
ಪ್ರತಿಧ್ವನಿ ಯಲ್ಲಾಪುರ:ಭಾರತೀಯ ಜೀವನ ಪದ್ಧತಿಯ ತಿರುಳು ತ್ಯಾಗ ಮತ್ತು ಸೇವೆ. ನಮ್ಮ ಜೀವನ ಅದಕ್ಕಾಗಿ ಮುಡಿಪಿರಬೇಕು ಎಂದು ರಾಷ್ಟ್ರೀಯ ಸವಯಂಸೇವಕ ಸಂಘದ ಕರ್ನಾಟಕದ ಪ್ರಚಾರ ವಿಭಾಗದ ಪ್ರಮುಖ ಅರುಣ ಕುಮಾರ ಹೇಳಿದರು.

ವಿಸ್ವದರ್ಶನ ಸೇವಾ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮತ್ತು ಗೋವರ್ಧನ ಗೋಶಾಲೆ ಕರಡೊಳ್ಳಿಯ ಆಶ್ರಯದಲ್ಲಿ ನಡೆದ ಭಾರತೀಯ ಜೀವನ ಶಿಕ್ಷಣ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು
ನಮಗೆ ಆತಂಕ ಒತ್ತಡಗಳಿಲ್ಲ. ಹಿಂದೆ ಏನನ್ನು ಮಾಡಿದ್ದವೋ ಅದನ್ನು ಅನುಭವಿಸುತ್ತಾರೆ. ಭಾರತ ಇನ್ನೊಬ್ಬರಿಗೆ ತೊಂದರೆ ಕೊಟ್ಟ ದೇಶವಲ್ಲ. ಇದರಿಂದ ಜಗತ್ತಿನಲ್ಲಿ ಭಾರತದ ಕುರಿತು ಸದ್ಭಾವನೆ ಇದೆ. ಶಿಬಿರದಲ್ಲಿ ಕಲಿತ ಒಳ್ಳೆಯಗುಣಗಳನ್ನು ಹೊರಗೆಲ್ಲೂ ಸಿಗುವುದಿಲ್ಲ. ಇನ್ನೊಬ್ಬರಿಗೆ ಹೇಳಿದರೆ ನಮಗೆ ಅದು ಸಿದ್ಧಿಸುತ್ತದೆ. ನಮ್ಮಲ್ಲಿರುವ ಗಣಗಳೇ ನಮಗೆ ಅಲಂಕಾರ. ಭವಿಷ್ಯದಲ್ಲಿ ನಮ್ಮ ಜೀವನ ಭಾರತೀಯ ಮೌಲ್ಯಗಳ ಆಧಾರದ ಮೇಲಿರಬೇಕು. ಭಾರತೀಯ ಜೀವನ ಪದ್ಧತಿಯ ತಿರುಳು ತ್ಯಾಗ ಮತ್ತು ಸೇವೆ. ಇಂದು ವಿದ್ಯಾರ್ಥಿಗಳ ಅಂಕಗಳಿಗಿಂತ ಹೆಚ್ಚಾಗಿ ಸಮಾಜದಲ್ಲಿ ಹೇಗಿರುತ್ತಾನೆ ಎನ್ನುವುದರ ಮೂಲಕ ಅಳೆಯುತ್ತಾರೆ. ನಾವು ಒಟ್ಟಾಗಿ ಒಂದು ಸಮಾಜವಾಗಿ ನಮ್ಮ ತನವನ್ನು ಬೆಳೆಸುವ ಪ್ರಯತ್ನ ಮಾಡಬೇಕು. ಗುಣ ಸಹಿತ ಹಣ ಇರಬೇಕು, ಗುಣರಹಿತರಾಗಬಾರದು. ಹಿರಿಯರು, ಭಗವಂತನ ಬಗ್ಗೆ ಶ್ರದ್ದೆ ಭಕ್ತಿ ಇರಬೇಕು. ಪ್ರಕೃತಿಯನ್ನು ಚೆನ್ನಾಗಿ ಇಟ್ಟುಕೊಂಡಹಾಗೆ ಜೀವನವೂ ಉತ್ತಮವಾಗುತ್ತದೆ. ಜೀವನದಲ್ಲಿ ತಾಳ್ಮೆ ಕಳೆದುಕೊಳ್ಳಬಾರದು. ಕಷ್ಟ ಸಮಸ್ಯೆಗಳನ್ನೆದುರಿಸಿ ಶಿಸ್ತು ಸಂಯಮ ತಾಳ್ಮೆ ಮೊದಲಾದವುಗಳ ಜೀವನದಲ್ಲಿ ಇಟ್ಟುಕೊಂಡರೆ ಯಶಸ್ಸುಗಳಿಸಲು ಸಾಧ್ಯ. ಜೀವನದಲ್ಲಿ ಉತ್ತಮರ ಸಹವಾಸ, ಸಂಸ್ಕಾರ ಇರಬೇಕು. ಕಲಿಕೆ ಜೀವನ ಪೂರ್ತಿ ಇರಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಶಿಬಿರದ ಆಯೋಜನೆಯ ಮೂಲಕ ಆಯೊಜಕರೂ ಕಲಿತಿದ್ದಾರೆ. ನಮ್ಮ ಸಂಸ್ಕೃತಿ ಸಂಸ್ಕಾರಗಳು ದೂರವಾಗುತ್ತಿರುವ ಸಂದರ್ಭದಲ್ಲಿ ಅದನ್ನು ಉಳಿಸಲೇ ಬೇಕು ಎನ್ನುವ ಚಿಂತನೆಯಲ್ಲಿ ಈ ಶಿಬಿರ ಆರಂಭವಾಯಿತು. ಶಿಬಿರ ಇಲ್ಲಿಗೆ ಮುಗಿದಿರಬಹುದು ಆದರೆ ಇಲ್ಲಿ ಕಲಿತ ವಿಚಾರಗಳನ್ನು ಜೀವನ ಪರ್ಯಂತ ಉಳಿಸಿಕೊಂಡವರು ಶ್ರೇಷ್ಠ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ ಎಂದು ಹೇಳಿದರು.

ಶಿಭಿರದ ಸಂಘಟನೆ ವತಿಯಿಂದ ಸಂಘ ಪರಿವಾರದ ಪ್ರಮುಖ ಅರುಣ್ ಕುಮಾರ್ ಜಿ ಅವರ‌್ನು ಗೌರವಿಸಲಾಯಿತು.ಶಿಬಿರದ ಸಂಚಾಲಕ ಟಿ.ಶಂಕರ ಭಟ್, ವಿಶ್ವ ಹಿಂದೂ ಪರಿಷತ್ತ ಯಲ್ಲಾಪುರದ ಅಧ್ಯಕ್ಷ ಗಜಾನನ ನಾಯ್ಕ್ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ರಾಮಕೃಷ್ಣ ಕವಡಿಕೆರೆ ನಿರ್ವಹಿಸಿದರೆ ಶಿಬಿರ ಪ್ರಮುಖ ಸಮರ್ಥ ಗಾಂವ್ಕರ್ ಸ್ವಾಗತಿಸಿದರು. ವಿಶ್ವದರ್ಶನ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ.ಡಿ.ಕೆ.ಗಾಂವ್ಕರ್ ವಂದಿಸಿದರು.







Prathidvani Yellapura