
ಪ್ರತಿಧ್ವನಿ ಯಲ್ಲಾಪುರ : ಹನುಮಾನ ಜಯಂತಿಯ ಅಂಗವಾಗಿ ಗುರುವಾರ ತಾಲೂಕಿನ ವಿವಿದೆಡೆಯಲ್ಲಿ ಮಾರುತಿಗೆ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಲಾಯಿತು.

ವಿಶೇಷವಾಗಿ ಪಟ್ಟಣದ ತಿಲಕ್ ಚೌಕ್ ನಲ್ಲಿ ಮಾರುತಿಗೆ ವಿಶೇಷ ಅಲಂಕಾರ ಪೂಜೆ ಸಲ್ಲಿಸಿ ಪ್ರಸಾದವಿತರಣೆ ಜರುಗಿತು.

ಶಾಸಕ ಶಿವರಾಮ ಹೆಬ್ಬಾರ್ ಅವರು ತಾಲ್ಲೂಕಿನ ಅರಬೈಲ್ ಗ್ರಾಮದ ಶ್ರೀ ಮಾರುತಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಹನುಮಾನ ಜಯಂತಿ ಅಂಗವಾಗಿ ನಡೆಯುವ ಪಲ್ಲಕ್ಕಿ ಹೊರುವ ಮೂಲಕ ಉತ್ಸವದಲ್ಲಿ ಪಾಲ್ಗೊಂಡು, ದೇವರ ದರ್ಶನವನ್ನು ಪಡೆದು ಕ್ಷೇತ್ರದ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು.






Prathidvani Yellapura