


ಪ್ರತಿಧ್ವನಿ ಯಲ್ಲಾಪುರ : ಕೊಡುಗೈ ದಾನಿ ಯುವ ನಾಯಕ ಸಮಾಜ ಸೇವಕ ಬಾಲಕೃಷ್ಣ ನಾಯಕ್ ಅವರು ತಮ್ಮ ಅಭಿಮಾನಿ ಬಳಗದ ಮುಖೇನ ಗ್ರಾಮೀಣ ಭಾಗದ 2500 ಕ್ಕು ಅಧಿಕ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್,ಬುಕ್ಸ್ ಇತರೆ ಪರಿಕರಗಳನ್ನು ನೀಡುವ ಶಿಕ್ಷಣ ಕ್ಷೇತ್ರದ ಸೇವೆಯ ಮಹಾ ಯಜ್ಞಕ್ಕೆ ಸೋಮವಾರ ವಿದ್ಯುಕ್ತ ಚಾಲನೆ ನೀಡಿದರು.




ಪ್ರಥಮವಾಗಿ ಮದನೂರು ಪಂಚಾಯತ್ ವ್ಯಾಪ್ತಿಯಲ್ಲಿನ ಶಾಲೆಯಿಂದ ಆರಂಭಿಸಲಾಗಿದ್ದು ಒಟ್ಟು ಶಾಲೆಗಳ 2500 ಕ್ಕು ಅಧಿಕ ವಿದ್ಯಾರ್ಥಿಗಳಿಗೆ ಇದು ನೆರವಾಗಲಿದೆ.


ಹಂಚಿಕೆಯ ಸಂಪೂರ್ಣ ಜವಾಬ್ದಾರಿಯನ್ನು ಬಾಲಕೃಷ್ಣ ನಾಯಕ್ ಅಭಿಮಾನಿ ಬಳಗ ವಹಿಸಿಕೊಂಡಿದ್ದು ಯಶಸ್ವಿಯಾಗಿಸಲು ಶ್ರಮಿಸಲಾಗುತ್ತಿದೆ.



ಪ್ರತಿ ಗ್ರಾಮಗಳ ಶಾಲೆಗಳಲ್ಲಿ ಅಲ್ಲಿಯ ಸಮಿತಿ,ಶಿಕ್ಷಕರು,ಪಾಲಕರು, ಮತ್ತು ಸಾರ್ವಜನಿಕರು ವಿಶೇಷವಾಗಿ ವಿದ್ಯಾರ್ಥಿಗಳು ಬಾಲಕೃಷ್ಣ ನಾಯಕ್ ಅವರನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡು ಗೌರವಿಸಿ ಸನ್ಮಾನಿಸಿದರು. ಗೌರವ ಸನ್ಮಾನ ಸ್ವೀಕರಿಸಿದ ಬಾಲಕೃಷ್ಣ ನಾಯಕ್ ಮಕ್ಕಳಿಗೆ ಶಿಕ್ಷಣದ ಮಹತ್ವ ಮತ್ತು ತನ್ನ ಈ ಸೇವಾ ಕಾರ್ಯದ ಕುರಿತು ಮಾಹಿತಿ ನೀಡಿ ಉಜ್ವಲ ಶೈಕ್ಷಣಿಕ ಭವಿಷ್ಯಕ್ಕಾಗಿ ಹಾರೈಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಬಾಲಕೃಷ್ಣ ನಾಯಕ್ ಅಭಿಮಾನಿ ಬಳಗದ ಪ್ರಮುಖರು,ಸ್ಥಳೀಯ ಮುಖಂಡರು,ಶಾಲಾಭಿವೃದ್ದಿ ಸಮಿತಿ ಪ್ರಮುಖರು, ಪೋಷಕರು,ಶಿಕ್ಷಕರು,ಸಾರ್ವಜನಿಕರು ಉಪಸ್ಥಿತರಿದ್ದರು.




Prathidvani Yellapura