
ಪ್ರತಿಧ್ವನಿ ಯಲ್ಲಾಪುರ : ಪಟದಟಣದ ಹೊರವಲಯ ಮಗೋಡು ಕ್ರಾಸ್ ಸಮೀಪ ಬೈಕ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದು ಹಿಂಬದಿ ಸವಾರನಿಗೆ ಗಂಭೀರ ಗಾಯಗಳಾಗಿದ್ದು. ಲಾರಿ ನಿಲ್ಲಿಸದೆ ಸ್ಥಳದಿಂದ ಕಾಲ್ಕಿತ್ತ ಲಾರಿ ಚಾಲಕನ ಮೇಲೆ ದೂರು ದಾಖಲಾಗಿದೆ.

ಅಂಕೊಲಾ ತಾಲೂಕಿನ ಹಳವಳ್ಳಿ ನಿವಾಸಿ ದೇವೇಂದ್ರ ಸೀತಾರಾಮ ಗೌಡ ( 21) ಎಂಬಾತನೆ ಮೃತ ಬೈಕ್ ಸವಾರನಾಗಿದ್ದು ಕಳಚೆ ನಿವಾಸಿ ವಿಜೇತ ಪ್ರೇಮಾನಂದ ಗೌಡನೆ ಗಾಯಗೊಂಡ ಹಿಂಬದಿ ಸವಾರನಾಗಿದ್ದಾನೆ.
ಗುರುವಾರ ರಾತ್ರಿ ಯಲ್ಲಾಪುರದ ಕಡೆಯಿಂದ ಬಳ್ಳಾರಿ – ಕಾರವಾರ ರಾಷ್ಟ್ರೀಯ ಹೆದ್ದಾರಿ ಮಾಗೋಡು ತಿರುವಿನ ಬಳಿ ಎಡಬದಿಯಿಂದ ಬೈಕ್ ಚಲಾಯಿಸಿ ತೆರಳುತ್ತಿರುವ ವೇಳೆಯಲ್ಲಿ ಎದುರಿನಿಂದ ಅಜಾಗರೂಕತೆಯಿಂದ ಅತಿವೇಗವಾಗಿ ಲಾರಿ ಚಲಾಯಿಸಿಕೊಂಡು ಬಂದ ಚಾಲಕ ಏಕಾಏಕಿ ಬೈಕ್ ಗೆ ಮುಖಾಮುಖಿ ಗುದ್ದಿದ್ದು ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾನೆ,ಹಿಂಬದಿ ಕುಳಿತವನಿಗೆ ಗಂಭೀರ ಗಾಯಗಳಾಗಿವೆ ಇಂತಹ ಸಂದರ್ಭದಲ್ಲಿ ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸುವುದಕ್ಕಾದರು ಲಾರಿ ಚಾಲಕ ಸಹಕರಿಸಬೇಕಿತ್ತು ಅದನ್ನು ಬಿಟ್ಡು ಆತ ಪರಾರಿಯಾಗಿದ್ದಾನೆ. ಆತನ ಮೇಲೆ ಕ್ರಮ ಜರುಗಿಸುವಂತೆ ಮೃತನ ಕಡೆಯವರು ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಯಲ್ಲಾಪುರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


Prathidvani Yellapura