾರ ರವೀಸರ್ ಪ್ರಯತ್ನ ವಿಫಲವಾಗಬಾರದು ಈಗ ಗೆಲ್ಲಿಸಿ ಚಿತ್ರದ ಋಣ ತೀರಿಸಲು ಕನ್ನಡ ನಾಡು ಸಜ್ಜಾಗಿದೆ.

ಯಲ್ಲಾಪುರದಲ್ಲಿಯು ರವಿಚಂದ್ರನ್ ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಇದ್ದು ಅವರುಗಳು ಸಹ ಶಾಂತಿ ಕ್ರಾಂತಿ ಮರು ಬಿಡುಗಡೆಗೆ ಒತ್ತಾಯಿಸುತ್ತಿದ್ದು ಬಿಡುಗಡೆ ಆದರೆ ಟಿಕೆಟ್ ಕೊಂಡು ಚಿತ್ರಮಂದಿರದಲ್ಲೆ ಚಿತ್ರ ವೀಕ್ಷಣೆಯ ಪಣ ತೊಟ್ಟಿದ್ದಾರೆ.


ಇದು ಒಬ್ಬ ಅಪ್ಪಟ ಕನ್ನಡ ಕಲಾವಿದನಿಗೆ ನಾಡಿನ ಜನತೆ ನೀಡುತ್ತಿರುವ ಹೆಮ್ಮೆಯ ಬಳುವಳಿ, ಇಂತಹ ನಡೆ ಬೇರಾವ ರಾಜ್ಯದಲ್ಲಿ ಕಾಣಲು ಸಾದ್ಯವಿಲ್ಲ. ಕನ್ನಡ ಚಿತ್ರಗಳನ್ನು ಜನರಿಗೆ ಉಣಬಡಿಸಿದ ಕನಸುಗಾರ ವಿ ರವಿಚಂದ್ರನ್ ಅವರ ಶಾಂತಿ ಕ್ರಾಂತಿ ಚಿತ್ರ ಮತ್ತೆ ಬೆಳ್ಳಿ ಪರದೆಯಮೇಲೆ ರಾರಾಜಿಸಲಿ ಸೋತ ಕಣ್ಣುಗಳು ಅವರು ಬದುಕಿದ್ದಾಗಲೆ ಗೆಲುವು ಕಾಣಲಿ, ನಾಡಿನ ಜನತೆ ಕನ್ನಡಕ್ಕಾಗಿ ದುಡಿದವನ ಕೈ ಬಿಡುವುದಿಲ್ಲ ಎಂಬ ಸಂದೇಶ ನಾಡಿಗೆ ತಿಳಿಯಲಿ. ಭವಿಷ್ಯದ ಪೀಳಿಗೆ ಇದೊಂದು ಪಾಠವೆಂದು ತಿಳಿದು ನಮ್ಮ ಬದ್ದತೆಯು ಹೌದು ಎಂಬುದನ್ನು ಅರ್ಥ ಮಾಡಿಕೊಳ್ಳಲಿ. ಪ್ರತಿಧ್ವನಿ ಸಹ ಕನಸುಗಾರ ವಿ ರವಿಚಂದ್ರನ್ ಅವರ ಹೊಸ ಗೆಲುವನ್ನು ಬುಸುತ್ತಿದೆ. ರವಿ ಸರ್ ಶಾಂತಿ ಕ್ರಾಂತಿ ಮತ್ತೊಮ್ಮೆ ಬಿಡುಗಡೆ ಮಾಡಿ ದಯವಿಟ್ಟು. ನೀವು ಸೋತಿಲ್ಲ ನಿಮ್ಮನ್ನು ಸೋಲಲು ಕನ್ನಡ ಜನತೆ ಬಿಡುವುದಿಲ್ಲ..ಕನ್ನಡವೇ ಸತ್ಯ ಕನ್ನಡವೇ ನಿತ್ಯ ಜೈ ಕನ್ನಡ ತಾಯಿ ಭುವನೇಶ್ವರಿ.

https://www.facebook.com/share/v/1M5vB7J7H2/












Prathidvani Yellapura