Breaking News

ಮಂಗಳೂರು ಸಂಚಾರಿ ಪೀಠದ ವ್ಯಾಪ್ತಿಗೆ ಉತ್ತರ ಕನ್ನಡ ಜಿಲ್ಲೆಸೇರ್ಪಡೆ ವಿರೋಧಿಸಿ ಯಲ್ಲಾಪುರದಲ್ಲಿ ವಕೀಲರಿಂದ ಪತ್ರ ಚಳುವಳಿ..

ಪ್ರತಿಧ್ವನಿ ಯಲ್ಲಾಪುರ : ಹೈಕೋರ್ಟ್ ಸಂಚಾರಿ ಪೀಠವನ್ನು ಮಂಗಳೂರಿನಲ್ಲಿ ಆರಂಭಿಸಲು ಸರಕಾರ ಮುಂದಾಗಿದ್ದು ಉತ್ತರ ಕನ್ನಡ ಜಿಲ್ಲೆಯನ್ನು ಅದರ ವ್ಯಾಪ್ತಿಗೆ ಸೇರಿಸಲು ಹೊರಟಿರುವುದಕ್ಕೆ ನಮ್ಮ ವಿರೋದವಿದೆ ಈ ಸಂಬಂಧ ಮುಖ್ಯ ನ್ಯಾಯ ಮೂರ್ತಿಗಳಿಗು, ರಾಜ್ಯಪಾಲರಿಗೆ ಹಾಗು ಮುಖ್ಯಮಂತ್ರಿಗಳಿಗೆ ಪತ್ರ ವಕೀಲರಿಂದ ಪತ್ರ ಚಳುವಳಿ ಪ್ರಾರಂಭಿಸಲಾಗಿದೆ ಎಂದು ವಕೀಲರ ಸಂಘದ ಅಧ್ಯಕ್ಷ ವಿ.ಟಿ.ಭಟ್ ಹೇಳಿದರು.

ಅವರು ಪಟ್ಟಣದ ನ್ಯಾಯಾಯಲದ ಆವರಣದಲ್ಲಿ ಹಮ್ಮಿಕೊಂಡ ಮಂಗಳೂರು ಸಂಚಾರಿ ಪೀಠದ ವ್ಯಾಪ್ತಿಗೆ ಉತ್ತರಕನ್ನಡ ಜಿಲ್ಲೆ ಸೇರ್ಪಡೆ ವಿರೋಧಿಸಿ ನಡೆಸಿದ ಪತ್ರ ಚಳುವಳಿಯಲ್ಲಿ ಮಾತನಾಡಿದರು.


ಉತ್ತರ ಕನ್ನಡ ಜಿಲ್ಲೆ, ವಿಶೇಷವಾಗಿ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳು ಈ ಸೇರ್ಪಡೆಯನ್ನು ತೀವ್ರವಾಗಿ ವಿರೋಧಿಸುತ್ತವೆ.‌ ಕಳೆದ ಹತ್ತಾರು ವರ್ಷಗಳಿಂದ ನಾವು ಧಾರವಾಡ ಸಂಚಾರಿ ಪೀಠದ ಜೊತೆಗೆ ಗುರುತಿಸಿಕೊಂಡಿದ್ದೇವೆ. ಇದಕ್ಕೆ ಮುಖ್ಯ ಕಾರಣ, ನಾವು ಧಾರವಾಡ ಜಿಲ್ಲೆಗೆ ಬಹಳ ಹತ್ತಿರದಲ್ಲಿದ್ದೇವೆ, ಹಾಗೂ ವ್ಯಾವಹಾರಿಕವಾಗಿಯೂ ಹುಬ್ಬಳ್ಳಿ-ಧಾರವಾಡದ ಜೊತೆ ಒಳ್ಳೆಯ ನಂಟನ್ನು ಹೊಂದಿದ್ದೇವೆ. ನಮ್ಮ ಜಿಲ್ಲೆಯ ಕರಾವಳಿ ತುದಿಯಲ್ಲಿರುವ ಭಟ್ಕಳ ತಾಲೂಕು ಒಂದನ್ನು ಹೊರತುಪಡಿಸಿ, ಉಳಿದ ಎಲ್ಲ ಹನ್ನೊಂದು ತಾಲೂಕುಗಳಿಗೆ ಧಾರವಾಡ ಹತ್ತಿರದ ಸ್ಥಳವಾಗಿದೆ.

ನಮ್ಮ ಜಿಲ್ಲೆಯ ಹಳಿಯಾಳ ತಾಲೂಕಿನಿಂದ ಧಾರವಾಡ ಕೇವಲ 35-40 ಕಿ.ಮಿ.ದೂರದಲ್ಲಿದ್ದರೆ ಮಂಗಳೂರು 340 ಕಿ.ಮಿ.ದೂರದಲ್ಲಿದೆ. ಬರೋಬ್ಬರಿ 300 ಕಿ.ಮಿ. ಅಂತರ!. ಅದೇ ರೀತಿ ದಾಂಡೇಲಿಯಿಂದ ಧಾರವಾಡಕ್ಕೆ 56 ಕಿ.ಮಿ.ಇದ್ದರೆ, ಮಂಗಳೂರಿಗೆ 365 ಕಿ.ಮಿ., ಜೋಯಡಾದಿಂದ ಧಾರವಾಡಕ್ಕೆ 85 ಕಿ.ಮಿ.ಇದ್ದರೆ ಮಂಗಳೂರಿಗೆ 390 ಕಿ.ಮಿ., ಮುಂಡಗೋಡದಿಂದ ಧಾರವಾಡ 56 ಕಿ.ಮಿ. ದೂರ ಇದ್ದರೆ ಮಂಗಳೂರಿಗೆ 315 ಕಿ.ಮಿ. ಅದೇ ರೀತಿ ಯಲ್ಲಾಪುರದಿಂದ ಧಾರವಾಡ 76 ಕಿ.ಮಿ.ದೂರದಲ್ಲಿದ್ದರೆ ಮಂಗಳೂರು 290 ಕಿ.ಮಿ. ದೂರದಲ್ಲಿದೆ. ಪಕ್ಕದ ಶಿರಸಿ, ಸಿದ್ದಾಪುರ ತಾಲೂಕುಗಳ ಕಕ್ಷಿದಾರರೂ ಸಹ ತಮ್ಮ ವ್ಯಾಜ್ಯಗಳಿಗಾಗಿ ಧಾರವಾಡವನ್ನು ಬಿಟ್ಟು ಮಂಗಳೂರಿಗೆ ಹೋಗಬೇಕಾದರೆ ಕನಿಷ್ಠ150 ರಿಂದ 160 ಕಿ.ಮಿ. ಹೆಚ್ಚು ದೂರ ಕ್ರಮಿಸಬೇಕಾಗುತ್ತದೆ. ಶ್ರಮ, ವೇಳೆ, ಆರ್ಥಿಕ ವೆಚ್ಚ ಎಲ್ಲವೂ ಹೆಚ್ಚಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಉತ್ತರ ಕನ್ನಡ ಜಿಲ್ಲೆಯನ್ನು ಮಂಗಳೂರು ಸಂಚಾರಿ ಪೀಠದ ವ್ಯಾಪ್ತಿಗೆ ತರುವುದಕ್ಕೆ ಜಿಲ್ಲೆಯ ಎಲ್ಲಾ ವಕೀಲರ ವಿರೋದವಿದೆ ಎಂದರು.
ಈ ಸಂದರ್ಭದಲ್ಲಿ ಸರ್ಕಾರಿ ಅಪರ ವಕೀಲರಾದ ಎನ್.ಟಿ.ಗಾಂವ್ಕರ್ ‌ಸೇರಿದಂತೆ ಹಲವು ವಕೀಲರು ಉಪಸ್ಥಿತರಿದ್ದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಬಸ್ ಅಪಘಾತದಲ್ಲಿ ಗಾಯಗೊಂಡವರಿಗೆ ಸಾಂತ್ವನ ಹೇಳಿದ ಶಾಸಕ ಹೆಬ್ಬಾರ್ ಮತ್ತು ಪುತ್ರ ವಿವೇಕ್ ಹೆಬ್ಬಾರ್.

ಪ್ರತಿಧ್ವನಿ ಯಲ್ಲಾಪುರ : ಮುಂಡಗೋಡ ತಾಲ್ಲೂಕಿನ ಶಿಡ್ಲಗುಂಡಿ ಗ್ರಾಮದಲ್ಲಿ ಬುಧವಾರ ಎರಡು ಸಾರಿಗೆ ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ, ಬಸ್ ಚಾಲಕ …

Leave a Reply

Your email address will not be published. Required fields are marked *