

ಪ್ರತಿಧ್ವನಿ ಯಲ್ಲಾಪುರ : ಅತಿಕ್ರಮಣ ಅರಣ್ಯ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದರೆ ಅರಣ್ಯ ಇಲಾಖೆಯವರು ತೆರವುಗೊಳಿಸುವುದು ಎಲ್ಲರಿಗು ತಿಳಿದ ವಿಚಾರ ಆದರೆ ಇಲ್ಲೊಬ್ಬ ಕೃಷಿಕರ ಮಾಲ್ಕಿ ಜಾಗದಲ್ಲಿ ನೆಟ್ಟಿರುವ ಅಡಿಕೆ ಗಿಡಗಳನ್ನು ಕತ್ತರಿಸಿರುವುದು ಅಕ್ಷಮ್ಯ ಮತ್ತು ಕೆಟ್ಟ ಸಂಪ್ರದಾಯಕ್ಕೆ ದಾರಿ ಮಾಡಿದಂತಾಗಿದೆ.

ಯಲ್ಲಾಪುರ ತಾಲೂಕಿನ ನಂದೊಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಹುಲುಗಾನ ಗ್ರಾಮದ ಸರ್ವೇ ನಂಬರ್ 38/2 ರಲ್ಲಿ ಸುಬ್ರಾಯ ವೆಂಕಟರಮಣ ಭಟ್ ಎಂಬುವರ ತೋಟದ ಮದ್ಯ ಭಾಗದಲ್ಲಿ ಮಕ್ಕಳಂತೆ ಬೆಳೆಸಿದ ಅಡಿಕೆ ಗಿಡಗಳ ಮೇಲೆ ಅದ್ಯಾವ ದುಷ್ಕರ್ಮಿಗಳ ಕೋಪವೊ ಏನೊ ಗಿಡಗಳನ್ನು ಕಡಿದು ಅಟ್ಟಹಾಸ ಮೆರೆದಿದ್ದಾರೆ. ಇದು ಕೆಟ್ಟ ಸಂಪ್ರದಾಯಕ್ಕೆ ದಾರಿ ಮಾಡಿಕೊಡುವಂತಿದ್ದು ಒಳ್ಳೆಯ ಬೆಳವಣಿಗೆಯಂತು ಅಲ್ಲವೆ ಅಲ್ಲ.

ತೋಟದ ತುದಿಯಲ್ಲಿ ಕಡಿತ ಮಾಡಿದ್ದರೆ ಒತ್ತುವರಿ ಸಮಸ್ಯೆ ಅಥವ ಬೇಲಿ ಬೆಳೆಸುತ್ತಿದ್ದಾರೆಂಬ ದ್ವೇಷಕ್ಕೆ ಇಂತಹ ಕೃತ್ಯ ಮಾಡಿದ್ದಾರೆ ಎನ್ನಬಹುದು ಆದರೆ ತೋಟದ ಮಧ್ಯಭಾಗದಲ್ಲಿ ಇಂತಹ ಕೃತ್ಯ ಒಪ್ಪಿತವಲ್ಲ ಎಂಬುದು ರೈತರ ಮಾತಾಗಿದೆ.
ಜಡ ಚೇತನಗಳಲ್ಲಿಯು ಭಗವಂತನ ಅಂಶ ಕಾಣುವ ಹಿಂದು ಸಮಾಜ ಅದರಲ್ಲು ಕೃಷಿಕ ಸಮಾಜ ಗಿಡ,ಮರ,ಪಕ್ಷಿ,ಪ್ರಾಣಿ,ಬೆಟ್ಟ, ಗುಡ್ಡ, ನದಿ,ತೊರೆಗಳ ಸರ್ವ ಪರಿಸರದಲ್ಲಿನ ಹುಲ್ಲು ಕಡ್ಡಿಯಲ್ಲು ಭಗವಂತ ನೆಲೆಸಿದ್ದಾನೆ ಎಂದು ನಂಬಿ ನಡೆಯುತ್ತಿರುವವರು ಅಂತಹದರಲ್ಲಿ ಯಾವುದೊ ದ್ವೇಷಕ್ಕೆ ಗಿಡಗಳನ್ನು ಕಡಿದರೆ ಒಳ್ಳೆಯದಲ್ಲ.



ಈ ಕೃತ್ಯ ನಡೆಸಿದ್ದು ಯಾರೆಂದು ತಿಳಿದರೆ ಈಗ ಅಡಿಕೆ ಗಿಡಗಳನ್ನು ಕಳೆದುಕೊಂಡ ಕೃಷಿಕ ತಾನು ಕತ್ತಿ ಹಿಡಿದು ಕೃತ್ಯ ಎಸಗಿದವರ ತೋಟದ ಗಿಡಗಳನ್ನು ಕಡಿಯಲು ಮುಂದಾದರೆ ಕೆಟ್ಟ ಸಂಪ್ರದಾಯಕ್ಕೆ ದಾರಿ ಮಾಡಿದಂತಾಗಲಿದೆ. ಭಗವಂತ ಎಲ್ಲವನ್ನು ಮೇಲಿಂದಲೆ ನೋಡುತ್ತಿರುತ್ತಾನೆ ಮಕ್ಕಳಂತೆ ಆರೈಕೆ ಮಾಡಿ ಬೆಳೆಸಿದ ಅಡಿಕೆ ಗಿಡಗಳನ್ನು ಕಳೆದುಕೊಂಡ ರೈತ ಸುಬ್ರಾಯ ಭಟ್ ನೊಂದುಕೊಂಡರೆ ಕೃತ್ಯ ಎಸಗಿದವರಿಗೆ ಒಳ್ಳೆಯದಾಗುವುದಿಲ್ಲ ಯಾವುದೆ ವೈಮನಸ್ಸು ಇದ್ದರೆ ವ್ಯಕ್ತಿ ವ್ಯಕ್ತಿಗಳ ನಡುವೆ ಬಗೆಹರಿಸಿಕೊಳ್ಳಿ ನಿಮ್ಮ ಅಸ್ತಿತ್ವಕ್ಕೆ ಬೆಲೆ ತಂದುಕೊಟ್ಟ ಕೃಷಿ ಚಟುವಟಿಕೆ ಮೇಲೆ ದ್ವೇಷ ಸಾಧಿಸಬೇಡಿ ಇದು ಪ್ರತಿಧ್ವನಿ ಕಳಕಳಿ















Prathidvani Yellapura