Breaking News

ಪಟ್ಟಣ ಪಂಚಾಯತ್ ಸದಸ್ಯನ ಬದ್ದತೆ 112 ಪೊಲೀಸ್ ವಾಹನ ಚಾಲಕನ ಮಾನವಿಯತೆ – ಕಾರ್ಮಿಕನೋರ್ವನಿಗೆ ರಕ್ತದ ವ್ಯವಸ್ಥೆ.

ಪ್ರತಿಧ್ವನಿ ಯಲ್ಲಾಪುರ : ಜನಸೇವೆ ಮಾಡುವ ಮನಸ್ಸಿದ್ದರೆ ಅಧಿಕಾರ ಇದ್ದರು ಅಧಿಕಾರ ಇರದಿದ್ದರು ಮಾಡಬಹುದು ಅದಕ್ಕೆ ಜ್ವಲಂತ ನಿದರ್ಶನ ಎಂದರೆ ಮಂಜುನಾಥ ನಗರದ ಪಟ್ಟಣ ಪಂಚಾಯತ್ ಸದಸ್ಯ ಸತೀಶ್ ಶಿವಾನಂದ ನಾಯ್ಕ್ ಎನ್ನಬಹುದಾಗಿದೆ.

ಸತೀಶ್ ನಾಯ್ಕ್ ತಾನು ಪ್ರತಿನಿಧಿಸುವ ಪಟ್ಟಣದ ಮಂಜುನಾಥನಗರ ನಿವಾಸಿ ಮಾರ್ಕೊಸ್ ಎಂಬ ಕಾರ್ಮಿಕ ಕಟ್ಟಡ ಕೆಲಸ ಮಾಡುವಾಗ ಅಫಘಾತ ಸಂಭವಿಸಿದ್ದು ಕೈ ಮುರಿದುಕೊಂಡು ಸಂಕಷ್ಟದಲಿದ್ದನು, ವಿಷಯ ತಿಳಿದ ಸತೀಶ್ ನಾಯ್ಕ್ ತಕ್ಷಣ ಯಲ್ಲಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಸಿವಿಲ್ ಆಸ್ಪತ್ರೆ ( ಕ್ರಿಮ್ಸ) ನಲ್ಲಿ ದಾಖಲಿಸಲಾಗಿತ್ತು.

ಅಲ್ಲಿನ ವೈದ್ಯರು ಆಪರೇಷನ್ ಮಾಡಲು ಮುಂದಾಗಿದ್ದು ಅಗತ್ಯವಾಗಿದ್ದ O-ve ರಕ್ತದ ಹುಡಕಾಟದಲ್ಲಿ ನಿರಂತರ ಹುಡುಕಾಟ ನಡೆಸಿದರು ಸಿಗದಾಗಿತ್ತು, ಮತ್ತೆ ಯಲ್ಲಾಪುರದ ಸತೀಶ ನಾಯ್ಕ, ಸಾಯಿನಾಥ ಉಣಕಲ್, ಮಾರುತಿ ತಿನೇಕರ್ , ವಿಕ್ಟೋರಿಯಾ  ಎಂಬುವರು ಎಷ್ಟೇ ಪ್ರಯತ್ನಿಸಿದರು  O-ve ರಕ್ತದ ವ್ಯವಸ್ಥೆ ಯಾಗದೆ ಹತಾಶರಾಗಿದ್ದರು, ಈ ಸಂದರ್ಭದಲ್ಲಿ ಕಾರವಾರದ Blood Doners karwar watsup ಗ್ರುಪ್ ನ ಎಡ್ಮಿನ್ ವಿನಾಯಕ ನಾಯ್ಕ ಚೆಂಡಿಯಾ ಅವರಲ್ಲಿ ಕೇಳಿಕೊಂಡಾಗಾ ಅವರ ನಿರಂತರ ಪ್ರಯತ್ನದ ಫಲವಾಗಿ ಕಾರವಾರದ 112 ಪೋಲಿಸ್ ವಾಹನದ ಚಾಲಕ ಅನಂತ ನಾರಾಯಣ ನಾಯ್ಕ (ಬಾಡಾ, ಕುಮಟಾ)ಅವರನ್ನು ಸಂಪರ್ಕಿಸಿ ಅತಿ ವಿರಳವಾದ ರಕ್ತದ ವ್ಯವಸ್ಥೆ ಮಾಡಿಕೊಟ್ಟಿದ್ದು ಅಫಘಾತದಲ್ಲಿ ಗಾಯಗೊಂಡ ಮಾರ್ಕೋಸ್ ಅವರ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅತಿ ವಿರಳವಾದ O-ve ರಕ್ತ ನೀಡಿದ 112 ಪೊಲೀಸ್ ವಾಹನ ಚಾಲಕ ಅನಂತ ನಾರಾಯಣ ನಾಯ್ಕ ಅವರ ಮಾನವೀಯತೆಗೆ ಎಲ್ಲಡೆ ಪ್ರಶಂಸೆ ವ್ಯಕ್ತವಾಗಿದೆ, ಇಂತಹ ಸಂಕಷ್ಟದ ಸಂದರ್ಭದಲ್ಲಿ ರಕ್ತದ ವ್ಯವಸ್ತೆ ಮಾಡಿ ಕೊಟ್ಟ ವಿನಾಯಕ ನಾಯ್ಕ ಚಂಡಿಯಾ ಅವರಿಗೆ ರೋಗಿಯ ತಾಯಿ ಪ್ರಮಿಳಾ ಮತ್ತು ಕುಟುಂಬದವರು ಹಾಗು ವಿಶೇಷವಾಗಿ ಮಂಜುನಾಥ ನಗರ ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಸತೀಶ್ ಶಿವಾನಂದ ನಾಯ್ಕ್  ಧನ್ಯವಾದ ತಿಳಿಸಿದ್ದಾರೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಕ್ಷಲೋಕದ ನಗಿಸುವ ಶ್ರೇಷ್ಠ ಕಲಾವಿದ “ಶ್ರೀಧರ ಭಟ್ಟ ಕಾಸರಗೋಡು “ಅವರಿಗೆ  ಶ್ರದ್ಧಾಂಜಲಿ

ಪ್ರತಿಧ್ವನಿ ಯಲ್ಲಾಪುರ : ಯಕ್ಷಗಾನದ ಹಾಸ್ಯಕಲಾವಿದ ಶ್ರೀಧರ ಭಟ್ಟ ಕಾಸರಕೋಡ ಅವರಿಗೆ ಭಾನುವಾರ‌ ಪಟ್ಟಣದ ಮೌನ ಗೃಂಥಾಲಯದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. …

Leave a Reply

Your email address will not be published. Required fields are marked *