Breaking News

Infuenza A ( H1 N1) ವೈರಲ್ ಜ್ವರಕ್ಕೆ ಯಲ್ಲಾಪುರ ತಾಲ್ಲೂಕಿನಲ್ಲಿ ಮೊದಲ ಬಲಿ.!!

ಪ್ರತಿಧ್ವನಿ ಯಲ್ಲಾಪುರ :  ತಾಲೂಕಿನ ಚವತಿ ಗ್ರಾಮದ ನಿವಾಸಿಯಾಗಿದ್ದ 41 ವರ್ಷದ ಪುರುಷ, ಇವರಿಗೆ ದಿನಾಂಕ 17-06-2026 ರಂದು Infuenza A ವೈರಲ್ ಜ್ವರ/ ಶೀತ ಜ್ವರ/ ಫ್ಲೂ ಎಂದು ಖಚಿತವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 21-06-2026 ಮರಣ ಹೊಂದಿರುತ್ತಾರೆ.

ಇವರು ದಿನಾಂಕ 10-06-2026 ರಂದು ಜ್ವರ ಕಾಣಿಸಿಕೊಂಡ ಕಾರಣ ಉಮ್ಮಚಗಿ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿರುತ್ತಾರೆ ಮತ್ತೆ 12-06-2026 ಜ್ವರ ಕಾಣಿಸಿಕೊಂಡ ಕಾರಣ ಮಂಚಿಕೆರಿ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿರುತ್ತಾರೆ. ದಿನಾಂಕ 16-06-2026 ರಂದು ಜ್ವರ ಸುಸ್ತು ಇತ್ಯಾದಿ ಲಕ್ಷಣಗಳು ಕಂಡು ಬಂದ ಕಾರಣ ದಿನಾಂಕ 16-06-2026 ರಂದು ಶಿರಸಿ ಖಾಸಗಿ ಆಸ್ಪತ್ರೆಯಲ್ಲಿ ಒಳ ರೋಗಿ ವಿಭಾಗದಲ್ಲಿ ಚಿಕಿತ್ಸೆ ನಂತರ ವೈದ್ಯರ ಸಲಹೆ ಮೇರೆಗೆ ದಿನಾಂಕ 17-06-2026 ರಂದು ಮಂಗಳೂರಿನ ಕೆ. ಎಸ್. ಹೆಗಡೆ ಆಸ್ಪತ್ರೆಯಲ್ಲಿ ಒಳ ರೋಗಿ ವಿಭಾಗದಲ್ಲಿ ಚಿಕಿತ್ಸೆಗೆ ಹೋಗಿರುತ್ತಾರೆ ಆದರೆ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 21-06-2026 ರಂದು ಮರಣ ಹೊಂದಿರುವುದಾಗಿ ಸಂಬಂಧಿಕರು ತಿಳಿಸಿರುತ್ತಾರೆ. ದಿನಾಂಕ 18-06-2026 ರಂದು ಆರೋಗ್ಯ ಇಲಾಖೆ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಯವರು ಮನೆ ಹಾಗೂ ಕ್ಷೇತ್ರ ಭೇಟಿ ನೀಡಿ ಮನೆಯ ಇತರ ಸದಸ್ಯರಿಗೆ ತಾಲೂಕ ಆಸ್ಪತ್ರೆ ಯಲ್ಲಾಪುರದಲ್ಲಿ ಇರಿಸಿ ಸೂಕ್ತ ತಪಾಸಣೆಯೊಂದಿಗೆ ಪ್ರತ್ಯೇಕತೆಯ ತುರ್ತು ಕ್ರಮ ವಹಿಸಲಾಯಿತು. ಗ್ರಾಮದಲ್ಲಿ ಸಮೀಕ್ಷೆ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗುತ್ತಿದೆ.


Infuenza A ವೈರಲ್ ಜ್ವರ/ ಶೀತ ಜ್ವರ/ ಫ್ಲೂ ಇದು ಮೂಗು, ಗಂಟಲು ಮತ್ತು ಶ್ವಾಸಕೋಶವನ್ನು ಬಾಧಿಸುವ ಉಸಿರಾಟದ ಸಾಂಕ್ರಾಮಿಕ ಕಾಯಿಲೆಯಾಗಿದೆ.
ಸಾಮಾನ್ಯ ಲಕ್ಷಣಗಳು: ತಿವ್ರವಾದ ಜ್ವರ, ಮೈ-ಕೈ ನೋವು, ಕೆಮ್ಮು, ನೆಗಡಿ, ತಲೆ ನೋವು, ಗಂಟಲು ನೋವು ಮತ್ತು ಸುಸ್ತು.
ಹರಡುವ ವಿಧಾನ: ಸೋಂಕಿತರು ಕೆಮ್ಮಿನದಾಗ ಅಥವಾ ಸೀನಿದಾಗ ಗಾಳಿಯ ಮೂಲಕ ಇತರರಿಗೆ ಹರಡುತ್ತದೆ.
ಚಿಕಿತ್ಸೆ: ಸಾಮಾನ್ಯವಾಗಿ ಇದು ವಿಶ್ರಾಂತಿ ಹಾಗೂ ಹೆಚ್ಹಿನ ದ್ರವ ಆಹಾರ, ನೀರು ಸೇವನೆಯೊಂದಿಗೆ ವೈದ್ಯರಿಂದ ರೋಗ ಲಕ್ಷಣ ಅಧಾರಿತ ಚಿಕಿತ್ಸೆಯಿಂದ ಕಡಿಮೆಯಾಗುತ್ತದೆ.
ತಿವ್ರವಾದ ಉಸಿರಾಟದ ತೊಂದರೆ, ಎದೆ ನೋವು, ನಿರ್ಜಲೀಕರಣ, ಸುಸ್ತು, ಗೊಂದಲ ಕಂಡು ಬಂದಲ್ಲಿ ಹೆಚ್ಹಿನ ತುರ್ತು ಚಿಕಿತ್ಸೆ ಅವಶ್ಯಕತೆ ಇರುತ್ತದೆ. ಕಾರಣ ಸಾರ್ವಜನಿಕರು ಯಾವುದೇ ತರಹದ ಜ್ವರ, ಕೆಮ್ಮು, ನೆಗಡಿ, ಮೈ ಕೈ ನೋವು, ಗಂಟಲು ನೋವು, ಉಸಿರಾಟದ ತೊಂದರೆ, ಸುಸ್ತು ಇತ್ಯಾದಿ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆ/ ತಾಲೂಕ ಆಸ್ಪತ್ರೆ ಭೇಟಿ ನೀಡಿ ಸೂಕ್ತ ತಪಾಸಣೆ ಹಾಗೂ ಚಿಕಿತ್ಸೆ ಪಡೆಯಬೇಕಿದೆ. ಡಾ,ನರೇಂದ್ರ ಪವಾರ್, ತಾಲ್ಲೂಕು ಆರೋಗ್ಯಾಧಿಕಾರಿ , ಆಸ್ಪತ್ರೆ ವೈಧ್ಯಾಧಿಕಾರಿ,ಯಲ್ಲಾಪುರ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ದೇಶದ ಪ್ರಧಾನಿ,ಅರಣ್ಯ ಸಚಿವರು ಮತ್ತು ಸಚಿವಾಲಯದ ಕಾರ್ಯದರ್ಶಿಯವರಿಗೆ ಪಶ್ಚಿಮ ಘಟ್ಟಗಳ ವಿಚಾರದಲ್ಲಿ ಮದ್ಯ ಪ್ರವೇಶಿಸುವಂತೆ ಚಂದ್ರಕಾಂತ ಕೊಚರೇಕರ್ ಮನವಿ

ಪ್ರತಿಧ್ವನಿ ಯಲ್ಲಾಪುರ :  ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸುವ ಸಂಬಂಧ 27-07-2026ರಂದು …

Leave a Reply

Your email address will not be published. Required fields are marked *