Breaking News

ರಾಜ್ಯ ಕಾಂಗ್ರೆಸ್ ಪಶ್ನಾತೀತ ನಾಯಕ ಆರ್.ವಿ.ದೇಶಪಾಂಡೆ ಮಂತ್ರಿ ಸ್ಥಾನ ನೀಡುವುದು ಕಾಂಗ್ರೆಸ್ ನ ಬದ್ದತೆ – ಬಾಬು ಸಿದ್ದಿ.


ಪ್ರತಿಧ್ವನಿ ಯಲ್ಲಾಪುರ : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತಂದರು ಪಕ್ಷದ ಅಧ್ಯಕ್ಷ ನಾನೆ ನಾನೆ ಮುಂದಿನ ಮುಖ್ಯ ಮಂತ್ರಿ ಎನ್ನದೆ ಕಾಂಗ್ರೆಸ್ ಪಕ್ಷದ ನಿಷ್ಠಾವಂತರಾಗಿ ಹೈ ಕಮಾಂಡ್ ಸೂಚನೆ ಪಾಲಿಸಿ ತಮಗೆ ಬರಬೇಕಾದ ಮುಖ್ಯ ಮಂತ್ರಿ ಸ್ಥಾನವನ್ನೆ ತ್ಯಾಗ ಮಾಡಿ ಸಿದ್ದರಾಮಯ್ಯ ಅವರಿಗೆ ಮುಖ್ಯ ಮಂತ್ರಿ ಸ್ಥಾನ ಕಲ್ಪಿಸಿದ ಅಜಾತ ಶತೃ ರಾಜ್ಯ ಕಂಡ ಅಪರೂಪದ ಹೆಮ್ಮೆಯ ರಾಜಕಾರಣಿ ಆರ್.ವಿ‌.ದೇಶಪಾಂಡೆ ಅವರು ಅವರಿಗೆ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಕ್ಯಾಬಿನೆಟ್ ನಲ್ಲಿ ಮಂತ್ರಿ ಸ್ಥಾನ ನೀಡಬೇಕಿರುವುದು ಬದ್ದತೆಯ ಕಾರ್ಯವಾಗಿದೆ. ಇಲ್ಲವಾದಲ್ಲಿ ಪಕ್ಷನಿಷ್ಟೆ ಎಂಬ ಪದಕ್ಕೆ ಅರ್ಥವಿಲ್ಲವಾಗಲಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಾಬು ಸಿದ್ದಿ ಪ್ರತಿಧ್ವನಿ ಯೊಂದಿಗೆ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.


ಉತ್ತರ ಕನ್ನಡ  ನಾಲ್ಕು ಶಾಸಕರನ್ನು ಕಾಂಗ್ರೆಸ್ ಪಕ್ಷದಿಂದ ಗೆಲ್ಲಿಸಿದ ಜಿಲ್ಲೆಯಾಗಿದ್ದು  ಜಿಲ್ಲೆಗೆ ಒಬ್ಬ ಮಂತ್ರಿಯನ್ನು ನೀಡದಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ. ದೇಶಪಾಂಡೆ ಅವರು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಬಡಜನರ ಶ್ರೇಯೋಭಿವೃದ್ದಿಗಾಗಿ ದುಡಿದು ಜನರ ಮನಸ್ಸಿನಲ್ಲಿ ಇಂದಿಗು ಶ್ರೇಷ್ಠ ಸ್ಥಾನ ಹೊಂದಿದ್ದಾರೆ.ಅವರ ಹೊರತಾಗಿ ಜಿಲ್ಲೆಯ ಕಾಂಗ್ರೆಸ್ ಸಂಘಟನೆ ಊಹೆಗು ಸಾದ್ಯವಿಲ್ಲ. ಅವರ ತಾಳ್ಮೆ ಅವರ ದೊಡ್ಡತನ ಮತ್ತು ಪಕ್ಷದ ಶಿಸ್ತಿನ ಸಿಪಾಯಿಯ ಸಂಕೇತವೆ ಹೊರತು ದೌರ್ಬಲ್ಯವಲ್ಲ. ಇ‌್ನಾದರು ಹೈ ಕಮಾಂಡ್ ರಾಜ್ಯದ ವರಿಷ್ಟರು ನಿರ್ಧರಿಸಿ ಮಂತ್ರಿ ಸ್ಥಾನ ನೀಡಬೇಕಿದೆ. ಇಲ್ಲವಾದಲ್ಲಿ ದೇಶಪಾಂಡೆ ಅಭಿಮಾನಿಗಳು ಬೀದಿಗಿಳಿದು ಹೋರಾಡುವುದು ಅನಿವಾರ್ಯವಾಗಲಿದೆ.


ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ನವರಿಂದ ಮುಖ್ಯಮಂತ್ರಿ ಸ್ಥಾನ ಪಡೆಯುವ ಮೊದಲು ನಾನು ಪಕ್ಷಕ್ಕಾಗಿ ದುಡಿದಿದ್ದೇನೆ ಕೂಲಿ ಕೇಳುತ್ತಿದ್ದೇನೆ ಎನ್ನುತ್ತಿದ್ದರು ಅದೇರೀತಿ ದೇಶಪಾಂಡೆ ಅವರು ಸಹ ತಮ್ಮ ಸುದೀರ್ಘ ರಾಜಕೀಯ ಜೀವನವನ್ನು ಪಕ್ಷಕ್ಕಾಗಿ ದುಡಿದು ದುಡಿದು ದಣಿದಿದ್ದಾರೆ ಅವರಿಗೆ ಅವರ ಕೂಲಿಯ ಅವಶ್ಯಕತೆ ಇದೆ ಹಿರಿಯರಾದ ದೇಶಪಾಂಡೆ ಅವರು ಕೇಳುವುದಿಲ್ಲ ಕಿರಿಯರಾದ ನೀವೆ ಅರ್ಥ ಮಾಡಿಕೊಂಡು ಮಂತ್ರಿ ಸ್ಥಾನ ನೀಡಬೇಕಿದೆ ಎಂದು ಪ್ರತಿಧ್ವನಿ ಯಲ್ಲಾಪುರ ನ್ಯೂಸ್ ಜೊತೆಯಲ್ಲಿ ಬಾಬು ಸಿದ್ದಿ ಮನದ ಮಾತನ್ನು ಹಂಚಿಕೊಂಡಿದ್ದಾರೆ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಪಟ್ಟಣ ಪಂಚಾಯತದಲ್ಲಿ ಸಿಬ್ಬಂದಿಗಳ ಕೊರತೆ – ಪೌರ ಕಾರ್ಮಿಕರ ಮಕ್ಕಳಿಗೆ ಉದ್ಯೋಗಾವಕಾಶ ಕಲ್ಪಿಸಲು  ಅಹಿಂದ ವೇದಿಕೆ ಆಗ್ರಹ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣ ಪಂಚಾಯತದಲ್ಲಿ ಸಿಬ್ಬಂದಿಗಳ ಕೊರತೆಯಿಂದ ಸಾರ್ವಜನಿಕ ಸೇವೆಗಳ ನಿರ್ವಹಣೆಗೆ ತೊಂದರೆಯಾಗುತ್ತಿರುವುದು ಈಗಾಗಲೆ ತಿಳಿದ ಸತ್ಯವಾಗಿದೆ. ಈ …

Leave a Reply

Your email address will not be published. Required fields are marked *