
ಪ್ರತಿಧ್ವನಿ ಯಲ್ಲಾಪುರ : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತಂದರು ಪಕ್ಷದ ಅಧ್ಯಕ್ಷ ನಾನೆ ನಾನೆ ಮುಂದಿನ ಮುಖ್ಯ ಮಂತ್ರಿ ಎನ್ನದೆ ಕಾಂಗ್ರೆಸ್ ಪಕ್ಷದ ನಿಷ್ಠಾವಂತರಾಗಿ ಹೈ ಕಮಾಂಡ್ ಸೂಚನೆ ಪಾಲಿಸಿ ತಮಗೆ ಬರಬೇಕಾದ ಮುಖ್ಯ ಮಂತ್ರಿ ಸ್ಥಾನವನ್ನೆ ತ್ಯಾಗ ಮಾಡಿ ಸಿದ್ದರಾಮಯ್ಯ ಅವರಿಗೆ ಮುಖ್ಯ ಮಂತ್ರಿ ಸ್ಥಾನ ಕಲ್ಪಿಸಿದ ಅಜಾತ ಶತೃ ರಾಜ್ಯ ಕಂಡ ಅಪರೂಪದ ಹೆಮ್ಮೆಯ ರಾಜಕಾರಣಿ ಆರ್.ವಿ.ದೇಶಪಾಂಡೆ ಅವರು ಅವರಿಗೆ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಕ್ಯಾಬಿನೆಟ್ ನಲ್ಲಿ ಮಂತ್ರಿ ಸ್ಥಾನ ನೀಡಬೇಕಿರುವುದು ಬದ್ದತೆಯ ಕಾರ್ಯವಾಗಿದೆ. ಇಲ್ಲವಾದಲ್ಲಿ ಪಕ್ಷನಿಷ್ಟೆ ಎಂಬ ಪದಕ್ಕೆ ಅರ್ಥವಿಲ್ಲವಾಗಲಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಾಬು ಸಿದ್ದಿ ಪ್ರತಿಧ್ವನಿ ಯೊಂದಿಗೆ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಉತ್ತರ ಕನ್ನಡ ನಾಲ್ಕು ಶಾಸಕರನ್ನು ಕಾಂಗ್ರೆಸ್ ಪಕ್ಷದಿಂದ ಗೆಲ್ಲಿಸಿದ ಜಿಲ್ಲೆಯಾಗಿದ್ದು ಜಿಲ್ಲೆಗೆ ಒಬ್ಬ ಮಂತ್ರಿಯನ್ನು ನೀಡದಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ. ದೇಶಪಾಂಡೆ ಅವರು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಬಡಜನರ ಶ್ರೇಯೋಭಿವೃದ್ದಿಗಾಗಿ ದುಡಿದು ಜನರ ಮನಸ್ಸಿನಲ್ಲಿ ಇಂದಿಗು ಶ್ರೇಷ್ಠ ಸ್ಥಾನ ಹೊಂದಿದ್ದಾರೆ.ಅವರ ಹೊರತಾಗಿ ಜಿಲ್ಲೆಯ ಕಾಂಗ್ರೆಸ್ ಸಂಘಟನೆ ಊಹೆಗು ಸಾದ್ಯವಿಲ್ಲ. ಅವರ ತಾಳ್ಮೆ ಅವರ ದೊಡ್ಡತನ ಮತ್ತು ಪಕ್ಷದ ಶಿಸ್ತಿನ ಸಿಪಾಯಿಯ ಸಂಕೇತವೆ ಹೊರತು ದೌರ್ಬಲ್ಯವಲ್ಲ. ಇ‌್ನಾದರು ಹೈ ಕಮಾಂಡ್ ರಾಜ್ಯದ ವರಿಷ್ಟರು ನಿರ್ಧರಿಸಿ ಮಂತ್ರಿ ಸ್ಥಾನ ನೀಡಬೇಕಿದೆ. ಇಲ್ಲವಾದಲ್ಲಿ ದೇಶಪಾಂಡೆ ಅಭಿಮಾನಿಗಳು ಬೀದಿಗಿಳಿದು ಹೋರಾಡುವುದು ಅನಿವಾರ್ಯವಾಗಲಿದೆ.

ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ನವರಿಂದ ಮುಖ್ಯಮಂತ್ರಿ ಸ್ಥಾನ ಪಡೆಯುವ ಮೊದಲು ನಾನು ಪಕ್ಷಕ್ಕಾಗಿ ದುಡಿದಿದ್ದೇನೆ ಕೂಲಿ ಕೇಳುತ್ತಿದ್ದೇನೆ ಎನ್ನುತ್ತಿದ್ದರು ಅದೇರೀತಿ ದೇಶಪಾಂಡೆ ಅವರು ಸಹ ತಮ್ಮ ಸುದೀರ್ಘ ರಾಜಕೀಯ ಜೀವನವನ್ನು ಪಕ್ಷಕ್ಕಾಗಿ ದುಡಿದು ದುಡಿದು ದಣಿದಿದ್ದಾರೆ ಅವರಿಗೆ ಅವರ ಕೂಲಿಯ ಅವಶ್ಯಕತೆ ಇದೆ ಹಿರಿಯರಾದ ದೇಶಪಾಂಡೆ ಅವರು ಕೇಳುವುದಿಲ್ಲ ಕಿರಿಯರಾದ ನೀವೆ ಅರ್ಥ ಮಾಡಿಕೊಂಡು ಮಂತ್ರಿ ಸ್ಥಾನ ನೀಡಬೇಕಿದೆ ಎಂದು ಪ್ರತಿಧ್ವನಿ ಯಲ್ಲಾಪುರ ನ್ಯೂಸ್ ಜೊತೆಯಲ್ಲಿ ಬಾಬು ಸಿದ್ದಿ ಮನದ ಮಾತನ್ನು ಹಂಚಿಕೊಂಡಿದ್ದಾರೆ














Prathidvani Yellapura