
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಅಂಬೇಡ್ಕರ್ ನಗರದ ಅಕ್ಬರ್ ಅಂಗಡಿ ಸರ್ಕಲ್ ನಲ್ಲಿ ಚಚ್೯ ರಸ್ತೆಯಲ್ಲಿರುವ ಕಲಾಲ್ ಕುಟುಂಬಕ್ಕೆ ಸೇರಿದ ನೂರಕ್ಕು ಅಧಿಕ ವರ್ಷಗಳ ಹಿಂದಿನ ಹಳೆಯ ಮನೆಯೊಂದು ನಿಧಾನವಾಗಿ ಕುಸಿಯುತ್ತಲಿದ್ದು ಅಪಾಯದ ಮಟ್ಟಕ್ಕೆ ತಲುಪಿದೆ.

ಸದ್ಯ ಕುಸಿಯುವ ಸ್ಥಿತಿಯಲ್ಲಿರುವ ಹಳೆಯ ಮನೆಯಲ್ಲಿ ಇಲ್ಲಿಯವರೆಗು ವಾಸವಾಗಿದ್ದ ಕುಟುಂಬ ಬೇರೆಡೆಗೆ ಸ್ಥಳಾಂತರವಾಗಿದ್ದು ಅಪಾಯದಿಂದ ಪಾರಾಗಿದ್ದಾರೆ,ಆದರೆ ಮನೆಯ ಹಿಂಬಾಗದ ಮಚ್ಚೀಗಲ್ಲಿಗೆ ಹೋಗುವ ರಸ್ತೆಯಲ್ಲಿ ಸಾರ್ವಜನಿಕರು ಸಂಚರಿಸಲು ಭಯಪಡುತ್ತಿದ್ದಾರೆ,ಕಾರಣ ಮನೆಯ ಗೋಡೆಯ ಇಟ್ಟಿಗೆಗಳು ನಿಧಾನವಾಗಿ ಕಳಚಿ ಬೀಳುತ್ತಿದೆ. ಈಗಾಗಲೆ ಬಹಳಷ್ಟು ಕುಸಿತವಾಗಿದೆ, ಇದೇ ರಸ್ತೆಯಲ್ಲಿ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ಸಂಚರಿಸುವ ವೇಳೆಯಲ್ಲಿ ಗೊಡೆ ಏಕಾಏಕಿ ಕುಸಿದರೆ ಪ್ರಾಣಾಪಾಯ ಸಂಭವಿಸಲಿದೆ.

ಮನೆಯ ಮಾಲಿಕರು ಅಪಾಯದಲ್ಲಿರುವ ಮನೆಯನ್ನು ತೆರವುಗೊಳಿಸಿ ಅಪಾಯ ತಪ್ಪಿಸಬೇಕು ಇಲ್ಲವಾದಲ್ಲಿ ಸ್ಥಳೀಯ ಆಡಳಿತ ಪಟ್ಟಣ ಪಂಚಾಯತ್ ಗಮನಹರಿಸಿ ಕುಸಿಯುತ್ತಿರುವ ಮನೆಯನ್ನು ತೆರವುಗೊಳಿಸುವುದು ಅಥವಾ ಎಚ್ಚರಿಕೆ ಫಲಕ ಅಳವಡಿಸುವುದು ಮನೆಯ ಸಾಮಾಗ್ರಿಗಳು ರಸ್ತೆ ಮೇಲೆ ಬೀಳದಂತೆ ಏನಾದರು ಉಪಾಯ ಮಾಡಬೇಕಿದೆ, ಇಲ್ಲವಾದಲ್ಲಿ ಖಂಡಿತ ಇಲ್ಲೊಂದು ಅಪಾಯ ಕಾದಿದೆ.

ಸ್ಥಳೀಯ ಜನರು ಹೇಳುವಂತೆ ರಾತ್ರಿ ವೇಳೆಯಲ್ಲಿ ಈ ರಸ್ತೆಯಲ್ಲಿ ನಡೆದಾಡಲು ಭಯವಾಗುತ್ತಿದೆ ಕಾರಣ ಯಾವ ಕ್ಷಣದಲ್ಲಿ ಮನೆ ಬೀಳಲಿದೆ ತಿಳಿಯದು ಮನೆಯವರು ಅಥವ ಸಂಬಂಧಿಸಿದ ಇಲಾಖೆ ಸಮಸ್ಯೆ ಬಗೆಹರಿಸಬೇಕಿದೆ ಎನ್ನುತ್ತಾರೆ.

ಒಂದು ವೇಳೆ ಈ ಪ್ರಕರಣದಲ್ಲಿ ಮನೆಯ ವ್ಯಾಜ್ಯ ನ್ಯಾಯಾಲಯದಲ್ಲಿ ವಿಚಾರಣೆಯಲಿದ್ದರೆ ಅಥವ ಕುಟುಂಬದ ಒಳಗಿನ ಸಮಸ್ಯೆಯಾಗಿ ಜವಾಬ್ದಾರಿ ತಟಸ್ಥವಾಗಿದ್ದರೆ ಆಗುವ ಅನಾಹುತಕ್ಕೆ ಹೊಣೆ ಯಾರು.?? ಇದರಲ್ಲಿ ಯಾರಿಗು ಅನಾಹುತವಾಗಬಾರದು ಯಾವುದೆ ಅಹಿತಕರ ದುರ್ಘಟನೆ ನಡೆಯಬಾರದು. ನಿರ್ಲಕ್ಷದಿಂದ ಯಾವುದೆ ಜೀವಹಾನಿ ಸಂಭವಿಸಬಾರದು ಇದು “ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ” ಕಳಕಳಿ















Prathidvani Yellapura