Breaking News

ಆನಗೋಡು “ಶ್ರೀ ಗೋಪಾಲಕೃಷ್ಣ ಸ್ವಾಮಿ ” ದೇಗುಲದಲ್ಲಿ ಏ,8 ರಿಂದ 11 ರ ವರೆಗೆ ಅಷ್ಟಬಂಧ ಮಹೋತ್ಸವ.

ಪ್ರತಿಧ್ವನಿ ಯಲ್ಲಾಪುರ :   ಸುಮಾರು 800ವರ್ಷಗಳಷ್ಟು ಹಳೆಯ ಕದಂಬರ ಕಾಲದಲ್ಲಿ ನಿರ್ಮಾಣಗೊಂಡ ಶಿಲಾಮಯ ಐತಿಹಾಸಿಕ ದೇವಸ್ಥಾನ ಯಲ್ಲಾಪುರ ತಾಲೂಕಿನ ಆನಗೋಡಿನ ಗೋಪಾಲಕೃಷ್ಣ ಸ್ವಾಮಿ ದೇವಾಲಯವಾಗಿದೆ. ಸುಧೀರ್ಘ ತಪಸ್ಸು ಮಾಡಿದ ಸಾಧಕ ಗುರುಗಳ ಸಮಾಧಿಯೂ ದೇಗುಲದ ಪರಿಸರದಲ್ಲಿದ್ದು ಬೇಡಿ ಬಂದ ಭಕ್ತರ ಇಷ್ಟಾರ್ಥಗಳನ್ನು ಸಿದ್ದಿಸುತ್ತಾ ಪ್ರಖ್ಯಾತಿ ಪಡೆದಿದೆ. ಏ.08ರಿಂದ ಏ.11ರವರೆಗೆ ನಾಲ್ಕು ದಿನಗಳ ಕಾಲ ಅಷ್ಟಬಂಧ ಮಹೋತ್ಸವವನ್ನು ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ದಿವ್ಯ ಆಶೀರ್ವಾದದೊಂದಿಗೆ ನೆರವೇರಲಿದ್ದು ಭಕ್ತ ಸಮೂಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪ್ರಸಾದಾನುಗ್ರಹಕ್ಕೆ ಪಾತ್ರರಾಗಬೇಕೆಂದು ದೇವಾಲಯದ ಮೊಕ್ತೇಸರರಾದ ಗಣಪತಿ ಮಾನಿಗದ್ದೆ ಹೇಳಿದರು.

ಅವರು ಗುರುವಾರ , ತಾಲೂಕಿನ ಆನಗೋಡಿನ ಗೋಪಾಲಕೃಷ್ಣ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಅಷ್ಟಬಂಧ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.


ಗೋಕರ್ಣ ಕ್ಷೇತ್ರದ ತಾಂತ್ರಿಕರಾದ ವಿ.ಗಣಪತಿ ಗಜಾನನ ಹಿರೇ ನೇತೃತ್ವದಲ್ಲಿ ಅಷ್ಟಬಂಧ ಪೂಜಾ ಕೈಂಕರ್ಯಗಳು ನಡೆಯಲಿದೆ. ಏ.8ರ ಚೈತ್ರ ಕೃಷ್ಣ ಷಷ್ಠಿ ಬುಧವಾರ ಬ್ರಹ್ಮಕೂರ್ಚ ಹವನದಿಂದ ಪ್ರಾರಂಭಗೊಂಡು ನಾಲ್ಕು ದಿನಗಳ ಕಾಲ ವಿವಿಧ ವಿಶೇಷ ಧಾರ್ಮಿಕ ವಿಧಿ ವಿಧಾನಗಳು ದೇಗುಲದ ಆವರಣದಲ್ಲಿ ಜರುಗಲಿದ್ದು ಏ.11ರ ಶನಿವಾರ ಮುಕ್ತಾಯಗೊಳ್ಳಿದೆ. ಭಕ್ತರು ಅಷ್ಟಬಂಧದ ನಾಲ್ಕೂ ದಿನಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕೆಂದು ಸುದ್ಧಿಗೋಷ್ಠಿಯಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ದಾಮೋದರ ಗಾಂವ್ಕರ, ವಡಗೇರಿಪಾಲ, ವಿಶ್ವೇಶ್ವರ ಮಾನಿಗದ್ದೆ, ನಾಗೇಂದ್ರ ಭಟ್ಟ, ಕೆ ಎಸ್ ಭಟ್ಟ, ನರಸಿಂಹ ಗಾಂವ್ಕರ , ಸತ್ಯನಾರಾಯಣ ಹೆಗಡೆ , ಶ್ರೀಕಾಂತ ಹೊನ್ನೆಬೈಲ, ಗಣಪತಿ ದೋಣಿಗದ್ದೆ ಉಪಸ್ಥಿತರಿದ್ದರು.


ದೇಗುಲದ ಆವರಣದಲ್ಲಿ ವಿಶಾಲವಾದ ಸ್ಥಳದಲ್ಲಿ ಕಾಲದ ಅಗತ್ಯಕ್ಕೆ ತಕ್ಕಂತೆ ನಿರ್ಮಿಸಲಾದ ಕಲ್ಯಾಣ ಮಂಟಪದಲ್ಲಿ ಮದುವೆ, ಮುಂಜಿ, ಸಭೆ, ಸಮಾರಂಭಗಳು ನಿರಂತರ ನಡೆಯುತ್ತಿದ್ದು ಹೋಮ-ಹವನ, ಸಾಂಸ್ಕೃತಿಕ , ಸಂಗೀತ , ಯಕ್ಷಗಾನ ಮುಂತಾದ ಕಾರ್ಯಕ್ರಮಗಳು ನಡೆದುಕೊಂಡು ಬರುತ್ತಿವೆ. ದೇವಸ್ಥಾನದ ಅಧೀನದಲ್ಲಿರುವ ಸುದರ್ಶನ ಸೇವಾ ಪ್ರತಿಷ್ಠಾನವು ಉಚಿತ ಗ್ರಂಥಾಲಯ, ಸರ್ಜಿಕಲ್ ಸೇವಾ ವಿಭಾಗ, ಯೋಗ & ಸಾಂಸ್ಕೃತಿಕ, ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ.
ಈ ನಡುವೆ ಶಿಲಾಮಯ ಕಟ್ಟಡವು ಮಳೆ, ಗಾಳಿ, ಸಿಡಿಲುಗಳಿಂದ ಶಿಥಿಲವಾಗಿದ್ದು ಅದರ ರಕ್ಷಣೆಗಾಗಿ ಆಧುನಿಕ ಸಾಧನಗಳಿಂದ ಚಂದ್ರಶಾಲೆ ಸೇರಿದಂತೆ ಹೊಸದಾಗಿ ಮೇಲ್ಛಾವಣಿಯನ್ನು ನಿರ್ಮಿಸಲಾಗುತ್ತಿದೆ. ದೇಗುಲದ ಆವರಣದಲ್ಲಿ ನೆಲೆ ನಿಂತಿರುವ ವೀರಭದ್ರ ಮತ್ತು ಮಾರುತಿ ದೇವರಿಗೆ ಪ್ರತ್ಯೇಕ ಗುಡಿ ನಿರ್ಮಿಸಿ ಪುನಃ ಪ್ರತಿಷ್ಠೆ ಮಾಡಲಾಗುತ್ತಿದೆ.
ಈ ಎಲ್ಲಾ ಕಾರ್ಯಗಳಿಗೆ ಅಂದಾಜು ಸುಮಾರು 1 ಕೋಟಿ ರೂಗಳ ಕ್ರಿಯಾ ಯೋಜನೆ ಸಿದ್ಧಗೊಂಡು ಕಾರ್ಯಾರಂಭವಾಗಿದೆ. ದೇಗುಲಕ್ಕೆ ಯಾವುದೇ ಹೆಚ್ಚಿನ ಆದಾಯ ತರುವ ವಿಶೇಷ ವ್ಯವಸ್ಥೆ ಇಲ್ಲದಿರುವ ಕಾರಣ ಆಸ್ತಿಕ ಬಂಧುಗಳು ಈ ಮಹಾತ್ಕಾರ್ಯಕ್ಕೆ ಕೈಲಾದ ಆರ್ಥಿಕ ನೆರವನ್ನು ನೀಡಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ಭಕ್ತ ಬಂಧುಗಳಲ್ಲಿ ಕೋರಿಕೆ ಸಲ್ಲಿಸಿದೆ. ದಾನಿಗಳು ದೇಣಿಗೆ ನೀಡುವ ವಿಚಾರವಾಗಿ 944895657 ಹಾಗೂ 7676847066ಗೆ ಸಂಪರ್ಕಿಸಬಹುದಾಗಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಬಿಜೆಪಿ ವತಿಯಿಂದ ಸಂವಿಧಾನ ಶಿಲ್ಪಿ ಡಾ,ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ..

ಪ್ರತಿಧ್ವನಿ ಯಲ್ಲಾಪುರ: ಭಾರತದ ಸಂವಿಧಾನ ಶಿಲ್ಪಿ,ಸಾಮಾಜಿಕ ನ್ಯಾಯದ ಹರಿಕಾರರು,ಶೋಷಿತರ ದ್ವನಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ನಿಮಿತ್ತ ಭಾರತೀಯ ಜನತಾ ಪಾರ್ಟಿ …

Leave a Reply

Your email address will not be published. Required fields are marked *