
ಪ್ರತಿಧ್ವನಿ ಯಲ್ಲಾಪುರ : ರಾಜ್ಯದಲ್ಲಿ ಅಹಿಂದ ಪರವಾದ ಧ್ವನಿ ಎತ್ತುವ ಸಲುವಾಗಿ ಈಗಾಗಲೆ” ಅಖಿಲ ಕರ್ನಾಟಕ ಅಹಿಂದ ವೇದಿಕೆ ” ಸ್ಥಾಪಿಸಿದ್ದು ಪ್ರಾರಂಭಿಕ ಹಂತದಲ್ಲಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಘಟಕಗಳನ್ನು ಅನುಷ್ಟಾನಗೊಳಿಸಲು ಮುಂದಾಗಿದ್ದು ಇದೀಗ ಯಲ್ಲಾಪುರ ನಗರ ಘಟಕಕ್ಕೆ ಆಸಕ್ತ ಸದಸ್ಯರು ಸೇರಬಹುದಾಗಿದೆ ಎಂದು “ಅಖಿಲ ಕರ್ನಾಟಕ ಅಹಿಂದ ವೇದಿಕೆ ಸ್ಥಾಪಕಾಧ್ಯಕ್ಷ ದ್ಯಾಮಣ್ಣ ಬೋವಿ ವಡ್ಡರ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ಮೂಲಕ ಮನವಿ ಮಾಡಿದ್ದಾರೆ.

” ಅಖಿಲ ಕರ್ನಾಟಕ ಅಹಿಂದ ವೇದಿಕೆ ” ದ್ಯೇಯ ಉದ್ದೇಶ ಬಹಳ ಸ್ಪಷ್ಟವಾಗಿದೆ. ಶೋಷಿತರ ಪರವಾಗಿ ನ್ಯಾಯಕ್ಕಾಗಿ ಹೋರಾಟ,ಹಕ್ಕುಗಳ ರಕ್ಷಣೆಗಾಗಿ,ಸರ್ಕಾರ ಮಟ್ಟದಲ್ಲಿ ಸಮುದಾಯಕ್ಕೆ ದೊರಕಬೇಕಾದ ಸೌಲಭ್ಯಗಳ ಬಗ್ಗೆ ವ್ಯತ್ಯಾಸಗಳಾದಲ್ಲಿ ಎಚ್ಚರಿಸುವ ಧ್ವನಿಯಾಗುವುದು ಸಂಘಟನೆಯ ಮೂಲ ಉದ್ದೇಶವಾಗಿದೆ. ಧರ್ಮ,ಅಂತಸ್ತು, ರಾಜಕಾರಣ ಹೊರತುಪಡಿಸಿ ಸಂಘಟನೆಗೆ ಸಂಬಂಧಿಸಿದ ವಿಚಾರಧಾರೆಯಾಗಿದೆ.

ಏನನ್ನಾದರು ಸ್ವಾರ್ಥಪರವಾಗಿ ಪಡೆದುಕೊಳ್ಳುವುದಕ್ಕಿಂತ ಸಮಾಜಕ್ಕೆ ಏನನ್ನಾದರು ಒಳಿತನ್ನು ನೀಡುವುದು,ಯಾವುದೆ ಫಲಾಪೇಕ್ಷೆ ಇಲ್ಲದೆ ಸಂಘಟನೆಯಲ್ಲಿ ಸಕ್ರಿಯರಾಗುವ ಮನಸ್ಥಿತಿ ಇರುವವರು ಸಂಘಟನೆಯ ಭಾಗವಾಗಬಹುದಾಗಿದೆ. ಮೊದಲಿಗೆ ಯಲ್ಲಾಪುರ ತಾಲೂಕಿನಾಧ್ಯಂತ ಪ್ರತಿ ಪಂಚಾಯತ ಮಟ್ಟದಲ್ಲಿ ಅಹಿಂದ ವೇದಿಕೆ ಅನುಷ್ಟಾನಗೊಳಿಸುತ್ತಿದ್ದು ಅದರ ಭಾಗವಾಗಿ ಯಲ್ಲಾಪುರ ಪಟ್ಟಣದಲ್ಲಿ ಕ್ರಿಯಾಶೀಲ ಘಟಕ ಸ್ಥಾಪನೆಗೆ ಮುಂದಾಗಿದ್ದೇವೆ ಅಹಿಂದ ತತ್ವ ಒಪ್ಪಿರುವ ಮತ್ತು ಸಮಾಜದೊಂದಿಗೆ ಬೆರೆತು ಘಟನೆಯಲ್ಲಿ ಶ್ರಮಿಸುವವರು ಸೇರಿಕೊಳ್ಳಲು ಮುಕ್ತ ಅವಕಾಶ ನೀಡಲಾಗಿದೆ ಎಂದು ಅಖಿಲ ಕರ್ನಾಟಕ ಅಹಿಂದ ವೇದಿಕೆ ಸ್ಥಾಪಕಾಧ್ಯಕ್ಷ ದ್ಯಾಮಣ್ಣ ಬೋವಿ ವಡ್ಡರ್ ಪ್ರತಿಧ್ವನಿಗೆ ಪ್ರತಿಕ್ರಿಯಿಸಿದ್ದಾರೆ.














Prathidvani Yellapura