Breaking News

ಯಲ್ಲಾಪುರದ ಪದವಿ ವಿದ್ಯಾರ್ಥಿನಿಯರಿಗೆ ರಾಷ್ಟ್ರೀಯ ಸಮ್ಮೇಳನದಲ್ಲಿ ಕೀರ್ತಿ..

ಕೇಬಲ್ ನಾಗೇಶ್, ಯಲ್ಲಾಪುರ..🖋

ಪ್ರತಿಧ್ವನಿ ಯಲ್ಲಾಪುರ :  ಪಟ್ಟಣದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ  ಅಂತಿಮ ವರ್ಷದ ಬಿ.ಎ. ವಿದ್ಯಾರ್ಥಿನಿ ಆಶಾ ಸಿ. ನಾಯಕ್ ಅವರು ಗದಗದ ಕೆ.ಎಲ್‌.ಇ ಜಗದ್ಗುರು ತೋಂಟದಾರ್ಯ ಕಾಲೇಜ್ ನಲ್ಲಿ ಆಯೋಜಿಸಲಾದ ಒಂದು ದಿನದ ರಾಷ್ಟ್ರೀಯ ಸಮ್ಮೇಳನದಲ್ಲಿ 71 ಪ್ರಬಂಧಕರಲ್ಲಿ ಅತ್ಯುತ್ತಮ ಪ್ರಬಂಧ ಪ್ರಸ್ತುತಿಕರಣ ಪ್ರಶಸ್ತಿ ಪಡೆದುಕೊಂಡಿದ್ದು ಕಾಲೇಜಿಗೆ ಮತ್ತು ಯಲ್ಲಾಪುರ ತಾಲೂಕಿಗೆ ಹೆನ್ಮೆ ತ.ದಿರುತ್ತಾಳೆ.

ಆಶಾ ಸಿ ನಾಯಕ್ ರಚಿಸಿದ “ಯಲ್ಲಾಪುರ ತಾಲ್ಲೂಕಿನಲ್ಲಿ ಮಾನವ–ವನ್ಯಜೀವಿ ಸಂಘರ್ಷ ಮತ್ತು ಬೆಳೆ ನಷ್ಟ: ರೈತರ ಅಭಿಪ್ರಾಯ ಹಾಗೂ ನಿರ್ವಹಣಾ ತಂತ್ರಗಳು” ಎಂಬ ಸಂಶೋಧನಾ ಪ್ರಬಂಧವು ಸಮಾಜಮುಖಿ ಮಹತ್ವದಿಂದ ಮೆಚ್ಚುಗೆ ಪಡೆದಿದ್ದು, ಪರಿಹಾರ ವಿಳಂಬ, ಮೌಲ್ಯಮಾಪನದ ಕೊರತೆ ಹಾಗೂ ಅಪರ್ಯಾಪ್ತ ಪರಿಹಾರ ರೈತರ ಮೇಲೆ ಭಾರ ಹೆಚ್ಚಿಸುತ್ತಿದೆ ಎಂಬುದನ್ನು ತಿಳಿಸಿದೆ. ಪ್ರಬಂಧದ ನೀತಿ ಶಿಫಾರಸುಗಳಲ್ಲಿ ಬೆಳೆ ನಷ್ಟವನ್ನು Pradhan Mantri Fasal Bima Yojana (ಪಿಎಂಎಫ್‌ಬಿವೈ) ಯೋಜನೆಗೆ ಸೇರಿಸುವುದು, ಡಿಜಿಟಲ್ ಮೌಲ್ಯಮಾಪನ, ತ್ವರಿತ ಪರಿಶೀಲನಾ ತಂಡಗಳು ಹಾಗೂ ಸಮುದಾಯ ಆಧಾರಿತ ತಡೆ ಕ್ರಮಗಳನ್ನು ಸೂಚಿಸಲಾಗಿದೆ. ಈ ವಿಷಯದ ಮೇಲೆ ಅವರ ಸಂಶೋಧನಾ ಲೇಖನವು ಪ್ರಕಟವಾಗಿರುವುದು ಗಮನಾರ್ಹವಾಗಿದೆ.

ಇದೇ ವೇಳೆ, ದಿವ್ಯಾ ಜಿ. ಗೌಡ ಅವರು “ಯಲ್ಲಾಪುರ ತಾಲ್ಲೂಕಿನ ಸಿದ್ದಿ ಸಮುದಾಯದಲ್ಲಿ ಡಿಜಿಟಲೀಕರಣ ಮತ್ತು ಆರ್ಥಿಕ ಸಬಲೀಕರಣ” ಎಂಬ ಪ್ರಬಂಧವನ್ನು ಪ್ರಸ್ತುತಪಡಿಸಿ ಗಮನ ಸೆಳೆದರು. ಅವರ ಅಧ್ಯಯನವು ಡಿಜಿಟಲ್ ತಂತ್ರಜ್ಞಾನಗಳ ಮೂಲಕ ಆದಾಯ ವೃದ್ಧಿ ಮತ್ತು ಆರ್ಥಿಕ ಒಳಗೊಳ್ಳುವಿಕೆಯ ಮಹತ್ವವನ್ನು ವಿವರಿಸುತ್ತದೆ. ಇವರ ಸಂಶೋಧನಾ ಲೇಖನವೂ ಪ್ರಕಟಗೊಂಡಿದೆ.

ಈ ಇಬ್ಬರು ವಿದ್ಯಾರ್ಥಿನಿಯರು ಡಾ. ಓಂಪ್ರಕಾಶ ನಾಯಕ್ (ಐಕ್ಯುಎಸಿ ಸಂಯೋಜಕರು) ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದಾರೆ. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಆರ್. ಡಿ. ಜನಾರ್ಧನ್ ಅವರು ವಿದ್ಯಾರ್ಥಿಗಳಿಗೆ ಅಗತ್ಯ ಬೆಂಬಲ ಮತ್ತು ಪ್ರೋತ್ಸಾಹ ನೀಡಿದ್ದು, ಈ ಸಾಧನೆಗೆ ಪ್ರಮುಖ ಕಾರಣರಾಗಿದ್ದಾರೆ.

ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಯಲ್ಲಾಪುರವು ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ ಬೆಳೆಸುವ ದಿಸೆಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಮ್ಮೇಳನಗಳು, ಕಾರ್ಯಾಗಾರಗಳು ಹಾಗೂ ಐಕ್ಯುಎಸಿ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದೆ.

ಈ ಸಾಧನೆ ಮಹಾವಿದ್ಯಾಲಯದ ಶೈಕ್ಷಣಿಕ ಗುಣಮಟ್ಟ ಮತ್ತು ಸಂಶೋಧನಾ ವಾತಾವರಣಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಸಣ್ಣ ಪಾನಿಗುಂಡಿ ಜನರ ದಣಿವಾರಿಸಿ ಪ್ರತಿ ಮನೆಗು ಭಗೀರಥನಾದ ಕೊಡುಗೈ ದಾನಿ ಬಾಲು ನಾಯಕ್.

ಪ್ರತಿಧ್ವನಿ ಯಲ್ಲಾಪುರ : ಬಹು ದಶಕಗಳಿಂದ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿ ಇತ್ತೀಚೆಗೆ ಪ್ರತಿಧ್ವನಿ ಯಲ್ಲಾಪುರ ನ್ಯೂಸ್ ಹಾಗು ಕೆಲವು ಮಾಧ್ಯಮಗಳಲ್ಲಿ …

Leave a Reply

Your email address will not be published. Required fields are marked *