
ಕೇಬಲ್ ನಾಗೇಶ್, ಯಲ್ಲಾಪುರ..🖋
ಪ್ರತಿಧ್ವನಿ ಯಲ್ಲಾಪುರ : ವಿದ್ಯೆ ಸಾಧಕರ ಸ್ವತ್ತು ಎಂಬುದು ಸತ್ಯದ ಮಾತು ಅದಕ್ಕೆ ಜ್ವಲಂತ ನಿದರ್ಶನ ಎಂದರೆ ಗುರುವಾರ ಪ್ರಕಟಗೊಂಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಪ್ರತಿಷ್ಠಿತ ವಿದ್ಯಾ ಸಂಸ್ಥೆ ವೈಟಿಎಸ್ಎಸ್ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ತನುಶ್ರೀ ಕಲ್ಗುಟಕರ್ ಎಂಬ ವಿದ್ಯಾರ್ಥಿನಿ 600 ಕ್ಕೆ 587 ಅಂಕ ಪಡೆಯುವ ಮೂಲಕ 97.83% ಪಡೆದು ಪ್ರಥಮ ಸ್ಥಾನ ಗಳಿಸಿರುವುದು ಅತ್ಯಂತ ಶ್ಲಾಘನೀಯ.

ಕಲಿಯುವ ವಿದ್ಯೆಗೆ ಧರ್ಮ,ಜಾತಿ,ಅಂತಸು ಇದಾವುದು ಲೆಕ್ಕಕ್ಕೆ ಬರದೆ ನಿಷ್ಟೆ ಮತ್ತು ಕಠಿಣ ಪರಿಶ್ರಮ ಹಾಗು ಗುರುಗಳ ಮಾರ್ಗದರ್ಶನ ಪೊಷಕರ ಪ್ರೋತ್ಸಹ ಇದ್ದಾಗ ಎಲ್ಲವು ಸಾದ್ಯ
ಪ್ರಥಮ ಸ್ಥಾನ ಗಳಿಸಿರುವ ತನುಶ್ರೀ ತಂದೆ ಗ್ಯಾಸ್ ಹನುಮಂತ ಎಂದೇ ಚಿರಪರಿಚಿತರು. ಕಾರಣ ಮೂಲತಃ ಆಲಮಟ್ಟಿ ಊರಿನವರಾದ ಹನುಮಂತು ತಮ್ಮ ಜೀವನ ನಿರ್ವಹಣೆಗೆಂದು ಕಳೆದ 20 ವರ್ಷಗಳ ಹಿಂದೆ ಯಲ್ಲಾಪುರಕ್ಕೆ ಬಂದು ನೆಲೆಸಿ ಭಾರತ್ ಗ್ಯಾಸ್ ಏಜೆನ್ಸಿಯಲ್ಲಿ ಮನೆಮನೆಗೆ ಗ್ಯಾಸ್ ತಲುಪಿಸುವ ಕಾಯಕದಲ್ಲಿ ತೊಡಗಿಕೊಂಡು ಯಲ್ಲಾಪುರದ ಜನರಿಗೆ ಗ್ಯಾಸ್ ಹನುಮಂತ ಎಂದೆ ಗುರುತಿಸುತ್ತಾರೆ. ಪತ್ನಿ ಶಾಂತಾ ಮತ್ತು ಎರಡು ಹೆಣ್ಣು ಒಂದು ಗಂಡು ಮಗನೊಂದಿಗೆ ಪುಟ್ಟ ಸಂಸಾರ ನಡೆಸುತ್ತಿದ್ದು ಕಾರಣಾಂತರದಿಂದ ಗ್ಯಾಸ್ ಏಜೆನ್ಸಿ ವೃತ್ತಿ ಬಿಟ್ಟು ಸದ್ಯ ರಾಮಕೃಷ್ಣ ಸ್ಟೋಸ್೯ ನಲ್ಲಿ ವೃತ್ತಿ ಮುಂದುವರೆಸಿದ್ದಾರೆ. ಮಗಳ ಈ ಸಾಧನೆಗೆ ತನ್ನ ಶ್ರಮದ ಫಲ ಸಾರ್ಥಕವಾಯಿತು ಎಂಬ ಹೆಮ್ಮೆಯ ಭಾವ ಅವರ ಮಾತಿನಲಿತ್ತು.
ಒಟ್ಟಿನಲ್ಲಿ ತಂದೆಯ ಶ್ರಮಕ್ಕೆ ಮಗಳು ಶೈಕ್ಷಣಿಕ ಸಾಧನೆ ಮೂಲಕ ಕೃತಜ್ಞತೆ ಸಲ್ಲಿಸಿರುವುದು ಇತರೆ ಬಡ ಮದ್ಯಮವರ್ಗದ ಕುಟುಂಬದ ಮಕ್ಕಳಿಗೆ ಸ್ಪೂರ್ತಿಯಾಗಬಹುದು ಎಂಬುದು ಈ ಬರಹದ ಉದ್ದೇಶವಾಗಿದೆ.
ಸ್ಥಿತಿವಂತರ ಮಕ್ಕಳ ಸಾಧನೆಗೆ ಸಾಕಷ್ಟು ಆರ್ಥಿಕ ಬೆಂಬಲ ವಿಶೇಷ ತರಬೇತಿಗಳ ವ್ಯವಸ್ಥೆ ಎಲ್ಲವು ಇದ್ದಾಗ ಅದು ಅಷ್ಟಾಗಿ ಪರಿಣಾಮಕಾರಿ ಅನ್ನಿಸುವುದಿಲ್ಲ ಹಾಗೆಂದು ಸಾಧನೆ ಯಾರೆ ಮಾಡಿದರು ಅಭಿನಂದನೀಯವೆ ಆದರೆ ಕಷ್ಟಕರ ಜೀವನದ ಕುಟುಂಬದಲ್ಲಿ ಇದ್ದು ಸಾಧಿಸುವುದು ನಿಜವಾದ ಸಾಧನೆಯೆ ಸರಿ.ಬದುಕಿನ ಜಂಜಾಟದಲ್ಲಿ ಅದೆಷ್ಟೊ ಪ್ರತಿಭೆಗಳು ಕಳೆದು ಹೋಗಿ ಬಿಡುತ್ತವೆ ಅಂತಹ ಸಂದಿಗ್ದತೆಯ ನಡುವೆಯು ಸಾಧನೆ ಮಾಡುವುದು ಗ್ರೇಟ್ ಅಲ್ವ…..
ಮಕ್ಕಳನ್ನು ಕಷ್ಟದಲ್ಲು ವಿದ್ಯಾಬ್ಯಾಸಕ್ಕೆ ಕೊರತೆಯಾಗದಂತೆ ನೋಡಿಕೊಂಡಿದ್ದೇವೆ.ಮಗಳ ಈ ಸಾಧನೆ ಪ್ರತಿ ತಂದೆ ತಂದೆತಾಯಿಯರಿಗೆ ಕೊಡುವ ಬಹುಮಾನದಂತೆ ಅತ್ಯಂತ ಸಂತಸ ತಂದಿದೆ ಮುಂದಿನ ವಿದ್ಯಾಬ್ಯಾಸಕ್ಕೆ ಸರ್ಕಾರದಿಂದ ಅಥವ ಸಂಘ ಸಂಸ್ಥೆಗಳಿಂದ ಆರ್ಥಿಕ ಸಹಕಾರ ದೊರೆತರೆ ಇನ್ನಷ್ಟು ಸಾಧನೆಗೆ ಸಹಾಯವಾಗಲಿದೆ.
ಹನುಮಂತ ಕಲ್ಗುಟಕರ್, ಶಾಂತಾಕುಮಾರಿ ಕಲ್ಗುಟಕರ್ ಪೋಷಕರು..
ನನಗೆ ಅತಿ ಹೆಚ್ಚು ಅಂಕ ಬರಲು ನನ್ನ ಕಲಿಕೆಗೆ ಬಲ ತುಂಬಿದ ವೈಟಿಎಸ್ಎಸ್ ಸಂಸ್ಥೆಯ ಗುರುಗಳು, ಕಷ್ಟದಲ್ಲಿಯು ನನ್ನ ವಿದ್ಯಾಬ್ಯಾಸಕ್ಕೆ ಪ್ರೋತ್ಸಾಹಿಸುತ್ತಿರುವ ನನ್ನತಂದೆತಾಯಿಗೆ ನನ್ನ ವಂದನೆ. ಭವಿಷ್ಯದಲ್ಲಿ ಬ್ಯಾಂಕಿಂಗ್ ಸೆಕ್ಟರ್ ನಲ್ಲಿ ಮುಂದುವರೆಯಬೇಕೆಂಬ ಹಂಬಲವಿದ್ದು ಗುರುಹಿರಿಯರ ಮಾರ್ಗದರ್ಶನ ಪಡೆಯುತ್ತೇನೆ.
ತನುಶ್ರೀ ಕಲ್ಗುಟಕರ್, ವಿದ್ಯಾರ್ಥಿನಿ.




Prathidvani Yellapura